Lok Sabha Election 2024 Result: ಕರ್ನಾಟಕದ 28 ಕ್ಷೇತ್ರದಲ್ಲಿ ಸೋತವರು, ಗೆದ್ದವರು
ಬೆಂಗಳೂರು, ಜೂನ್ 04; ಲೋಕಸಭೆ ಚುನಾವಣೆ 2024ರ ಫಲಿತಾಂಶ ಘೋಷಣೆಯಾಗಿದೆ. ಕರ್ನಾಟಕದ ಚುನಾವಣೆ ವಿವಿಧ ಕಾರಣಕ್ಕೆ ಕುತೂಹಲಕ್ಕೆ ಕಾರಣವಾಗಿತ್ತು. ರಾಜ್ಯದ ಆಡಳಿತ ಪಕ್ಷವಾದ ಕಾಂಗ್ರೆಸ್ ಕೇವಲ 9 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಚುನಾವಣೆಯಲ್ಲಿ ಹಿನ್ನಡೆ ಕಂಡಿದೆ.
ಮಂಗಳವಾರ ಲೋಕಸಭೆ ಚುನಾವಣೆ ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಿದೆ. ಕರ್ನಾಟಕದ 28 ಕ್ಷೇತ್ರಗಳಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಜಯಗಳಿಸಿದೆ. ಜೆಡಿಎಸ್ 2 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಚ್. ಡಿ. ಕುಮಾರಸ್ವಾಮಿ (ಮಂಡ್ಯ). ಬಸವರಾಜ ಬೊಮ್ಮಾಯಿ (ಹಾವೇರಿ), ಜಗದೀಶ್ ಶೆಟ್ಟರ್ (ಬೆಳಗಾವಿ) ಗೆಲುವು ಸಾಧಿಸಿದ್ದಾರೆ. ಬೆಂಗಳೂರು ನಗರದ ಮೂರು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳು ಬಿಜೆಪಿಯ ಪಾಲಾಗಿವೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿರುವ ಡಾ. ಎಚ್. ಸಿ. ಮಹದೇವಪ್ಪ ಪುತ್ರ ಸುನೀಲ್ ಬೋಸ್ (ಚಾಮರಾಜನಗರ), ಈಶ್ವರ ಖಂಡ್ರೆ ಪುತ್ರ (ಸಾಗರ್ ಖಂಡ್ರೆ), ಸತೀಶ್ ಜಾರಕಿಹೊಳಿ ಪುತ್ರಿ (ಪ್ರಿಯಾಂಕಾ ಜಾರಕಿಹೊಳಿ) ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ಬಿಜೆಪಿ ನಾಯಕರಾದ ವಿ. ಸೋಮಣ್ಣ, ವಿಶ್ವೇಶ್ವರ ಹೆಗಡೆ ಕಾಗೇರಿ, ಡಾ. ಕೆ. ಸುಧಾಕರ್ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಸಂಸತ್ ಪ್ರವೇಶ ಮಾಡಿದ್ದಾರೆ. ರಾಜ್ಯದ 28 ಕ್ಷೇತ್ರಗಳಲ್ಲಿ ಗೆದ್ದವರು, ಸೋತವರ ಪಟ್ಟಿ ಇಲ್ಲಿದೆ. ನೋಡಿ.
