ಬೋಯಿಕೇರಿಯಲ್ಲಿ ಲಾರಿ ಪಲ್ಟಿ: ಸಂಚಾರ ಅಸ್ತವ್ಯಸ್ತ

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಮೇ 13 : ನಿರಂತರ ಅಪಘಾತಗಳಿಗೆ ಸುದ್ದಿಯಾಗುತ್ತಿರುವ ಬೋಯಿಕೇರಿಯಲ್ಲಿ ಮತ್ತೆ ಲಾರಿ ಪಲ್ಟಿಯಾಗಿದ್ದು ಮೂರು ತಾಸುಗಳ ಕಾಲ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದ ಘಟನೆ ಗುರುವಾರ ನಡೆದಿದೆ.

ಮರಳು ತುಂಬಿದ ಲಾರಿಯೊಂದು ಮಡಿಕೇರಿ ಮಾರ್ಗದಿಂದ ಕುಶಾಲನಗರ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ಸಂದರ್ಭ ಬೋಯಿಕೇರಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಗುರುವಾರ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿಯಾಗಿ ಲಾರಿ ಮಗುಚಿಬಿದ್ದಿತ್ತು. [ಮಡಿಕೇರಿಯಲ್ಲಿ ಭೀಕರ ರಸ್ತೆ ಅಪಘಾತ : ಇಬ್ಬರ ಸಾವು]

Lorry turns turtle in Boikeri, Madikeri

ಇದರ ಪರಿಣಾಮವಾಗಿ ಮಡಿಕೇರಿ-ಕುಶಾಲನಗರ ರಾಜ್ಯ ಹೆದ್ದಾರಿಯಲ್ಲಿ ಮೂರು ತಾಸು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಲಾರಿ ಚಾಲಕ ಹಾಗೂ ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂತರ ಮಗುಚಿಬಿದ್ದಿದ್ದ ಲಾರಿಯನ್ನು ಕ್ರೇನ್ ಸಹಾಯದ ಮೂಲಕ ಮೇಲೆತ್ತಲಾಯಿತು.

ರಾಜ್ಯ ಹೆದ್ದಾರಿ ಸ್ಥಗಿತಗೊಂಡ ಹಿನ್ನೆಲೆ ಮಡಿಕೇರಿ-ಚೆಟ್ಟಳ್ಳಿ ಮಾರ್ಗವಾಗಿ ವಾಹನಗಳು ಸಂಚರಿಸಿದವು. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. [ಮಲೆನಾಡಿನಲ್ಲೂ ಜಲಕ್ಷಾಮ! ಇದಕ್ಕೆ ಕಾರಣಗಳು ಇಲ್ಲಿವೆ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A loggy turned turtle in Boikeri in Madikeri district on Thursday causing traffic jam. The driver and cleaner escaped unhurt. Due to this road accident there was huge traffic jam for 3 hours. These days Boikeri is more in news due to road accidents.
Please Wait while comments are loading...