Lok Sabha Election 2024: ಮತದಾರರಿಗೆ ವಿಶೇಷ ಬಸ್‌ & ರೈಲುಗಳ ವ್ಯವಸ್ಥೆ- ಸಂಪೂರ್ಣ ವಿವರ ತಿಳಿಯಿರಿ!

ಲೋಕಸಭೆ ಚುನಾವಣೆ 2024ರ ಮತದಾನ ಶುರುವಾಗಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿದೆ. ದೂರ ದೂರದ ಊರುಗಳಿಗೆ ಮತದಾರರು ಹೋಗಿ ಮತ ಹಾಕಬೇಕಿದೆ. ಹೀಗಾಗಿ ರಾಜ್ಯ ಸರ್ಕಾರ ಹಾಗೂ ರೈಲ್ವೆ ಇಲಾಖೆ ಮತದಾರರಿಗೆ ಅಂತಾನೆ ವಿಶೇಷ ವ್ಯವಸ್ಥೆ ಕಲ್ಪಿಸಿ, ಸಕಲ ಅನುಕೂಲ ಮಾಡಿಕೊಟ್ಟಿದೆ. ಹಾಗಾದ್ರೆ ವಿಶೇಷ ರೈಲು & ಬಸ್ ವೇಳಾಪಟ್ಟಿ ಹೇಗಿದೆ? ಬನ್ನಿ ತಿಳಿಯೋಣ.

ಲೋಕಸಭೆ ಚುನಾವಣೆ ಅಂದ್ರೆ ಒಂದು ರೀತಿ ಪ್ರಜಾಪ್ರಭುತ್ವದ ಹಬ್ಬ ಅಂತಾ ಹೇಳಬಹುದು. ಭಾರತದ ಲೋಕಸಭೆ ಚುನಾವಣೆ ಇಡೀ ಜಗತ್ತಿನ ಹಣೆಬರಹ ನಿರ್ಧಾರ ಮಾಡುತ್ತದೆ ಯಾಕಂದ್ರೆ ಇಡೀ ಜಗತ್ತಿಗೆ ಭಾರತ ಬೇಕೆ ಬೇಕು. ಹೀಗಿದ್ದಾಗ ಲೋಕಸಭೆ ಚುನಾವಣೆಗೆ ಮತದಾನವು ಇನ್ನು ಕೆಲವೇ ಗಂಟೆಗಳಲ್ಲಿ ಆರಂಭ ಆಗಲಿದೆ. ಈ ಸಮಯದಲ್ಲಿ ವಿಶೇಷ ಬಸ್ & ರೈಲು ವ್ಯವಸ್ಥೆ ಮಾಡಿರುವುದು ಮತದಾರರಿಗೆ ಕೂಡ ಸಾಕಷ್ಟು ನಿರಾಳ ತಂದಿದೆ. ನೂರಾರು ಕಿಲೋ ಮೀಟರ್ ದೂರದ ಊರಿಗೆ ಮತದಾರರು ಹೋಗಲು ವಿಶೇಷ ರೈಲು & ಬಸ್‌ಗಳ ವ್ಯವಸ್ಥೆಯಿಂದ ಈಗ ಅನುಕೂಲ ಆಗಲಿದ್ದು, ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

Lok Sabha Election 2024 Special buses and trains for voters check full details here

ಮತದಾರರಿಗೆ ವಿಶೇಷ ರೈಲು & ಬಸ್!

