ಮಂಗಳೂರು ಮನೆಯನ್ನಾದರೂ ಮಾಡ್ಕೊಳಿ: ಕುಮಾರಸ್ವಾಮಿಗೆ ಕಿರಿಕ್ ಮಾಡುತ್ತಿರುವ ಕಾಂಗ್ರೆಸ್ ಟ್ವೀಟ್
ಅದೇನ್ ಕಥೆಯೋ ಏನೋ.. ಯುಗಾದಿ ಬಾಡೂಟ ವಿಚಾರ ಕೂಡ ಈಗ ರಾಜಕೀಯದ ರಂಗು ಪಡೆದಿದೆ. ಅದ್ರಲ್ಲೂ ಕುಮಾರಸ್ವಾಮಿ ಅವರ ಬಿಡದಿ ತೋಟದ ಮನೆ ವಿಚಾರಕ್ಕಾಗಿ ಕಾಂಗ್ರೆಸ್ & ಬಿಜೆಪಿ ಹಾಗೂ ಜೆಡಿಎಸ್ ನಡುವೆ ಮಹಾಯುದ್ಧ ಆರಂಭ ಆಗಿದೆ. ಒಂದು ಕಡೆ ಕುಮಾರಸ್ವಾಮಿ ಅವರ ಬಿಡದಿ ತೋಟದ ಮನೆಯಲ್ಲಿ ಕಾರ್ಯಕರ್ತರು & ಮುಖಂಡರಿಗೆ ಬಾಡೂಟ ವ್ಯವಸ್ಥೆಯ ಮಾಡಲಾಗಿದೆ ಎಂಬ ಆರೋಪ ಮಾಡುತ್ತಿರುವಾಗಲೇ ಕರ್ನಾಟಕ ಕಾಂಗ್ರೆಸ್ ಹೊಸ ಆರೋಪದ ಬಾಂಬ್ ಸಿಡಿಸಿದೆ!
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ & ಎನ್‌ಡಿಎ (ಬಿಜೆಪಿ + ಜೆಡಿಎಸ್) ನಡುವೆ ಫೈಟಿಂಗ್ ನಡೆಯುತ್ತಿದೆ. ಹೀಗಾಗಿ ಎರಡು ಕಡೆ ಗೆಲುವಿಗೆ ತಿಕ್ಕಾಟ ಜೋರಾಗಿರುವ ಸಮಯದಲ್ಲೇ, ಟ್ವೀಟ್ ಮೂಲಕ ಕಾಂಗ್ರೆಸ್ ಕುಮಾರಸ್ವಾಮಿ ಅವರಿಗೆ ಚಾಲೆಂಜ್ ಹಾಕಿದೆ. ಹಾಗಾದ್ರೆ ಈಗ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಹಾಕಿದ ಸವಾಲು ಎಂತಹದ್ದು.? ಈ ಮೂಲಕ ಲೋಕಸಭೆ ಚುನಾವಣೆ ಸಮಯದಲ್ಲಿ ಶುರುವಾದ ಹೊಸ ತಿಕ್ಕಾಟ ಎಂತಹದ್ದು? 'ಮಂಗಳೂರು ಮನೆಯನ್ನಾದರೂ ಮಾಡ್ಕೊಳಿ' ಅಂತಾ ಕಾಂಗ್ರೆಸ್ ಹೇಳಿದ್ದು ಯಾಕೆ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಕುಮಾರಸ್ವಾಮಿಗೆ ಕಾಂಗ್ರೆಸ್ ಚಾಲೆಂಜ್!
ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಚಾಲೆಂಜ್ ಹಾಕಿರುವ ಕರ್ನಾಟಕ ಕಾಂಗ್ರೆಸ್, 'ನಿಮ್ಮ ಹೆಡ್ಡಾಫೀಸ್ ಯಾವುದಾದರೆ ನಮಗೇನು ಸ್ವಾಮಿ, ತೋಟದ ಮನೆಯನ್ನಾದರೂ ಹೆಡ್ಡಾಫೀಸ್ ಮಾಡ್ಕೊಳಿ, ಬೆಂಗಳೂರು ಮನೆಯನ್ನಾದರೂ ಮಾಡ್ಕೊಳಿ, ಮಂಗಳೂರು ಮನೆಯನ್ನಾದರೂ ಮಾಡ್ಕೊಳಿ, ತಾಜ್ ವೆಸ್ಟ್‌ಎಂಡ್‌ನಾದರೂ ಮಾಡ್ಕೊಳಿ, ಹೆಡ್ಡಾಫೀಸ್ ನಾದರೂ ಮಾಡ್ಕೊಳಿ, ಬ್ರಾಂಚ್ ಆಫೀಸ್‌ನಾದರೂ ಮಾಡ್ಕೊಳಿ, ಅದು ನಿಮ್ಮ ಇಷ್ಟ ನಿಮ್ಮ ಕಷ್ಟ.. ನಮಗೆ ಯಾವ ಕಷ್ಟವೂ ಇಲ್ಲ, ನಷ್ಟವೂ ಇಲ್ಲ.. ಆದರೆ ಚುನಾವಣೆ ನೀತಿ ಸಂಹಿತೆಯ ಉಲ್ಲಂಘಿಸಿ ಬಾಡೂಟ ಹಾಕಿಸಲು ತಯಾರಿ ಮಾಡಿಕೊಂಡಿದ್ದೇಕೆ? ಹೇಳಿ..' ಎಂದು ಟ್ವೀಟ್ ಮೂಲಕ, ಪ್ರಶ್ನೆ ಕೇಳಿದೆ ಕರ್ನಾಟಕ ಕಾಂಗ್ರೆಸ್.
