Lok Sabha Election 2024: ಲೋಕಸಭಾ ಫಲಿತಾಂಶಕ್ಕೂ ಮುನ್ನ ಸೋಲನ್ನು ಒಪ್ಪಿಕೊಂಡ್ರಾ ಈಶ್ವರಪ್ಪ?
ಬೆಂಗಳೂರು, ಮೇ 16: ಹಾವೇರಿಯಿಂದ ಪುತ್ರನಿಗೆ ಲೋಕಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ನಡೆಸಿದ್ದು, ಚುನಾವಣಾ ಫಲಿತಾಂಶ ಬರುವ ಮುನ್ನವೇ ಕೆ ಎಸ್ ಈಶ್ವರಪ್ಪ ಸೋಲನ್ನು ಒಪ್ಪಿಕೊಂಡ್ರಾ ಎನ್ನುವ ಪ್ರಶ್ನೆ ಉದ್ಭವಿಸಿದೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಈಶ್ವರಪ್ಪ ಅಂದ್ರೇ ಬಿಜೆಪಿ, ಬಿಜೆಪಿ ಅಂದ್ರೇ ಕಮಲ ಅಂತಾ ಜನ ಅನ್ಕೊಂಡಿದ್ದಾರೆ. ಇದು ನನಗೆ ಮುಳುವಾಯ್ತು, ಅನೇಕರು ಕಮಲ ಚಿಹ್ನೆಗೆ ವೋಟ್ ಹಾಕಿ ನನಗೆ ಹಾಕಿದೀವಿ ಅಂತಾ ಹೇಳಿದ್ದಾರೆ. . ನಾವು ಕೂಡ ನಾನು ಪಕ್ಷೇತರ ಅಭ್ಯರ್ಥಿ ಎಂದು ಅರಿವು ಮೂಡಿಸುವಲ್ಲಿ ಎಡವಿದ್ದೇವೆ ಎನ್ನುವ ಮೂಲಕ ಚುನಾವಣೆಯ ಫಲಿತಾಂಶಕ್ಕೂ ಮುನ್ನವೇ ಈಶ್ವರಪ್ಪ ಸೋಲನ್ನು ಒಪ್ಪಿಕೊಂಡ್ರಾ ಎಂಬ ಅನುಮಾನ ಶುರುವಾಗಿದೆ.

ನಾನು ಪಕ್ಷೇತರ ಅಭ್ಯರ್ಥಿ ಎಂದು ಜನರಲ್ಲಿ ಅರಿವು ಮೂಡಿಸುವಲ್ಲಿ ಎಡವಿದ್ದೇನೆ. ಈಶ್ವರಪ್ಪ ಬಿಜೆಪಿಯಲ್ಲೇ ಇದ್ದಾರೆ ಎಂದು ಜನರು ಕಮಲದ ಗುರುತಿಗೆ ಮತ ಹಾಕಿದ್ದಾರೆ. ಇದು ನನಗೆ ಮುಳುವಾಯಿತು, ಮತದಾನದ ವೇಳೆ ಜನ ಗೊಂದಲಕ್ಕೀಡಾಗಿ ನಾನು ಅಂತಾ ತಿಳಿದುಕೊಂಡು ಕಮಲದ ಚಿಹ್ನೆಗೆ ಮತ ಹಾಕಿದ್ದಾರೆ. ನಾನು ಕೊನೆ ಉಸಿರಿರುವ ತನಕವೂ ಬಿಜೆಪಿ ಜೊತೆ ಇರ್ತಿನಿ. ನಾನು ಬಿಜೆಪಿಯಿಂದ ಹೊರಗೆ ಹೋಗಿದೀನಿ ಎಂದು ಯಾರು ಅಂದುಕೊಂಡಿಲ್ಲ, ನಾನು ಬಿಜೆಪಿಯಲ್ಲೇ ಇನ್ನು ಇದೀನಿ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಈಶ್ವರಪ್ಪ ಅಂದ್ರೇ ಬಿಜೆಪಿ, ಬಿಜೆಪಿ ಅಂದ್ರೇ ಕಮಲ ಎಂದು ಎಲ್ಲರೂ ಅಂದುಕೊಂಡಿದ್ದಾರೆ ಎಂದರು.
