ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದುವರೆದ ಐಟಿ ಇಲಾಖೆ ದಾಳಿ : ಸಿಎಂ ಆಪ್ತ ಪುಟ್ಟರಾಜುಗೆ ಬಿಸಿ

|
Google Oneindia Kannada News

ಬೆಂಗಳೂರು, ಮಾರ್ಚ್ 28: ಲೋಕಸಭೆ ಚುನಾವಣೆ ಸಂದರ್ಭದಲ್ಲೇ ಬೆಂಗಳೂರು ಸೇರಿ 15 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬುಧವಾರ ತಡರಾತ್ರಿ ನಡೆಸಲಾದ ಐಟಿ ದಾಳಿ ಮುಂದುವರೆದಿದ್ದು, ಈಗ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಆಪ್ತ, ಸಚಿವ ಸಿಎಸ್ ಪುಟ್ಟರಾಜು ಅವರಿಗೆ ಬಿಸಿ ತಟ್ಟಿದೆ.

ಮಂಡ್ಯ ಉಸ್ತುವಾರಿ ಸಚಿವ ಸಿಎಸ್ ಪುಟ್ಟರಾಜು ಅವರ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನಲ್ಲಿರುವ ಚಿನಕುರಳಿಯ ಮನೆ, ಮೈಸೂರಿನಲ್ಲಿರುವ ಅವರ ಸಂಬಂಧಿ ಅಶೋಕ್ ಎಂಬುವರ ಮನೆ ಮೇಲೆ ದಾಳಿ ನಡೆದಿದೆ. ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಕೇಂದ್ರ ಮೀಸಲು ಪಡೆ (ಸಿಆರ್ ಪಿಎಫ್) ಸಿಬ್ಬಂದಿಗಳ ನೆರವಿನಿಂದ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಂಗಳೂರಿನ ವಿವಿಧೆಡೆ ರಾತ್ರೋರಾತ್ರಿ ಆದಾಯ ತೆರಿಗೆ ದಾಳಿ!ಬೆಂಗಳೂರಿನ ವಿವಿಧೆಡೆ ರಾತ್ರೋರಾತ್ರಿ ಆದಾಯ ತೆರಿಗೆ ದಾಳಿ!

ಬೆಂಗಳೂರಿನ ಜಯನಗರದ ಸೌತ್ ಎಂಡ್ ಸರ್ಕಲ್ ಬಳಿ ಇರುವ ಪಾಪ್ ಕಾರ್ನ್ ಉದ್ಯಮಿ ಸಿದ್ದಿಕ್ ಶೇಟ್ ಅವರ ಮನೆ ಮೇಲೆ ಬುಧವಾರ ತಡರಾತ್ರಿ ಆದಾಯ ತೆರಿಗೆ ದಾಳಿ ನಡೆಸಿ, ದಾಖಲಾತಿಗಳ ಪರಿಶೀಲನೆಗಳು ನಡೆಸಲಾಗಿತ್ತು. ಬೆಂಗಳೂರಿನ ಜಯನಗರ, ಬಸವನಗುಡಿ, ಇಟ್ಟಮಡು ಸೇರಿದಂತೆ ಹಲವೆಡೆ ದಾಳಿ ನಡೆಸಲಾಗಿತ್ತು.

CS Puttaraju

ಸುಳಿವು ಪಡೆದಿದ್ದ ಸಿಎಂ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಂಡು ರಾಜ್ಯದ ಕೆಲವು ಪ್ರಭಾವಿ ವ್ಯಕ್ತಿಗಳ ಮನೆ ಮೇಲೆ ಐಟಿ ದಾಳಿ ನಡೆಸಲಿದೆ. ಗುರುವಾರ ಬೆಳಗ್ಗೆ ದಾಳಿಗೆ ಸಜ್ಜಾಗಿದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬುಧವಾರದಂದು ಸುಳಿವು ನೀಡಿ, ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕುಮಾರಸ್ವಾಮಿ ಅವರು ಮಾಧ್ಯಮಗಳ ಜತೆ ಮಾತನಾಡುತ್ತಾ, ಒಂದು ವೇಳೆ ಆದಾಯ ತೆರಿಗೆ ದಾಳಿ ಮಾಡಿದರೆ ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ಅವರು ನಡೆದುಕೊಂಡ ರೀತಿಯಲ್ಲೇ ನಾವು ನಡೆದುಕೊಳ್ಳಬೇಕಾಗುತ್ತದೆ ಎಂದಿದ್ದರು. ಆದಾಯ ತೆರಿಗೆ ದಾಳಿ ಬಗ್ಗೆ ಬಿಜೆಪಿಯವರಿಂದಲೇ ನನಗೆ ಮಾಹಿತಿ ಬಂದಿದೆ. ಐಟಿ ಅಧಿಕಾರಿ ಬಾಲಕೃಷ್ಣನ್ ಅವರು ಬಿಜೆಪಿ ಏಜೆಂಟ್ ರಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು.

English summary
IT Raid continued on Thursday morning, sleuth raid on Minister CS Puttaraju and his kin houses. According to media sources Income Tax conduvted raid on various places in Bengaluru on Wednesday. CM Kumaraswamy gave hint about IT raid to media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X