ಕರ್ನಾಟಕದಲ್ಲಿ ಲೋಕಸಮರ: 64.14% ರಷ್ಟು ಮತದಾನ ದಾಖಲು

ಬೆಂಗಳೂರು, ಏಪ್ರಿಲ್ 23: ಕರ್ನಾಟಕದ ಒಟ್ಟು 28 ಕ್ಷೇತ್ರಗಳಲ್ಲಿ 14 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಒಟ್ಟು 237 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಎರಡನೇ ಹಂತದ ಮತದಾನ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ.

ಏಪ್ರಿಲ್ 18 ರಂದು ಸಹ 14 ಕ್ಷೇತ್ರಗಳಿಗೆ ಮತದಾನವಾಗಿತ್ತು.

Lok Sabha elections 2019: voting in Karnataka LIVE updates

ಇಂದು ಬಳ್ಳಾರಿ, ರಾಯಚೂರು, ಕೊಪ್ಪಳ, ಬಾಗಲಕೊಟೆ, ಬೀದರ್, ಗುಲ್ಬರ್ಗ(ಕಲಬುರಗಿ), ದಾವಣಗೆರೆ, ಬೆಳಗಾವಿ, ಚಿಕ್ಕೋಡಿ, ಧಾರವಾಡ, ಹಾವೇರಿ, ವಿಜಯಪುರ, ಉತ್ತರ ಕನ್ನಡ, ಶಿವಮೊಗ್ಗ ಈ ಹದಿನಾಲ್ಕು ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ.

ಚುನಾವಣಾ ಆಯೋಗವು ಈ ಹದಿನಾಲ್ಕು ಕ್ಷೇತ್ರಗಳಿಗಾಗಿ 28,022 ಮತಗಟ್ಟೆಗಳನ್ನು ನಿರ್ಮಾಣ ಮಾಡಿದೆ. 2,43,03,279 ಮತದಾರರು ಮತದಾನ ಮಾಡುವ ಹಕ್ಕು ಪಡೆದಿದ್ದಾರೆ.

Apr 23, 2019, 7:25 pm IST

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ 2019 ಎರಡನೇ ಹಂತದ ಮತದಾನ ಮುಗಿದಿದ್ದು 64.14% ಮತದಾನವಾಗಿದೆ.ಮೊದಲ ಹಂತದ ಚುನಾವಣೆಯಲ್ಲಿ 67.67% ಮತದಾನವಾಗಿತ್ತು.
Apr 23, 2019, 6:04 pm IST

ರಾಜ್ಯದ ಬಹುತೇಕ ಕಡೆಗಳಲ್ಲಿ ಶಾಂತಿಯುತ ಮತದಾನ ದಾಖಲು
Apr 23, 2019, 6:04 pm IST

14 ಕ್ಷೇತ್ರಗಳ ಮತದಾನದ ಅವಧಿ ಮುಕ್ತಾಯ
Apr 23, 2019, 5:48 pm IST

ಮಧ್ಯಾಹ್ನ 05 ಗಂಟೆಯ ವರೆಗೆ ದಾಖಲಾದ ಮತದಾನದ ಪ್ರಮಾಣ: ಗುಲ್ಬರ್ಗ(ಕಲಬುರಗಿ)51.75%, ರಾಯಚೂರು 51.75%, ಬೀದರ್ 56.90%, ಕೊಪ್ಪಳ 60.66%, ಬಳ್ಳಾರಿ 61.83%, ಹಾವೇರಿ 63.22%, ಧಾರವಾಡ 61.95, %, ಉತ್ತರ ಕನ್ನಡ 65.58%, ದಾವಣಗೆರೆ 66.38%, ಶಿವಮೊಗ್ಗ, 68.39% ಚಿಕ್ಕೋಡಿ 64.59, ಬೆಳಗಾವಿ 58.72%, ಬಾಗಲಕೋಟೆ 63.78 ವಿಜಯಪುರ(ಬಿಜಾಪುರ) 53.85%
Apr 23, 2019, 5:37 pm IST