ಅಂದಹಾಗೆ ಇದೀಗ ಬಸ್ & ರೈಲು ವ್ಯವಸ್ಥೆನ ಮಾಡಿರುವುದು ತಮಿಳುನಾಡು ರಾಜ್ಯದಲ್ಲಿ. ಏಪ್ರಿಲ್ 19 ರಂದು ತಮಿಳುನಾಡು ರಾಜ್ಯದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಹೀಗೆ ಲೋಕಸಭೆ ಚುನಾವಣೆಗೆ ಮತದಾನ ಮಾಡಲು ತೆರಳುವ ಜನರಿಗೆ ಅಂತಾ ವಿಶೇಷ ಬಸ್ & ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಚೆನ್ನೈ ಮೂಲಕ ಕನ್ಯಾಕುಮಾರಿ ತನಕ, ಹಾಗೇ ಇದರ ಜೊತೆಗೆ ಚೆನ್ನೈ ಟು ಕೊಯಂಬತ್ತೂರಿಗೆ ರೈಲು ಹಾಗೂ ಬಸ್ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಮತ ಹಾಕುವವರಿಗೆ ಸಹಾಯಕ ಆಗಲಿ ಎಂದು, ಸಕಲ ವ್ಯವಸ್ಥೆ ಮಾಡಲಾಗಿದೆ. ಹಾಗಾದ್ರೆ ಬಸ್ & ರೈಲುಗಳು ಓಡಾಡುವ ಸಮಯ ಯಾವುದು?

ಏಪ್ರಿಲ್ 18 & 19ರಂದು ವ್ಯವಸ್ಥೆ

ಏಪ್ರಿಲ್ 18 ರಂದು ಸಂಜೆ 4.45ಕ್ಕೆ ಚೆನ್ನೈ ಮೂಲಕ ತೆರಳುವ ರೈಲು, ಮರುದಿನ ಅಂದರೆ ಏಪ್ರಿಲ್ 19ಕ್ಕೆ ಬೆಳಗ್ಗೆ 4.40ಕ್ಕೆ ಕನ್ಯಾಕುಮಾರಿ ತಲುಪಲಿದೆ. ಹಾಗೇ ಏಪ್ರಿಲ್ 19 & ಏಪ್ರಿಲ್ 21ಕ್ಕೆ ಅಲ್ಲಿಂದ ಚೆನ್ನೈಗೆ ರೈಲು ವ್ಯವಸ್ಥೆ ಮಾಡಲಾಗಿದೆ. ಇನ್ನು ಇದೇ ರೀತಿಯಾಗಿ ಏಪ್ರಿಲ್ 18 ರಂದು ಚೆನ್ನೈ ಟು ಕೊಯಂಬತ್ತೂರು ಕಡೆಗೆ ಕೂಡ ರೈಲು ವ್ಯವಸ್ಥೆ ಮಾಡಲಾಗಿದ್ದು, ಇದೇ ರೀತಿ ಬಸ್ ವ್ಯವಸ್ಥೆ ಕೂಡ ಮಾಡಲಾಗಿದೆ. ವಿಶೇಷ ಬಸ್ ವ್ಯವಸ್ಥೆಯ ತಮಿಳುನಾಡು ರಾಜ್ಯ ಸರ್ಕಾರ ಮಾಡಿದ್ದು, ಮತದಾರರಿಗೆ ಇದರಿಂದ ಸಾಕಷ್ಟು ಅನುಕೂಲ ಆಗಲಿದೆ.

ಒಟ್ನಲ್ಲಿ ಮತದಾರರಿಗೆ ಅನುಕೂಲ ಆಗಲಿ, ಮತ ಪ್ರಮಾಣ ಹೆಚ್ಚಾಗಲಿ ಎಂದು ಪ್ರತಿಯೊಂದು ಸರ್ಕಾರ ಕೂಡ ಕ್ರಮ ಕೈಗೊಂಡಿದೆ. ಹೀಗಾಗಿ, ಮತದಾರರು ಕೂಡ ತಮ್ಮ ಕರ್ತವ್ಯವನ್ನು ಪೂರೈಸಲು ಸಿದ್ಧರಾಗಿದ್ದು. ಇನ್ನೇನು ಭಾರತದ ಲೋಕಸಭಾ ಚುನಾವಣೆಗಾಗಿ ವೋಟಿಂಗ್‌ ಮಾಡಲು ಸಜ್ಜಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+