ಭಾರತೀಯ ಜನತಾ ಪಕ್ಷ ನನ್ನ ತಾಯಿ, ನಾನು ಯಾವುದೇ ಕಾರಣಕ್ಕೂ ಬಿಜೆಪಿಯನ್ನು ಬಿಟ್ಟು ಹೋಗಲು ಸಾಧ್ಯ ಇಲ್ಲ. ಕೊನೆ ಉಸಿರಿರುವ ತನಕವೂ ಬಿಜೆಪಿ ಜೊತೆ ಇರ್ತಿನಿ. ಚಿಹ್ನೆಯೂ ಕೂಡ ನನ್ನನ್ನು ಬಿಜೆಪಿಯಿಂದ ದೂರ ಮಾಡಲು ಸಾಧ್ಯವಿಲ್ಲ. ಉಚ್ಛಾಟನೆ ಮಾಡಿದರೆ ನನ್ನ ಹಾಗೂ ಬಿಜೆಪಿಯ ಸಂಬಂಧವನ್ನು ಯಾರು ಕಿತ್ತಾಕೋಕೆ ಬರಲ್ಲ ಎಂದು ಕೆ ಎಸ್ ಈಶ್ವರಪ್ಪ ಅವರು ಹೇಳಿದರು.
ಬಿಜೆಪಿಯಿಂದ ನಿಮ್ಮನ್ನು ಉಚ್ಛಾಟನೆ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಂದ ಪತ್ರ ಬಂದಿದೆ. ಆದರೆ, ವಿಜಯೇಂದ್ರ ಇನ್ನೂ ಬಚ್ಚಾ, ರಾಜ್ಯದಲ್ಲಿ ಯಡಿಯೂರಪ್ಪ, ನಾನು, ಅನಂತ ಕುಮಾರ್, ಡಿಎಚ್ ಶಂಕರ್ ಮೂರ್ತಿ, ರಾಮಚಂದ್ರಗೌಡರು ಸೇರಿ ನಾವೆಲ್ಲಾ ಕಟ್ಟಿದ ಪಕ್ಷ ಇದು ಎಂದು ವಿಜಯೇಂದ್ರ ವಿರುದ್ಧ ಕಿಡಿಕಾರಿದ್ರು. ಇನ್ನೂ ಇವನು ವಿಜಯೇಂದ್ರ ಎಲ್ಲಿದ್ನೋ ಗೊತ್ತಿಲ್ಲ, ಇದ್ದಕ್ಕಿದ್ದಂತೆ ಅವರ ತಂದೆಯ ಒತ್ತಡದಿಂದ ದಿಲ್ಲಿಗೆ ಹೋಗಿ ಒತ್ತಾಯ ಪೂರ್ವಕವಾಗಿ ರಾಜ್ಯಾಧ್ಯಕ್ಷನಾಗಿ ಬಂದಿದ್ದಾನೆ. ರಾಜಕಾರಣದಲ್ಲಿ ವಿಜಯೇಂದ್ರ ಇನ್ನು ಎಳಸು ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.
ಯಡಿಯೂರಪ್ಪನವರೇ ಬಿಜೆಪಿ ಬಿಟ್ಟೋಗಿ ಬೇರೆ ಪಕ್ಷ ಕಟ್ಟಿದರು. ಅಂತಹ ದ್ರೋಹದ ಕೆಲಸವನ್ನು ನಾನು ಮಾಡಿಲ್ಲ, ಯಾವತ್ತಿಗೂ ಮಾಡಲ್ಲ. ವಿಜಯೇಂದ್ರ ಯಾರು ಅಂತಾ ಕೇಳಬಹುದೇ ವಿನಃ, ಈಶ್ವರಪ್ಪ ಯಾರು ಅಂತಾ ಯಾರು ಕೇಳಲ್ಲ. ಈಶ್ವರಪ್ಪ ಅಂದ್ರೇ ಬಿಜೆಪಿ ಎಂದು ಪುನಃ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications