ಫೆ.12: ಮೋದಿ ಚಾಯ್ ಪೆ ಚರ್ಚಾ ಸ್ಥಳಗಳು ಇಲ್ಲಿವೆ

Lok Sabha polls - Narendra Modi Chai pe charcha places in Bangalore Karnataka
ಬೆಂಗಳೂರು, ಫೆ.11- ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಚಹಾ ರಾಜಕೀಯ ಹಬೆಯಾಡುತ್ತಿದೆ. ಕಾಂಗ್ರೆಸ್ಸಿಗೆ ಸಡ್ಡು ಹೊಡೆದು ಬಿಜೆಪಿಯವರು ಹಮ್ಮಿಕೊಂಡಿರುವ ಚಾಯ್ ಪೆ ಚರ್ಚಾ ಎಂಬ ವಿಶೇಷ ಕಾರ್ಯಕ್ರಮವು ದಿ. 12ರಂದು ದೇಶಾದ್ಯಂತ ನಡೆಯಲಿದೆ.

‘A lot can happen over a cup of coffee/Tea' ಎಂಬ ಜಾಣ್ನುಡಿಯಂತೆ ಕರ್ನಾಟಕ ರಾಜ್ಯದಲ್ಲಿ ಸುಮಾರು 50 ಸ್ಥಳಗಳಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಂಗಳೂರು ನಗರದಲ್ಲಿಯೂ ಹತ್ತಾರು ಕಡೆಗಳಲ್ಲಿ ಚಾಯ್ ಪೆ ಚರ್ಚಾ ಕಾರ್ಯಕ್ರಮ ನಡೆಯಲಿದೆ.

ದೇಶದಾದ್ಯಂತ 1,000 ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಸಿ ಬಿಸಿ ಚಹಾ ಹೀರುತ್ತಾ ಮೋದಿ ಜತೆ ನಾನಾ ರಾಜಕೀಯ ವಿಷಯಗಳ ಕುರಿತು ಚರ್ಚಿಸಬಹುದಾಗಿದೆ.

ಅದೇ ರೀತಿ ಬೆಳಗಾವಿಯಲ್ಲಿ ಫೆ. 12 ರಂದು ಸಾಯಂಕಾಲ 4 ಗಂಟೆಗೆ 'ನಮೋ ಬ್ರಿಗೇಡ್ ಬೆಳಗಾವಿ ಘಟಕ' ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ನಗರದ 2 ಕಡೆಗಳಲ್ಲಿ ಕಾರ್ಯಕ್ರಮ ಬಿತ್ತರಗೊಳ್ಳಲಿದೆ. ಧರ್ಮವೀರ ಸಂಭಾಜಿರಾವ್ ವೃತ್ತ ಮತ್ತು ಆರ್ ಪಿಡಿ ಸರ್ಕಲ್‌ ಗಳಲ್ಲಿ ದೊಡ್ಡ ಟಿವಿ ಪರದೆಯ ಮುಖಾಂತರ ಕಾರ್ಯಕ್ರಮ ಬಿತ್ತರಗೊಳ್ಳಲಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿ ಚಹಾ ಜತೆಗೆ ನರೇಂದ್ರ ಮೋದಿ ಅವರ ಜತೆ ವಿಚಾರ ವಿನಿಮಯ ಮಾಡಿಕೊಳ್ಳಿ ಎಂದು ಘಟಕದ ಮುಖ್ಯಸ್ಥ ಪ್ರಶಾಂತ ಚಂಡಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿ ಮೊಬೈಲ್ ಸಂಖ್ಯೆ: 97434 24146, 90367 91291.

