ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಿಂದ ಲೋಕಸಭೆಗೆ ಮೋದಿ ಸ್ಪರ್ಧೆ: ಬಿಎಸ್ವೈ ಪ್ರತಿಕ್ರಿಯೆ ಏನು?

|
Google Oneindia Kannada News

Recommended Video

ಮೋದಿ ಯಾವ ರಾಜ್ಯದಿಂದ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ..! | Oneindia Kannada

ಬೆಂಗಳೂರು, ಅಕ್ಟೋಬರ್ 08:ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಿಂದ ಲೋಕಸಭೆಗೆ ಚುನಾವಣೆ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ. ಈ ಬಗ್ಗೆ ಯಾವುದೇ ರಹಸ್ಯ ಸಮೀಕ್ಷೆ ನಡೆಸಿಲ್ಲ. ಈ ಬಗ್ಗೆ ಯಾವುದೇ ಸೂಚನೆ ಕೂಡಾ ಬಂದಿಲ್ಲ ಎಂದು ಬಿಜೆಪಿ ಕರ್ನಾಟಕದ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಸೋಮವಾರದಂದು ಸ್ಪಷ್ಟಪಡಿಸಿದ್ದಾರೆ.

ಮೋದಿ ಅವರು ಉತ್ತರ ಭಾರತದ ವಾರಣಾಸಿ ಕ್ಷೇತ್ರವಲ್ಲದೆ ದಕ್ಷಿಣ ಭಾರತದ ಒಂದು ಕ್ಷೇತ್ರದಿಂದಲೂ ಸ್ಪರ್ಧಿಸಲು ಮುಂದಾಗಿದ್ದಾರೆ. ಮೋದಿ ಅವರ ಸ್ಪರ್ಧೆಗೆ ಯಾವ ಕ್ಷೇತ್ರ ಸೂಕ್ತ ಎಂಬುದರ ಬಗ್ಗೆ ಸಮೀಕ್ಷೆ ನಡೆಸಿ, ವರದಿ ನೀಡುವಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಸೂಚಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಎಬಿಪಿ ನ್ಯೂಸ್ ಸಮೀಕ್ಷೆ : ಮತ್ತೆ ಕೇಂದ್ರದಲ್ಲಿ ಮೋದಿ ಸರ್ಕಾರ್ಎಬಿಪಿ ನ್ಯೂಸ್ ಸಮೀಕ್ಷೆ : ಮತ್ತೆ ಕೇಂದ್ರದಲ್ಲಿ ಮೋದಿ ಸರ್ಕಾರ್

ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಸೂಚನೆ ನಮಗೆ ಸಿಕ್ಕಿಲ್ಲ. ಮೋದಿ ಅವರು ಬಯಸಿದರೆ ಯಾವ ಕ್ಷೇತ್ರದಿಂದ ಬೇಕಾದರೂ ಗೆಲ್ಲಿಸಿ ಲೋಕಸಭೆಗೆ ಕಳಿಸುತ್ತೇವೆ ಎಂದು ಹೇಳಿದರು.

ಬಿ ಶ್ರೀರಾಮುಲು ಅವರು ಬಳ್ಳಾರಿಯ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿರುವ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಅಲ್ಲಿನ ಅಭ್ಯರ್ಥಿ ಆಯ್ಕೆ ಹೊಣೆಯನ್ನು ಶ್ರೀರಾಮುಲು ಅವರಿಗೆ ನೀಡಲಾಗಿದೆ ಎಂದರು.

ಯಾವ ಯಾವ ಕ್ಷೇತ್ರದಲ್ಲಿ ಮೋದಿ ಸ್ಪರ್ಧೆ ಸಾಧ್ಯತೆ

ಯಾವ ಯಾವ ಕ್ಷೇತ್ರದಲ್ಲಿ ಮೋದಿ ಸ್ಪರ್ಧೆ ಸಾಧ್ಯತೆ

ಯಾವ ಯಾವ ಕ್ಷೇತ್ರದಲ್ಲಿ ಮೋದಿ ಸ್ಪರ್ಧೆ ಸಾಧ್ಯತೆ? ಎಂಬುದರ ಬಗ್ಗೆ ಮೊದಲಿಗೆ ಸಮೀಕ್ಷೆ ನಡೆಸಲಾಗಿದೆ. ಮುಖ್ಯವಾಗಿ ಕರ್ನಾಟಕದ ಉತ್ತರ ಕನ್ನಡ, ದಕ್ಷಿಣ ಕನ್ನಡದ ಕರಾವಳಿ ಕರ್ನಾಟಕದ ಒಂದು ಕ್ಷೇತ್ರವನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಇದೆಲ್ಲವೂ ಊಹಾಪೋಹ ಸುದ್ದಿ ಈ ಬಗ್ಗೆ ಯಾವುದೇ ಸೂಚನೆಯನ್ನು ಪಕ್ಷದ ಹೈಕಮಾಂಡ್ ನೀಡಿಲ್ಲ ಎಂದು ಬಿಜೆಪಿ ಮೂಲಗಳು ಸ್ಪಷ್ಟಪಡಿಸಿವೆ.

