ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬಹುದಾದ ಕ್ಷೇತ್ರಗಳು ಇಲ್ಲಿವೆ?‌

ಬೆಂಗಳೂರು, ಜನವರಿ 17: ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಕರ್ನಾಟಕ ಕಾಂಗ್ರೆಸ್‌ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದೆ. 2024 ರ ಲೋಕಸಭಾ ಚುನಾವಣೆ ಕಾಂಗ್ರೆಸ್‌ ಗೆ ಪ್ರತಿಷ್ಠೆಯಾಗಿದ್ದು, ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ನಾಯಕರಿಗೆ ಠಕ್ಕರ್‌ ಕೊಡಲು ಕೈ ನಾಯಕರು ಪ್ಲಾನ್‌ ಮಾಡಿದ್ದಾರೆ.

ಹೌದು, ರಾಜ್ಯದಲ್ಲಿ ಸರ್ಕಾರ ರಚಿಸಿರುವ ಆಡಳಿತರೂಢ ಕಾಂಗ್ರೆಸ್‌ ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ದ20 ಕ್ಕೂ ಸ್ಥಾನಗಳನ್ನ ಗೆಲ್ಲುವ ಮೂಲಕ ಮತ್ತೆ ಬಿಜೆಪಿ ಸೋಲಿನ ರುಚಿ ತೋರಿಸಲು ಮುಂದಾಗಿದೆ. ಈಗಾಗಲೇ ಪ್ರತಿಯೊಂದು ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್‌ ಹೈಕಮಾಂಡ್‌ ಸಚಿವರನ್ನ ಸಂಯೋಜಕರಾಗಿ ನೇಮಕ ಮಾಡಿದ್ದು, ಸೂಕ್ತ ಅಭ್ಯರ್ಥಿಗಳನ್ನ ಕಣಕ್ಕಿಳಿಸುವ ನಿಟ್ಟಿನಲ್ಲಿ ಮಾಸ್ಟರ್‌ ಪ್ಲಾನ್‌ ನಡೆಸಿದೆ.

Lok Sabha Polls 2024: Congress Stronghold Lok Sabha Constituency in Karnataka for general elections

28 ಕ್ಷೇತ್ರದಲ್ಲೂ ಗೆಲ್ಲುವ ಅಭ್ಯರ್ಥಿಯನ್ನ ಕಣಕ್ಕಿಳಿಸುವ ನಿಟ್ಟಿನಲ್ಲಿ ದೆಹಲಿಯಲ್ಲಿ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆ, ಚುನಾವಣೆ ಎದುರಿಸಲು ಅನುಸರಿಸಬೇಕಾದ ಕಾರ್ಯತಂತ್ರಗಳು, ನಾಯಕರ ಸಮನ್ವಯತೆ ಕುರಿತು ಚರ್ಚೆ ನಡೆಯಲಿದೆ. ಅಲ್ಲದೇ ಪ್ರತಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಗೆ ಸಂಭಾವ್ಯ ಅಭ್ಯರ್ಥಿ ಪಟ್ಟ ರೆಡಿ ಮಾಡಲಾಗಿದ್ದು, ಯಾವ ಕ್ಷೇತ್ರದಲ್ಲಿ ನಾವು ಗೆಲ್ಲಬಹುದು, ಯಾವ ಕ್ಷೇತ್ರದಲ್ಲಿ ಗೆಲುವು ಕಷ್ಟವಾಗಲಿದೆ ಎಂಬ ಬಗ್ಗೆಯೂ ಸಹ ಕಾಂಗ್ರೆಸ್‌ ನಾಯಕರು ಚರ್ಚಿಸಿದ್ದು, ಯಾವ ಕ್ಷೇತ್ರದಲ್ಲಿ ಗೆಲ್ಲುವ ಅವಕಾಶವಿದೆ ಎಂಬ ಬಗ್ಗೆ ಮಾಹಿತಿ ನೀಡಲಾಗಿದೆ.

ರಾಜ್ಯದಲ್ಲು ಕಾಂಗ್ರೆಸ್‌ ಗೆಲ್ಲಲು ಅವಕಾಶ ಇರುವ ಕ್ಷೇತ್ರಗಳು ಇಲ್ಲಿವೆ?