5 ಗಂಟೆವರೆಗೆ ಶೇ.60.42 ರಷ್ಟು ಮತದಾನ ದಾಖಲು
Apr 23, 2019, 4:51 pm IST

ಕರ್ನಾಟಕದಲ್ಲಿ ಇದುವರೆಗೆ ಶೇ51.6 ರಷ್ಟು ಮತದಾನ ದಾಖಲು. ಕೊಪ್ಪಳದಲ್ಲಿ ಶೇ.60 ರಷ್ಟು ಮತದಾನ.
Apr 23, 2019, 3:47 pm IST

ಮಧ್ಯಾಹ್ನ 03 ಗಂಟೆಯ ವರೆಗೆ ದಾಖಲಾದ ಮತದಾನದ ಪ್ರಮಾಣ: ಗುಲ್ಬರ್ಗ(ಕಲಬುರಗಿ)42.01%, ರಾಯಚೂರು 45.95%, ಬೀದರ್ 47.07%, ಕೊಪ್ಪಳ 52.17%, ಬಳ್ಳಾರಿ 52.86%, ಹಾವೇರಿ 50.24%, ಧಾರವಾಡ 51.59%, ಉತ್ತರ ಕನ್ನಡ 53.48%, ದಾವಣಗೆರೆ 53.90%, ಶಿವಮೊಗ್ಗ, 54.88% ಚಿಕ್ಕೋಡಿ 53.50, ಬೆಳಗಾವಿ 48.66%, ಬಾಗಲಕೋಟೆ 52.09 ವಿಜಯಪುರ(ಬಿಜಾಪುರ) 43.83%
Apr 23, 2019, 3:00 pm IST

ಬಾಗಲಕೋಟೆಯಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ.
Apr 23, 2019, 2:23 pm IST

1:30 ರವರೆಗೆ ಕರ್ನಾಟಕದಲ್ಲಿ ಶೇ.36.74 ರಷ್ಟು ಮತದಾನ
Apr 23, 2019, 1:33 pm IST

ಚುನಾವಣೆ ಫಲಿತಾಂಶದ ನಂತರ ಮುಖ್ಯಮಂತ್ರಿ ರಾಜೀನಾಮೆ ನೀಡ್ತಾರೆ: ಬಳ್ಳಾರಿಯಲ್ಲಿ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಹೇಳಿಕೆ
Apr 23, 2019, 12:37 pm IST

ಇದುವರೆಗೆ ಶೇ.21.05 ರಷ್ಟು ಮತದಾನ ದಾಖಲು
Apr 23, 2019, 12:00 pm IST

11 ಗಂಟೆಯ ವರೆಗೆ ದಾಖಲಾದ ಮತದಾನದ ಪ್ರಮಾಣ: ಗುಲ್ಬರ್ಗ(ಕಲಬುರಗಿ)18.69%, ರಾಯಚೂರು 20.04%, ಬೀದರ್ 19.08%, ಕೊಪ್ಪಳ 21.80%, ಬಳ್ಳಾರಿ 23.66%, ಹಾವೇರಿ18.10%, ಧಾರವಾಡ 21.48%, ಉತ್ತರ ಕನ್ನಡ 22.33%, ದಾವಣಗೆರೆ 20.51%, ಶಿವಮೊಗ್ಗ, 24.58% ಚಿಕ್ಕೋಡಿ 23.07%, ಬೆಳಗಾವಿ 19.99%, ಬಾಗಲಕೋಟೆ 21.71, ವಿಜಯಪುರ(ಬಿಜಾಪುರ) 18.99%
Apr 23, 2019, 11:38 am IST

ನನ್ನ ಸಹೋದರ ಸತೀಶ್ ಜಾರಕಿಹೊಳಿಗೆ ತಲೆಕೆಟ್ಟಿದೆ: ಮತದಾನದ ನಂತರ ರಮೇಶ್ ಜಾರಕಿಹೊಳಿ ಹೇಳಿಕೆ
Apr 23, 2019, 11:21 am IST

