ಕರ್ನಾಟಕದ 28 ಕ್ಷೇತ್ರದಿಂದ ಯಾವ ಪಕ್ಷದಿಂದ ಯಾರು ಎದುರಾಳಿ? ಇಲ್ಲಿದೆ ಸಂಪೂರ್ಣ ಪಟ್ಟಿ

ಬೆಂಗಳೂರು, ಮಾರ್ಚ್‌ 24: 2024 ರ ಲೋಕಸಭಾ ಚುನಾವಣಾ ಕಣ ರಂಗೇರಿದೆ. ಕರ್ನಾಟಕದಲ್ಲಿ ಈ ಬಾರಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ ಬಹುತೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನ ಅಂತಿಮಗೊಳಿಸಿದ್ದು, ಕೆಲವು ಕ್ಷೇತ್ರಗಳು ದೊಡ್ಡ ಸವಾಲ್‌ ಆಗಿದೆ.

ಕರ್ನಾಟಕದ 28 ಕ್ಷೇತ್ರಗಳ ಫೈಕಿ ಬಿಜೆಪಿ ಹೈಕಮಾಂಡ್‌ 20 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರನ್ನ ಅಂತಿಮಗೊಳಿಸಿದ್ದು, ಕೆಲವು ಕ್ಷೇತ್ರದಲ್ಲಿ ಹಾಲಿ ಸಂಸದರಿಗೆ ಟಿಕೆಟ್‌ ಕೈ ತಪ್ಪಿದೆ. ಹೀಗಾಗಿ ಬಿಜೆಪಿ ಪಾಳಯದಲ್ಲಿ ಬಂಡಾಯದ ಕೂಗು ಕೇಳಿ ಬರುತ್ತಿದೆ. ಇನ್ನೂ ಬಾಕಿ ಉಳಿದ ಏಂಟು ಕ್ಷೇತ್ರದಲ್ಲಿ ಹಾಸನ, ಮಂಡ್ಯ ಹಾಗೂ ಕೋಲಾರ ಜೆಡಿಎಸ್‌ ಅಭ್ಯರ್ಥಿ ಕಣಕ್ಕಿಳಿದ್ರೆ, ಉಳಿದ ಐದು ಕ್ಷೇತ್ರದಲ್ಲಿ ಹಾಲಿ ಸಂಸದರಿಗೆ ಟಿಕೆಟ್‌ ಸಿಗುವುದು ಅನುಮಾನವಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ರೆ, ಆಡಳಿತರೂಢ ಕಾಂಗ್ರೆಸ್‌ ಏಕಾಂಗಿಯಾಗಿ ಚುನಾವಣಾ ಕಣಕ್ಕಿಳಿದಿದೆ.

Lok Sabha Elections 2024 Constituency Wise Candidates List Of Karnataka Bjp Congress

