Lok Sabha Election 2024: ರಾಜ್ಯದಲ್ಲಿ ಶುರುವಾಯ್ತು ಬೆಟ್ಟಿಂಗ್ ಭರಾಟೆ; ಯಾವ ಕ್ಷೇತ್ರ, ಯಾರಿಗೆ ಹೆಚ್ಚಿನ ಡಿಮ್ಯಾಂಡ್?
ಬೆಂಗಳೂರು, ಮೇ 13: ಲೋಕಸಭಾ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಗೆ ಸೋಲಿನ ರುಚಿ ತೋರಿಸಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದ್ದು, ಇದೀಗ ರಾಜ್ಯದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಬೆಟ್ಟಿಂಗ್ ಭರಾಟೆ ಕೂಡಾ ಶುರುವಾಗಿದೆ.
ಹೌದು, 28 ಕ್ಷೇತ್ರಗಳ ಫೈಕಿ 28 ಕ್ಷೇತ್ರಗಳನ್ನ ಗೆಲ್ಲಲು ಬಿಜೆಪಿ ಹಾಗೂ ಜೆಡಿಎಸ್ ಮಹಾ ತಂತ್ರಗಾರಿಕೆಯಲ್ಲಿ ಚುನಾವಣೆಯನ್ನ ಎದುರಿಸಿದ್ರೆ, ಇತ್ತ ಆಡಳಿತರೂಢ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಇತ್ತ ತಮ್ಮ ತಮ್ಮ ಪಕ್ಷದ ನಾಯಕರು ಗೆಲ್ಲುವ ಕುರಿತು ಕೋಟ್ಯಾಂತರ ರೂಪಾಯಿಯನ್ನ ಕಾರ್ಯಕರ್ತರು ಬೆಟ್ಟಿಂಗ್ ಕಟ್ಟಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾರು ಗೆಲುವು ಸಾಧಿಸಬಹುದು ಎಂಬ ನಿಟ್ಟಿನಲ್ಲಿ ಕೋಟ್ಯಂತರ ರೂಪಾಯಿ ಲೆಕ್ಕದಲ್ಲಿ ತೆರೆಮರೆಯಲ್ಲಿ ಭರ್ಜರಿ ಬೆಟ್ಟಿಂಗ್ ದಂಧೆ ನಡೆಯುತ್ತಿದೆ.

ಯಾವ ಕ್ಷೇತ್ರ ಬೆಟ್ಟಿಂಗ್ ದಂಧೆ ಜೋರು?
* ಮಂಡ್ಯ - ಎಚ್‌ಡಿ ಕುಮಾರಸ್ವಾಮಿ ವರ್ಸಸ್ ಸ್ಟಾರ್ ಚಂದ್ರು
*ಬೆಂಗಳೂರು ಗ್ರಾಮಾಂತರ - ಡಿಕೆ ಸುರೇಶ್ ವರ್ಸಸ್ ಡಾ. ಸಿ ಎನ್ ಮಂಜುನಾಥ್
* ಹಾಸನ: ಪ್ರಜ್ವಲ್ ರೇವಣ್ಣ ವರ್ಸಸ್ ಶ್ರೇಯಸ್ ಪಟೇಲ್
* ಶಿವಮೊಗ್ಗ - ಬಿವೈ ರಾಘವೇಂದ್ರ ವರ್ಸ್ ಗೀತಾ ಶಿವರಾಜ್ ಕುಮಾರ್ ವರ್ಸಸ್ ಕೆ.ಎಸ್ ಈಶ್ವರಪ್ಪ
* ದಕ್ಷಿಣ ಕನ್ನಡ - ಕಾ. ಬ್ರಿಜೇಶ್ ಚೌಟ ವರ್ಸಸ್ ಆರ್ ಪದ್ಮರಾಜ್
* ತುಮಕೂರು - ವಿ ಸೋಮಣ್ಣ ವರ್ಸಸ್ ಮುದ್ದಹನುಮೇಗೌಡ
* ಚಿಕ್ಕಬಳ್ಳಾಪುರ - ಡಾ. ಕೆ ಸುಧಾಕರ್ ವರ್ಸಸ್ ರಕ್ಷಾ ರಾಮಯ್ಯ
ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ನಾಯಕರಿಗೆ ಪ್ರತಿಷ್ಠೆಯ ಕ್ಷೇತ್ರವಾಗಿದೆ. ದಳಪತಿಗಳಿಗೆ ಮಾತ್ರವಲ್ಲದೇ ಅಲ್ಲಿನ ಜೆಡಿಎಸ್ ಕಾರ್ಯಕರ್ತರಿಗೂ ಸಹ ಅಸ್ತಿತ್ವದ ಪ್ರಶ್ನೆ. ಹೀಗಾಗಿ ಚುನಾವಣೆಯ ಬಳಿಕ ರಾಜ್ಯದಲ್ಲಿ ಬೆಟ್ಟಿಂಗ್ ದಂಧೆಕೋರರಿಗೆ ಮಂಡ್ಯ ಲೋಕಸಭಾ ಕ್ಷೇತ್ರವೇ ಬಹಳ ಫೇವರೇಟ್ ಆಗಿದೆ. ಏಕೆಂದರೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್ ಡಿ ಕುಮಾರಸ್ವಾಮಿ ಅವರ ವರ್ಷಸ್ಸು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರ ನಡುವೆ ನಡುವೆ ಜಿದ್ದಾಜಿದ್ದಿಯ ಪೈಪೋಟಿ ಇದೆ. ಹೀಗಾಗಿ ಯಾರು ಈ ಬಾರಿ ಮಂಡ್ಯದ ಅಧಿಪತಿಯಾಗುತ್ತಾರೆ ಎಂಬ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಸಾಕಷ್ಟು ಕುತೂಹಲ ಇದೆ.