ಉತ್ತರ ಕನ್ನಡದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಮತದಾನ
Apr 23, 2019, 11:16 am IST

ಕಲಬುರಗಿ ಜಿಲ್ಲೆಯ ಗುಂಡಗುರ್ತಿ ಎಂಬಲ್ಲಿ ಮತಗಟ್ಟೆ ಸಂಖಕ್ಯೆ 26 ರಲ್ಲಿ ಮತಚಲಾಯಿಸಿದ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಮತ್ತು ಪತ್ನಿ ಶ್ರುತಿ ಖರ್ಗೆ
Apr 23, 2019, 11:06 am IST

ಕಲಬುರಗಿಯ ಬಸವನಗರ ಮತಗಟ್ಟೆ ಸಂಖ್ಯೆ 119 ರಲ್ಲಿ ಮತಚಲಾಯಿಸಿದ ಮಲ್ಲಿಕಾರ್ಜುನ ಖರ್ಗೆ
Apr 23, 2019, 11:05 am IST

ಗೋಕಾಕ್ ನಲ್ಲಿ ಮತದಾನ ಮಾಡಿದ ರಮೇಶ್ ಜಾರಕಿಹೊಳಿ
Apr 23, 2019, 10:29 am IST

2ನೇ ಹಂತದ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ (ಬಿಜೆಪಿ) ಮತ್ತು ಮಧು ಬಂಗಾರಪ್ಪ (ಕಾಂಗ್ರೆಸ್‌-ಜೆಡಿಎಸ್) ಎದುರಾಳಿಗಳು. ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಕಣದಲ್ಲಿರುವುದು ಕುತೂಹಲಕ್ಕೆ ಕಾರಣವಾಗಿದೆ.
Apr 23, 2019, 10:17 am IST

9 ಗಂಟೆಯವರೆಗೆ ಕರ್ನಾಟಕ 14 ಕ್ಷೇತ್ರಗಳಲ್ಲಿ ಶೇ.7.44ರಷ್ಟು ಮತದಾನ
Apr 23, 2019, 9:58 am IST

ಗುಲ್ಬರ್ಗಾ(ಕಲಬುರಗಿ) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರು ಮತದಾನಕ್ಕೂ ಮುನ್ನ ಕಲಬುರಗಿಯ ಶರಣ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಈ ಕ್ಷೇತ್ರದಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎದುರಿಸಲಿದ್ದಾರೆ.
Apr 23, 2019, 9:56 am IST

ಶಿಕಾರಿಪುರದಲ್ಲಿ ಮತಚಲಾಯಿಸುವ ಮುನ್ನ ಹುಚ್ಚರಾಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ.
Apr 23, 2019, 9:55 am IST

ಶಿವಮೊಗ್ಗ

ಶಿಕಾರಿಪುರ ಮತಗಟ್ಟೆಯಲ್ಲಿ ಮತಚಲಾಯಿಸಿದ ಶಿವಮೊಗ್ಗ ಕ್ಷೇತ್ರದ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ
Apr 23, 2019, 9:54 am IST

ಶಿವಮೊಗ್ಗ ಮತ್ತು ಕಲಬುರಗಿ ಕ್ಷೇತ್ರದ ಫಲಿತಾಂಶ ಕುತೂಹಲ ಕೆರಳಿಸಿದೆ.
Apr 23, 2019, 9:54 am IST

2,43,03,279 ಮತದಾರರು ಮತದಾನ ಮಾಡುವ ಹಕ್ಕು ಪಡೆದಿದ್ದಾರೆ.
Apr 23, 2019, 9:54 am IST

ಒಟ್ಟು 237 ಅಭ್ಯರ್ಥಿಗಳು ಕಣದಲ್ಲಿದ್ದಾರೆ
Apr 23, 2019, 9:54 am IST

ಬೆಳಿಗ್ಗೆ 7 ಗಂಟೆಯಿಂದ ಆರಂಭವಾದ ಮತದಾನ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+