ಕಾಂಗ್ರೆಸ್ 2ನೇ ಪಟ್ಟಿಯಲ್ಲಿ ಮೊಯ್ಲಿಗೆ ಟಿಕೆಟ್
ನವದೆಹಲಿ, ಮಾ.14 : ಚಿಕ್ಕಬಳ್ಳಾಪುರದಲ್ಲಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸ್ಪರ್ಧಿಸಲಿದ್ದಾರೆಯೇ ಎಂಬ ಕುತೂಹಲಗಳಿಗೆ ಕಾಂಗ್ರೆಸ್ ತೆರೆ ಎಳೆದಿದ್ದು, ಗುರುವಾರ ಬಿಡುಗಡೆ ಮಾಡಿದ 2ನೇ ಪಟ್ಟಿಯಲ್ಲಿ ಅವರಿಗೆ ಟಿಕೆಟ್ ನೀಡಿದೆ. ಕರ್ನಾಟಕದ 24 ಕ್ಷೇತ್ರಗಳ ಅಭ್ಯರ್ಥಿಗಳನ್ನು ಕಾಂಗ್ರೆಸ್ ಅಂತಿಮಗೊಳಿಸಿದ್ದು, 4 ಕ್ಷೇತ್ರಗಳ ಅಭ್ಯರ್ಥಿಗಳನ್ನು ಬಾಕಿ ಉಳಿಸಿಕೊಂಡಿದೆ.
ಗುರುವಾರ ದೆಹಲಿಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯ ಬಳಿಕ ಕಾಂಗ್ರೆಸ್ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ನನಗೆ ಟಿಕೆಟ್ ಬೇಡ ಎಂದು ಹಠ ಹಿಡಿದಿದ್ದ ಸಿಎಂ ಸಿದ್ದರಾಮಯ್ಯ ಸಂಪುಟದ ಸಕ್ಕರೆ ಮತ್ತು ಮುಜರಾಯಿ ಖಾತೆ ಸಚಿವ ಪ್ರಕಾಶ್ ಹುಕ್ಕೇರಿ ಅವರಿಗೆ ಚಿಕ್ಕೋಡಿ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.

ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಪಕ್ಷದ ಹಿರಿಯ ನಾಯಕ ಸಿ.ಕೆ.ಜಾಫರ್ ಷರೀಫ್ ಅವರ ಬದಲು, ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಒಟ್ಟು 24 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಹಾವೇರಿ, ಧಾರವಾಡ, ಉತ್ತರ ಕನ್ನಡ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ. [ಕಾಂಗ್ರೆಸ್ ಮೊದಲ ಪಟ್ಟಿ ನೋಡಿ]
ಉತ್ತರದ ಘೋಷಣೆ ಬಾಕಿ : ಅಭ್ಯರ್ಥಿ ಆಯ್ಕೆಗಾಗಿ ಆಂತರಿಕ ಚುನಾವಣೆ ನಡೆದ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸಿ ನಾರಾಯಣ ಸ್ವಾಮಿ ಜಯಗಳಿಸಿದ್ದು, ಎಐಸಿಸಿ ಅವರು ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಬೇಕಾಗಿದೆ. [ಉತ್ತರದಲ್ಲಿ ನಾರಾಯಣಸ್ವಾಮಿಗೆ ಗೆಲುವು]
ಕಾಂಗ್ರೆಸ್ 10 ಅಭ್ಯರ್ಥಿಗಳು
ಚಿಕ್ಕಬಳ್ಳಾಪುರ - ವೀರಪ್ಪ ಮೊಯ್ಲಿ
ಬೆಂಗಳೂರು ಕೇಂದ್ರ - ರಿಜ್ವಾನ್ ಅರ್ಷದ್
ಬೆಳಗಾವಿ - ಲಕ್ಷ್ಮೀ ಹೆಬ್ಬಾಳಕರ್
ಚಿಕ್ಕೋಡಿ - ಪ್ರಕಾಶ್ ಹುಕ್ಕೇರಿ
ಕೊಪ್ಪಳ - ಬಸವರಾಜ ಹಿಟ್ನಾಳ್
ಬಾಗಲಕೋಟೆ - ಅಜಯ್ ಸರನಾಯಕ್
ಚಿತ್ರದುರ್ಗ - ಬಿ.ಎನ್.ಚಂದ್ರಪ್ಪ
ರಾಯಚೂರು - ಬಿವಿ ನಾಯಕ್
ಶಿವಮೊಗ್ಗ - ಮಂಜುನಾಥ ಭಂಡಾರಿ
ದಕ್ಷಿಣ ಕನ್ನಡ - ಜನಾರ್ದನ ಪೂಜಾರಿ [ಬಿಜೆಪಿ 2ನೇ ಪಟ್ಟಿ ನೋಡಿ]












Click it and Unblock the Notifications