ಇನ್ನೂ ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಮಂಜುನಾಥ್ ವರ್ಸಸ್ ಡಿಕೆ ಸುರೇಶ್ ನಡುವೆ ಜಿದ್ದಾಜಿದ್ದಿಯ ಪೈಪೋಟಿ ಇದೆ. ಈ ನಿಟ್ಟಿನಲ್ಲಿ ಈ ಕ್ಷೇತ್ರದ ಬಗ್ಗೆ ಬೆಟ್ಟಿಂಗ್ ದಂಧೆಕೋರರು ಹೆಚ್ಚಿನ ಆಸಕ್ತಿ ಹೊಂದಿದ್ದಾರೆ.
ಮಂಡ್ಯದಲ್ಲೂ ಎಚ್‌ಡಿಕೆ ವರ್ಸಸ್ ಸ್ಟಾರ್ ಚಂದ್ರು ನಡುವೆ ಫೈಟ್ ಇರುವುದರಿಂದ ಈ ಕ್ಷೇತ್ರವೂ ಬೆಟ್ಟಿಂಗ್ ನಲ್ಲಿ ತೀವ್ರ ಗಮನ ಸೆಳೆಯುತ್ತಿದೆ. ಇದರ ಜೊತೆಗೆ ಹಾಸನದಲ್ಲಿ ಪೆನ್‌ಡ್ರೈವ್ ಹಗರಣದ ಹಿನ್ನೆಲೆಯಲ್ಲಿ ಕದನ ಕುತೂಹಲ ಕೆರಳಿಸಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ವರ್ಸಸ್ ಪ್ರಜ್ವಲ್ ರೇವಣ್ಣ ನಡುವೆ ತೀವ್ರ ಪೈಪೋಟಿ ಇದೆ. ಪೆನ್‌ಡ್ರೈವ್ ಬಿಡುಗಡೆ ಬಳಿಕ ಇದು ಮತ್ತಷ್ಟು ಕುತೂಹಲ ಕೆರಳಿಸಿದೆ. ಈ ನಿಟ್ಟಿನಲ್ಲಿ ಈ ಕ್ಷೇತ್ರವೂ ಬೆಟ್ಟಿಂಗ್ ದಂಧೆಕೋರರ ಹಾಟ್ ಕ್ಷೇತ್ರವಾಗಿದೆ.
ಎಷ್ಟು ಅಂತರದಲ್ಲಿ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ಲೆಕ್ಕಾಚಾರದಲ್ಲೂ ಬೆಟ್ಟಿಂಗ್ ನಡೆಯುತ್ತದೆ. ಇನ್ನು ಬೆಂಗಳೂರು ಗ್ರಾಮಾಂತರ ಸೇರಿದಂತೆ ತೀವ್ರ ಪೈಪೋಟಿ ಇರುವ ಕ್ಷೇತ್ರಗಳಲ್ಲಿ 50-50 ಲೆಕ್ಕದಲ್ಲಿ ಬೆಟ್ಟಿಂಗ್ ನಡೆಯುತ್ತದೆ. ಇಲ್ಲಿ ಇಬ್ಬರು ಬೆಟ್ಟಿಂಗ್ ದಾರರು ಸಮಾನವಾಗಿ ಹಣವನ್ನು ಕಟ್ಟಬೇಕು. ಇನ್ನು ಕೆಲವು ಕ್ಷೇತ್ರಗಳಲ್ಲಿ 80-20 ಲೆಕ್ಕದಲ್ಲೂ ಬೆಟ್ಟಿಂಗ್ ನಡೆಯುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ.












Click it and Unblock the Notifications