ಬೆಂಗಳೂರು ನಗರದಲ್ಲಿ ಚಹಾ ಕೇಂದ್ರಗಳ ವಿವರ ಇಂತಿದೆ:
ಭರಣಿ ಕೆಫೆ, 6ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, ಗಾಂಧಿನಗರ; ಶ್ರೀಕೃಷ್ಣ ಕಾಂಡಿಮೆಂಟ್ಸ್ ಹೊಸಕೆರೆಹಳ್ಳಿ; ಶ್ರೀ ವಿನಾಯಕ ಕಾಂಡಿಮೆಂಟ್ಸ್, ಜೈನ್ ಟೆಂಪಲ್ ಬಳಿ, ತ್ರಿವೇಣಿ ರಸ್ತೆ, ಯಶವಂತಪುರ; ಆಂಟೀಸ್ ಟೀ ಸ್ಟಾಲ್, ಕೆಫೆ ಕಾಫಿ ಡೇ ಎದುರು, ಮನುವನ, ವಿಜಯನಗರ; ಶ್ರೀ ವಿನಾಯಕ ಕಾಂಡಿಮೆಂಟ್ಸ್, ಅಗಡಿ ಆಸ್ಪತ್ರೆ, 9ನೇ ಅಡ್ಡರಸ್ತೆ, ವಿಲ್ಸನ್ ಗಾರ್ಡನ್; ಪರ್ಪಲ್ ಆಫೀಸ್ ಸಿಸ್ಟಮ್ಸ್, ಸೇಂಟ್ ಜೋಸೆಫ್ಸ್ ಕಾಲೇಜು ಎದುರು; ಅರಮನೆ ವೆಜ್ 77-ಎ, 9ನೇ ಅಡ್ಡರಸ್ತೆ, 20ನೇ ಮುಖ್ಯರಸ್ತೆ, 1ನೇ ಬ್ಲಾಕ್, ರಾಜಾಜಿನಗರ; ಹಳ್ಳಿಮನೆ, ನಂ. 14, 3ನೇ ಅಡ್ಡರಸ್ತೆ, ಸಂಪಿಗೆ ರಸ್ತೆ, ಮಲ್ಲೇಶ್ವರ; ಶ್ರೀ ಕೃಷ್ಣ ಕಾಂಡಿಮೆಂಟ್ಸ್, 1145, 2ನೇ ಮುಖ್ಯರಸ್ತೆ, ಹೊಸಕೆರೆಹಳ್ಳಿ ಬಡಾವಣೆ, ಬನಶಂಕರಿ 3ನೇ ಹಂತ; ಶ್ರೀ ಸಾಯಿ ಸ್ಟೋರ್ಸ್, ಕಾಮಾಕ್ಯ ಸಂಕೀರ್ಣ, ದೇನಾ ಬ್ಯಾಂಕ್ ಕಾಲೊನಿ, ಬನಶಂಕರಿ 3ನೇ ಹಂತ; ಶ್ರೀದೇವಿ ಟೀ ಸ್ಟಾಲ್, ನಂ. 40/2, 2ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, ತ್ಯಾಗರಾಜ ನಗರ; ಲಕ್ಕಿ ಟೀ ಸ್ಟಾಲ್, ನಂ. 664, 29ನೇ ಮುಖ್ಯರಸ್ತೆ, ಕಾರ್ಪೊರೇಷನ್ ಕಾಲನಿ, 9ನೇ ಬ್ಲಾಕ್, ಜಯನಗರ; ಮಂಜುನಾಥ ದರ್ಶಿನಿ, ಐಸಿಐಸಿಐ ಎಟಿಎಂ ಎದುರು, ಗೌರವ ನಗರ, ಜೆಪಿ ನಗರ 7ನೇ ಹಂತ, ಕೊತ್ತನೂರು ದಿಣ್ಣೆ ಮುಖ್ಯರಸ್ತೆ; ಇ ಸಿಟಿ ಬೇಕರಿ ಮತ್ತು ಟೀ ಸ್ಟಾಲ್, ತೋಗೂರು ಪಂಚಾಯ್ತಿ ಕಚೇರಿ ಎದುರು, ದೊಡ್ಡ ತೋಗೂರು, ಎಲೆಕ್ಟ್ರಾನಿಕ್ ಸಿಟಿ, ಫೇಸ್-1; ರಜತ್ ಟೀ ಪಾಯಿಂಟ್, ಹೊಂಗಸಂದ್ರ, ರಿಲಯನ್ಸ್ ಫ್ರೆಶ್ ಬಳಿ, ಬೊಮ್ಮನಹಳ್ಳಿ; ಬಾಲಾಜಿ ಟೀ ಸ್ಟಾಲ್, ಉತ್ತರಹಳ್ಳಿ ಬಸ್ ನಿಲ್ದಾಣ; ಕುಪ್ಪಯ್ಯ ದೇವಾಡಿಗ, ನಂ. 36, 16ನೇ ಅಡ್ಡರಸ್ತೆ, ಮರಿಯಪ್ಪನ ಪಾಳ್ಯ; ಲಕ್ಷ್ ಟೀ ಸ್ಟಾಲ್, 1ನೇ ಹಂತ, ದೊಡ್ಡ ತೋಗೂರು ಬಸ್ ನಿಲ್ದಾಣ ಬಳಿ, ಎಲೆಕ್ಟ್ರಾನಿಕ್ ಸಿಟಿ; ಯುಕೆ ಸ್ಟೋರ್, ಬಿಡಿಎ ಮುಖ್ಯರಸ್ತೆ, ಶಿವಾಜಿನಗರ ಕಾಲನಿ, ಜೆಬಿ ನಗರ, ಮಾರತ್ ಹಳ್ಳಿ; ವಿಶಾಲ್ ಟೀ ಸ್ಟಾಲ್, ನಂ. 2052, ಮದರ್ ಡೇರಿ ಸರ್ಕಲ್, ಯಲಹಂಕ ಉಪನಗರ; ಗಣೇಶ್ ಪ್ರಾವಿಷನ್ ಸ್ಟೋರ್, 17ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, ಬಸವನಪುರ ಮುಖ್ಯರಸ್ತೆ, ಗಾಯತ್ರಿ ಬಡಾವಣೆ, ಕೆಆರ್ ಪುರ; ಮಂಜುನಾಥ್ ಟೀ ಶಾಪ್, ಅಮ್ಮಾಜಿ ಆರ್ಕೇಡ್ ಬಳಿ, ಹೆಸರಘಟ್ಟ ಮುಖ್ಯರಸ್ತೆ, ಬಾಗಲಗುಂಟೆ; ಮೂಕಾಂಬಿಕಾ ಟೀ ಸ್ಟಾಲ್, ನಂ. 200/1, ಸರ್ಕಾರಿ ಶಾಲೆ ಬಳಿ, ಜಕ್ಕಸಂದ್ರ, ಸರ್ಜಾಪುರ ರಸ್ತೆ, 1ನೇ ಬ್ಲಾಕ್ ಕೋರಮಂಗಲ; ಶ್ರೀದೇವಿ ಬೇಕರಿ, 7ನೇ ಮುಖ್ಯರಸ್ತೆ, 2ನೇ ಹಂತ ಬಿಟಿಎಂ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+