ರಾಯಚೂರು: ಸಾಮಾಜಿಕ ಜಾಲದಲ್ಲಿ ಇಬ್ಬರು ಅಭ್ಯರ್ಥಿಗಳು
ರಾಯಚೂರು, ಮಾರ್ಚ್ 21- ಹಾಲಿ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಇಬ್ಬರು ಪ್ರಮುಖ ರಾಜಕಾರಣಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರನ್ನು ಯಶಸ್ವಿಯಾಗಿ ತಲುಪುತ್ತಿದ್ದಾರೆ.
ರಾಯಚೂರಿನ ಕಾಂಗ್ರೆಸ್ ಅಭ್ಯರ್ಥಿ ಬಿವಿ ನಾಯ್ಕ್ ಮತ್ತು ಬಿಜೆಪಿ ಅಭ್ಯರ್ಥಿ ಕೆ ಶಿವನಗೌಡ ನಾಯ್ಕ್ ಅವರುಗಳು ತಮ್ಮ Facebook ಖಾತೆಗಳ ಮೂಲಕ ಸಕ್ರಿಯವಾಗಿ ಜನರನ್ನು ತಲುಪುತ್ತಿದ್ದಾರೆ. ಅಂದಹಾಗೆ 2009ರ ಚುನಾವಣೆಯಲ್ಲಿ ಬಿಜೆಪಿಯಿಂದ ಸಣ್ಣ ಫಕೀರಪ್ಪ ಅವರು ಜಯಶಾಲಿಯಾಗಿದ್ದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಕಾಣಬೇಕೆಂಬ ಹಂಬ ಹೊತ್ತ ಪ್ರಧಾನಿ ಮತ್ತು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಲ್ಲಿ ಅಖಂಡ ನಿಷ್ಠೆ ತೋರಿರುವ ಅವರು ಪರಸ್ಪರ ಎದುರಾಳಿಗಳು. ಬಿ ವಿ ನಾಯ್ಕ್ ಮತ್ತು ಶಿವನಗೌಡ ನಾಯ್ಕ್ ಇಬ್ಬರೂ ಫೇಸ್ ಬುಕ್ ಗಳಲ್ಲಿ ತಮ್ಮ statusಗಳನ್ನು ನಿರಂತರವಾಗಿ update ಮಾಡುತ್ತಿದ್ದಾರೆ. ಮತ ಯಾಚನೆಯೂ ಭರ್ಜರಿಯಾಗಿ ನಡೆಸಿದ್ದಾರೆ.
ಗಮನಾರ್ಹವೆಂದರೆ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಸಾಕ್ಷರತಾ ಪ್ರಮಾಣ ಮತ್ತು ಇಂಟರ್ನೆಟ್ ಬಳಕೆ ಪ್ರಮಾಣ ಎರಡೂ ನಿರಾಶಾದಾಯಕವಾಗಿವೆ. Facebook ಖಾತೆಗಳ ಮೂಲಕ ''ತಮ್ಮ ಮತದಾರರನ್ನು'' ತಲುಪುವುದು ದೂರದ ಮಾತು ಎಂಬುದನ್ನು ಇಬ್ಬರೂ ಒಪ್ಪುತ್ತಾರೆ. ಆದರೂ ಫೇಸ್ ಬುಕ್ ಪ್ರಯಫಗ ನಡೆಸಿರುವುದು ಕುತೂಹಲಕಾರಿಯಾಗಿದೆ.
ಬಿವಿ ನಾಯ್ಕ್ ಮತ್ತು ಶಿವನಗೌಡ ನಾಯ್ಕ್ ಇಬ್ಬರೂ ತಮ್ಮ ಪಕ್ಷಗಳಿಗೆ ಸಂಬಂಧಪಟ್ಟಂತೆ ತಾಜಾ ಸುದ್ದಿ, ಪ್ರಚಾರ ವಿವರ, ನಾಮಪತ್ರ ಸಲ್ಲಿಕೆ ಮುಂತಾದ ವಿವರಗಳನ್ನು ನಿರಂತರವಾಗಿ ಪೋಸ್ಟ್ ಮಾಡುತ್ತಿದ್ದಾರೆ. ಈ ಮಧ್ಯೆ, ಸ್ಥಳೀಯ ಚುನಾವಣಾಧಿಕಾರಿಗಳು ಸಹ ಇಬ್ಬರೂ ಖಾತೆಗಳ ಮೇಲೆ ಹದ್ದಿನಕಣ್ಣಿಟ್ಟಿದ್ದು social media campaign ಖರ್ಚಿನ ಬಾಬತ್ತುಗಳನ್ನು ಬರೆದಿಟ್ಟುಕೊಳ್ಳುತ್ತಿದ್ದಾರೆ. ಇಬ್ಬರಿಗೂ ಶುಭವಾಗಲಿ.













Click it and Unblock the Notifications