ಕಳೆದ ಬಾರಿ ವಡೋದರಾ ಹಾಗೂ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಕಂಡಿದ್ದ ಮೋದಿ ಅವರು ಈ ಬಾರಿ ದಕ್ಷಿಣ ರಾಜ್ಯಗಳ ಒಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ಅಚ್ಚರಿ ಪಡಬೇಕಾಗಿಲ್ಲ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ಸಿಕಂದರಾಬಾದ್ ನಿಂದ ಸ್ಪರ್ಧೆಗೆ ಅಧಿಕೃತ ಆಹ್ವಾನ

ಸಿಕಂದರಾಬಾದ್ ನಿಂದ ಸ್ಪರ್ಧೆಗೆ ಅಧಿಕೃತ ಆಹ್ವಾನ

ಪ್ರಧಾನಿ ನರೇಂದ್ರ ಮೋದಿ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದ ಕ್ಷೇತ್ರವೊಂದರಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ತೆಲಂಗಾಣದಿಂದ ಪ್ರಧಾನಿ ಮೋದಿ ಅವರು ಸ್ಪರ್ಧಿಸುವಂತೆ ಅಲ್ಲಿನ ಬಿಜೆಪಿ ನಾಯಕರು ಮನವಿ ಸಲ್ಲಿಸಿದ್ದಾರೆ.ಬಿಜೆಪಿ ನಾಯಕ ಬಂಡಾರು ದತ್ತಾತ್ರೇಯ ಅವರ ನೇತೃತ್ವದ ಬಿಜೆಪಿ ಮುಖಂಡರು, ಈ ಕುರಿತಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲಿಸುವುದಾಗಿ ಅಮಿತ್ ಅವರು ಭರವಸೆ ನೀಡಿದ್ದಾರೆ.

ಮೋದಿಗೆ ತೆಲಂಗಾಣಕ್ಕಿಂತ ಕರ್ನಾಟಕವೇ ಸೇಫ್

ಮೋದಿಗೆ ತೆಲಂಗಾಣಕ್ಕಿಂತ ಕರ್ನಾಟಕವೇ ಸೇಫ್

ಮೋದಿ ಅವರು ಸಿಕಂದರಾಬಾದಿನಿಂದ ಸ್ಪರ್ಧಿಸುವುದರಿಂದ ದಕ್ಷಿಣ ಭಾರತದಲ್ಲಿ ಬಿಜೆಪಿ ತನ್ನ ವರ್ಚಸ್ಸು ಇನ್ನಷ್ಟು ಬೆಳೆಸಿಕೊಳ್ಳಬಹುದಾಗಿದೆ. ಇದು ಸೇಫ್ ಆಗಿರುವ ಕ್ಷೇತ್ರವೂ ಹೌದು. ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತೆಲಂಗಾಣದ ಮೇದಕ್ ಹಾಗೂ ಕರ್ನಾಟಕದ ಚಿಕ್ಕಮಗಳೂರಿನಿಂದ ಲೋಕಸಭೆಗೆ ಸ್ಪರ್ಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು ಎಂದು ದತ್ತಾತ್ರೇಯ ಹೇಳಿದ್ದಾರೆ.

ಆದರೆ, ಮೋದಿ ಅವರ ಅಲೆ ಕರಾವಳಿ ಕರ್ನಾಟಕದಲ್ಲಿ ಜೋರಾಗಿದ್ದು, ಕರ್ನಾಟಕವೇ ಮೋದಿ ಅವರಿಗೆ ಸೇಫ್ ಎಂದು ಕರ್ನಾಟಕ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ, ಈ ಬಗ್ಗೆ ಸದ್ಯಕ್ಕಂತೂ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಕಡಿಮೆ

ಸದ್ಯಕ್ಕಂತೂ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಕಡಿಮೆ

ಸದ್ಯಕ್ಕಂತೂ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಕಡಿಮೆ

ಮಾಜಿ ಪ್ರಧಾನಿ ಪಿ.ವಿ ನರಸಿಂಹ ರಾವ್ ಅವರು ಕರ್ನೂಲಿನ ನಂದ್ಯಾಲ್ ಹಾಗೂ ಮಹಾರಾಷ್ಟ್ರದ ರಾಮ್ ಟೆಕ್ ನಿಂದ ಸ್ಪರ್ಧಿಸಿದ್ದರು. ಮೋದಿ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ವಾರಣಾಸಿ ಹಾಗೂ ವಡೋದರಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕೊನೆಗೆ ವಾರಣಾಸಿ ಕ್ಷೇತ್ರವನ್ನು ಉಳಿಸಿಕೊಂಡರು.

ಮೋದಿ ಅವರು ದಕ್ಷಿಣದಲ್ಲಿ ಬಿಜೆಪಿ ಪತಾಕೆ ಹಾರಿಸಲು ಹರ ಸಾಹಸ ಪಡುತ್ತಿದ್ದು, ನೇರವಾಗಿ ಸ್ಪರ್ಧಿಸಿ ಗೆಲುವು ಸಾಧಿಸುವುದರಿಂದ ಇಲ್ಲಿನ ಪ್ರಾದೇಶಿಕ ಪಕ್ಷಗಳ ಜತೆಗಿನ ಮೈತ್ರಿ ಬಲಗೊಳ್ಳಲಿದೆ ಎಂಬ ಮಾತಿದೆ. ಆದರೆ, ಬಿಜೆಪಿಗೆ ದಕ್ಷಿಣದಲ್ಲಿ ನೇರವಾಗಿ ಯುದ್ಧ ಸಾರುವ ಅಗತ್ಯ ಇನ್ನೂ ಕಂಡು ಬಂದಿಲ್ಲ.

English summary
Lok Sabha Elections 2019: Karnataka BJP president BS Yeddyurappa has declined reports on PM Modi contesting Lok Sabha Elections 2019 from Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X