ಸೋಷಿಯಲ್ ಮೀಡಿಯಾದಲ್ಲೂ ಭರ್ಜರಿ ಚರ್ಚೆ!
ಈ ಮೂಲಕ ಕರ್ನಾಟಕ ಕಾಂಗ್ರೆಸ್ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರ ನಡುವೆ ಇದೀಗ ನೇರ ಯುದ್ಧ ಶುರುವಾದಂತೆ ಕಾಣುತ್ತಿದೆ. ಅದರಲ್ಲೂ, ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನಿರ್ಧಾರ ಕೈಗೊಂಡ ನಂತರವಂತು ತಿಕ್ಕಾಟ ಮತ್ತಷ್ಟು ಜೋರಾಗಿದೆ. ಹೀಗೆ ಲೋಕಸಭೆ ಚುನಾವಣೆ ಮುಗಿಯುವ ತನಕ, ಈ ತಿಕ್ಕಾಟ ಕೂಡ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಮತ್ತೊಂದ್ಕಡೆ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೂ ಭಾರಿ ಚರ್ಚೆ ನಡೆಯುತ್ತಿದೆ.
ನಿಮ್ಮ ಹೆಡ್ಡಾಫೀಸ್ ಯಾವುದಾದರೆ ನಮಗೇನು ಸ್ವಾಮಿ,
— Karnataka Congress (@INCKarnataka) April 10, 2024
ತೋಟದ ಮನೆಯನ್ನಾದರೂ ಹೆಡ್ಡಾಫೀಸ್ ಮಾಡ್ಕೊಳಿ,
ಬೆಂಗಳೂರು ಮನೆಯನ್ನಾದರೂ ಮಾಡ್ಕೊಳಿ,
ಮಂಗಳೂರು ಮನೆಯನ್ನಾದರೂ ಮಾಡ್ಕೊಳಿ,
ತಾಜ್ ವೆಸ್ಟ್‌ಎಂಡ್‌ನಾದರೂ ಮಾಡ್ಕೊಳಿ,
ಹೆಡ್ಡಾಫೀಸ್ ನಾದರೂ ಮಾಡ್ಕೊಳಿ, ಬ್ರಾಂಚ್ ಆಫೀಸ್‌ನಾದರೂ ಮಾಡ್ಕೊಳಿ, ಅದು ನಿಮ್ಮ ಇಷ್ಟ ನಿಮ್ಮ ಕಷ್ಟ..
ನಮಗೆ ಯಾವ ಕಷ್ಟವೂ ಇಲ್ಲ,… pic.twitter.com/TBwbaaMZqM
2024ರ ಲೋಕಸಭೆ ಚುನಾವಣೆಗೆ ಅಖಾಡ ಸಿದ್ಧವಾಗಿದೆ ಅಭ್ಯರ್ಥಿಗಳೂ ಸಿದ್ಧವಾಗಿ ಕೂತಿದ್ದಾರೆ. ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿ ರಣಕಹಳೆ ಮೊಗಳಗಿಸಿದೆ. ಇನ್ನೇನು ಕೆಲ ದಿನಗಳಲ್ಲಿ ಭಾರತೀಯರು ಹೊಸ ಸರ್ಕಾರ ಆಯ್ಕೆ ಮಾಡಲು ಮತದಾನ ಮಾಡಲಿದ್ದು, ಇದಕ್ಕೆ ಬೇಕಾದ ತಯಾರಿ ಕೂಡ ಸಾಗಿವೆ. ಹಾಗೆ ಕರ್ನಾಟಕದಲ್ಲಿ ಕೂಡ ಎಲ್ಲ ರೀತಿ ತಯಾರಿ ನಡೆದಿದೆ. ಕರ್ನಾಟಕದಲ್ಲಿ ಒಟ್ಟು 2 ಹಂತದಲ್ಲಿ ಚುನಾವಣೆ ಇದ್ದು, ಏಪ್ರಿಲ್ 26 ರಂದು & ಮೇ 7 ರಂದು ಕರ್ನಾಟಕದಲ್ಲಿ ವೋಟಿಂಗ್ ನಡೆಯಲಿದ್ದು, ಈ ಫಲಿತಾಂಶ ಜೂನ್ 4ಕ್ಕೆ ಹೊರಬೀಳಲಿದೆ.












Click it and Unblock the Notifications