ಬಿಜೆಪಿ - ಜೆಡಿಎಸ್‌ ಮೈತ್ರಿಯಲ್ಲಿ ಇದುವರೆಗೂ ಬಿಜೆಪಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದರೆ, ಜೆಡಿಎಸ್‌ ಹಾಸನ ಕ್ಷೇತ್ರದಿಂದ ಹಾಲಿ ಸಂಸದರಾದ ಪ್ರಜ್ವಲ್‌ ರೇವಣ್ಣ ಅವರಿಗೆ ಟಿಕೆಟ್‌ ಫೈನಲ್‌ ಮಾಡಿದೆ. ಇನ್ನು, ಸೀಟು ಹಂಚಿಕೆ ಬಗ್ಗೆ ಅಧಿಕೃತ ಘೋಷಣೆಯಾಗಿಲ್ಲವಂದರೂ ಬಿಜೆಪಿ 5 ಹಾಗೂ ಜೆಡಿಎಸ್‌ 2 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ. 8 ಲೋಕಸಭಾ ಕ್ಷೇತ್ರಗಳ ಫೈಕಿ ಕಾಂಗ್ರೆಸ್‌ ಪಕ್ಷವೂ 24 ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನ ಅಂತಿಮಗೊಳಿಸಿದ್ದು, ಬಾಕಿ ಉಳಿದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ. ಹಾಗಾದ್ರೆ 28 ಲೋಕಸಭಾ ಕ್ಷೇತ್ರಗಳ ಫೈಕಿ ಯಾವ ಕ್ಷೇತ್ರದಲ್ಲಿ ಯಾರು ಎದುರಾಳಿ? ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕ್ಷೇತ್ರ ಬಿಜೆಪಿ- ಜೆಡಿಎಸ್ ಕಾಂಗ್ರೆಸ್ ಸ್ವತಂತ್ರ
1 ಚಿಕ್ಕೋಡಿ ಅಣ್ಣಾಸಾಹೇಬ್‌ ಜೊಲ್ಲೆ ಪ್ರಿಯಾಂಕಾ ಜಾರಕಿಹೊಳಿ
2 ಬೆಳಗಾವಿ ಜಗದೀಶ್‌ ಶೆಟ್ಟರ್ ಮೃಣಾಲ್‌ ಹೆಬ್ಬಾಳ್ಕರ್‌
3 ಬಾಗಲಕೋಟೆ ಪಿಸಿ ಗದ್ದಿಗೌಡರ್‌ ಸಂಯುಕ್ತಾ ಪಾಟೀಲ್‌
4 ಬಿಜಾಪುರ ರಮೇಶ್‌ ಜಿಗಜಿಣಗಿ ರಾಜು ಅಲಗೂರು
5 ರಾಯಚೂರು ರಾಜಾ ಅಮರೇಶ್ವರ ನಾಯಕ ಜಿ ಕುಮಾರ್‌ ನಾಯ್ಕ್‌
6 ಕಲಬುರಗಿ ಡಾ ಉಮೇಶ್‌ ಜಾಧವ್ ರಾಧಾಕೃಷ್ಣ ದೊಡ್ಮನಿ
7 ಬೀದರ್‌ ಭಗವಂತ್‌ ಖೂಬಾ ಸಾಗರ್‌ ಖಂಡ್ರೆ
8 ಕೊಪ್ಪಳ ಡಾ. ಬಸವರಾಜ್‌ ಕ್ಯಾವಟೂರು ರಾಜಶೇಖರ್‌ ಹಿಟ್ನಾಳ್
9 ಬಳ್ಳಾರಿ ಶ್ರೀರಾಮುಲು
10 ಹಾವೇರಿ ಬಸವರಾಜ ಬೊಮ್ಮಾಯಿ ಆನಂದಸ್ವಾಮಿ ಗಡ್ಡದೇವರಮಠ
11 ಧಾರವಾಡ ಪ್ರಹ್ಲಾದ್‌ ಜೋಶಿ ವಿನೋದ್‌ ಅಸೂಟಿ
12 ಉತ್ತರ ಕನ್ನಡ ಅಂಜಲಿ ನಿಂಬಾಳ್ಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ
13 ದಾವಣಗೆರೆ ಗಾಯತ್ರಿ ಸಿದ್ದೇಶ್ವರ್‌ ಡಾ ಪ್ರಭಾ ಮಲ್ಲಿಕಾರ್ಜುನ್
14 ಶಿವಮೊಗ್ಗ ಬಿವೈ ರಾಘವೇಂದ್ರ ಗೀತಾ ಶಿವರಾಜಕುಮಾರ್ ಕೆಎಸ್‌ ಈಶ್ವರಪ್ಪ
15 ಉಡುಪಿ-ಚಿಕ್ಕಮಗಳೂರು ಕೋಟ ಶ್ರೀನಿವಾಸ್‌ ಪೂಜಾರಿ ಡಾ. ಜಯಪ್ರಕಾಶ್‌ ಹೆಗ್ಡೆ
16 ಹಾಸನ ಪ್ರಜ್ವಲ್‌ ರೇವಣ್ಣ (JDS) ಶ್ರೇಯಸ್‌ ಪಟೇಲ್‌
17 ದಕ್ಷಿಣ ಕನ್ನಡ ಕ್ಯಾ. ಬ್ರಿಜೇಶ್‌ ಚೌಟಾ ಪದ್ಮರಾಜ್‌
18 ಚಿತ್ರದುರ್ಗ ಬಿಎನ್‌ ಚಂದ್ರಪ್ಪ
19 ತುಮಕೂರು ವಿ ಸೋಮಣ್ಣ ಎಸ್‌ಪಿ ಮುದ್ದಹನುಮೇಗೌಡ
20 ಮಂಡ್ಯ ಸ್ಟಾರ್‌ ಚಂದ್ರು
21 ಮೈಸೂರು ಯದುವೀರ್‌ ಒಡೆಯರ್ ಎಂ ಲಕ್ಷ್ಮಣ್
22 ಚಾಮರಾಜನಗರ ಎಸ್‌ ಬಾಲರಾಜ್‌
23 ಬೆಂ. ಗ್ರಾಮಾಂತರ ಡಾ. ಮಂಜುನಾಥ್‌ ಡಿ.ಕೆ ಸುರೇಶ್
24 ಬೆಂಗಳೂರು ಉತ್ತರ ಶೋಭಾ ಕರಂದ್ಲಾಜೆ
ರಾಜೀವ್‌ ಗೌಡ
25 ಬೆಂಗಳೂರು ಕೇಂದ್ರ ಪಿಸಿ ಮೋಹನ್ ಮನ್ಸೂರ್‌ ಅಲಿಖಾನ್‌
26 ಬೆಂಗಳೂರು ದಕ್ಷಿಣ ತೇಜಸ್ವಿ ಸೂರ್ಯ ಸೌಮ್ಯ ರೆಡ್ಡಿ
27 ಚಿಕ್ಕಬಳ್ಳಾಪುರ ಡಾ.ಕೆ ಸುಧಾಕರ್
28 ಕೋಲಾರ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+