ಬೆಂಗಳೂರು ಗ್ರಾಮಾಂತರ

ಮಂಡ್ಯ

ಮೈಸೂರು

ಚಿಕ್ಕಬಳ್ಳಾಪುರ

ಕೋಲಾರ

ತುಮಕೂರು

ಚಾಮರಾಜನಗರ

ಬಳ್ಳಾರಿ

ಚಿತ್ರದುರ್ಗ

ವಿಜಯಪುರ

ರಾಯಚೂರು

ಬೆಳಗಾವಿ

ಕಲಬುರಗಿ

Lok Sabha Polls 2024: Congress Stronghold Lok Sabha Constituency in Karnataka for general elections

ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿ ಇಲ್ಲಿದೆ

ಚಾಮರಾಜನಗರ: ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅಥವಾ ಪುತ್ರ ಸುನೀಲ್‌ ಬೋಸ್‌

ಮೈಸೂರು-ಕೊಡಗು : ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ

ಹಾಸನ : ಮಾಜಿ ಸಚಿವ ಬಿ.ಶಿವರಾಂ

ಮಂಗಳೂರು : ಮಿಥುನ್‌ ರೈ

ಉಡುಪಿ-ಚಿಕ್ಕಮಗಳೂರು : ಜಯಪ್ರಕಾಶ ಶೆಟ್ಟಿ

ಶಿವಮೊಗ್ಗ : ನಟ ಶಿವರಾಜಕುಮಾರ್‌ ಪತ್ನಿ ಗೀತಾ ಶಿವರಾಜಕುಮಾರ್‌

ದಾವಣಗೆರೆ: ಸಚಿವ ಮಲ್ಲಿಕಾರ್ಜುನ್‌ ಪತ್ನಿ ಪ್ರಭಾ ಮಲ್ಲಿಕಾರ್ಜುನ

ಚಿತ್ರದುರ್ಗ: ಎಚ್.ಆಂಜನೇಯ

ತುಮಕೂರು: ಸಚಿವ ರಾಜಣ್ಣ

ಚಿಕ್ಕಬಳ್ಳಾಪುರ: ವೀರಪ್ಪಮೊಯಿಲಿ

ಬೆಂಗಳೂರು ಗ್ರಾಮಾಂತರ: ಹಾಲಿ ಸದಸ್ಯ ಡಿ.ಕೆ.ಸುರೇಶ್‌

ಬೆಂಗಳೂರು ಉತ್ತರ : ಸಚಿವ ಕೃಷ್ಣಬೈರೇಗೌಡ‌

ಬೆಂಗಳೂರು ದಕ್ಷಿಣ :- ಸೌಮ್ಯ ರೆಡ್ಡಿ

ಬೆಂಗಳೂರು ಕೇಂದ್ರ: ಸಚಿವ ಕೆ.ಜೆ.ಜಾರ್ಜ್‌, ಬಿ ಕೆ ಹರಿಪ್ರಸಾದ್

ಧಾರವಾಡ: ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌

ಹಾವೇರಿ- ಗದಗ : ಮಾಜಿ ಶಾಸಕ ಡಿ.ಆರ್‌.ಪಾಟೀಲ್‌, ಸಲ್ಲಿಂ ಅಹಮದ್

ಬೆಳಗಾವಿ: ಸಚಿವ ಸತೀಶ್‌ ಜಾರಕಿಹೊಳಿ

ಚಿಕ್ಕೋಡಿ: ಮಾಜಿ ಶಾಸಕ ವಿವೇಕ ಪಾಟೀಲ್‌

ವಿಜಯಪುರ: ಮಾಜಿ ಶಾಸಕ ರಾಜು ಆಲಗೂರ

ಕಲಬುರಗಿ: ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಬೀದರ್‌: ಮಾಜಿ ಶಾಸಕ ರಾಜಶೇಖರ ಪಾಟೀಲ್‌

ಬಳ್ಳಾರಿ: ವಿ.ಎಸ್‌.ಉಗ್ರಪ್ಪ

ಬಾಗಲಕೋಟೆ: ವೀಣಾ ಕಾಶಪ್ಪನವರ್‌

ಉತ್ತರ ಕನ್ನಡ : ಅಂಜಲಿ‌ ನಿಂಬಾಲ್ಕರ್ , ಹೆಬ್ಬಾರ್ ಮಗ

ಕೋಲಾರ: ಕೆ.ಎಚ್ ಮುನಿಯಪ್ಪ

ರಾಯಚೂರು : ಬಿವಿ ನಾಯಕ್

ದಕ್ಷಿಣ ಕನ್ನಡ: ಮಾಜಿ ಸಚಿವ ವಿನಯ್‌ ಕುಮಾರ್ ಸೊರಕೆ

ಮಂಡ್ಯ : ಚಲುವರಾಯ ಸ್ವಾಮಿ , ಅಥವಾ ಚಲುವರಾಯ ಸ್ವಾಮಿ ಪತ್ನಿ

ಚಿಕ್ಕೋಡಿ: ಪ್ರಕಾಶ್ ಹುಕ್ಕೇರಿ , ಗಣೇಶ್ ಹುಕ್ಕೇರಿ

ಹಾಸನ : ಗೋಪಾಲ ಕೃಷ್ಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+