| ಕ್ರ.ಸಂ | ಕ್ಷೇತ್ರ | ಗೆಲುವು | ಸೋಲು |
| 1 | ಬೆಳಗಾವಿ | ಜಗದೀಶ್ ಶೆಟ್ಟರ್ (ಬಿಜೆಪಿ) | ಮೃಣಾಲ್ ಹೆಬ್ಬಾಳ್ಕರ್ (ಕಾಂಗ್ರೆಸ್) |
| 2 | ಚಿಕ್ಕೋಡಿ | ಪ್ರಿಯಾಂಕಾ ಜಾರಕಿಹೊಳಿ (ಕಾಂಗ್ರೆಸ್) | ಅಣ್ಣಾ ಸಾಹೇಬ್ ಜೊಲ್ಲೆ(ಬಿಜೆಪಿ) |
| 3 | ವಿಜಯಪುರ | ರಮೇಶ್ ಜಿಗಜಿಣಗಿ (ಬಿಜೆಪಿ) | ಎಚ್‌ಆರ್ ರಾಜು ಆಲಗೂರ (ಕಾಂಗ್ರೆಸ್) |
| 4 | ಬೀದರ್ | ಸಾಗರ್ ಖಂಡ್ರೆ (ಕಾಂಗ್ರೆಸ್) | ಭಗವಂತ ಖೂಬಾ (ಬಿಜೆಪಿ) |
| 5 | ಬಾಗಲಕೋಟೆ | ಪಿಸಿ ಗದ್ದಿಗೌಡರ್ (ಬಿಜೆಪಿ) | ಸಂಯುಕ್ತಾ ಪಾಟೀಲ್ (ಕಾಂಗ್ರೆಸ್) |
| 6 | ಬಳ್ಳಾರಿ | ಇ. ತುಕಾರಾಂ (ಕಾಂಗ್ರೆಸ್) | ಬಿ. ಶ್ರೀರಾಮುಲು (ಬಿಜೆಪಿ) |
| 7 | ಕೊಪ್ಪಳ | ರಾಜಶೇಖರ್ ಹಿಟ್ನಾಳ್ (ಕಾಂಗ್ರೆಸ್) | ಡಾ. ಬಸವರಾಜ ಕವಟೂರು (ಬಿಜೆಪಿ) |
| 8 | ರಾಯಚೂರು | ಜಿ. ಕುಮಾರ ನಾಯಕ್ (ಕಾಂಗ್ರೆಸ್) | ರಾಜಾ ಅಮರೇಶ್ವರ ನಾಯಕ(ಬಿಜೆಪಿ) |
| 9 | ಉತ್ತರ ಕನ್ನಡ | ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ) | ಡಾ. ಅಂಜಲಿ ನಿಂಬಾಳ್ಕರ್ (ಕಾಂಗ್ರೆಸ್) |
| 10 | ಕಲಬುರಗಿ | ಡಾ. ರಾಧಾಕೃಷ್ಣ ದೊಡ್ಡಮನಿ (ಕಾಂಗ್ರೆಸ್) | ಡಾ. ಉಮೇಶ್ ಜಾಧವ್ (ಬಿಜೆಪಿ) |
| 11 | ಹಾವೇರಿ | ಬಸವರಾಜ ಬೊಮ್ಮಾಯಿ (ಬಿಜೆಪಿ) | ಆನಂದಸ್ವಾಮಿ ಗಡ್ಡದೇವರಮಠ (ಕಾಂಗ್ರೆಸ್) |
| 12 | ಧಾರವಾಡ | ಪ್ರಹ್ಲಾದ್ ಜೋಶಿ (ಬಿಜೆಪಿ) | ವಿನೋದ್ ಅಸೂಟಿ (ಕಾಂಗ್ರೆಸ್) |
| 13 | ದಾವಣಗೆರೆ | ಪ್ರಭಾ ಮಲ್ಲಿಕಾರ್ಜುನ್ (ಕಾಂಗ್ರೆಸ್) | ಗಾಯತ್ರಿ ಸಿದ್ದೇಶ್ವರ (ಬಿಜೆಪಿ) |
| 14 | ತುಮಕೂರು | ವಿ. ಸೋಮಣ್ಣ (ತುಮಕೂರು) | ಮುದ್ದಹನುಮೇ ಗೌಡ (ಕಾಂಗ್ರೆಸ್) |
| 15 | ಶಿವಮೊಗ್ಗ | ಬಿ. ವೈ. ರಾಘವೇಂದ್ರ (ಬಿಜೆಪಿ) | ಗೀತಾ ಶಿವರಾಜ್ ಕುಮಾರ್ (ಕಾಂಗ್ರೆಸ್) |
| 16 | ಉಡುಪಿ-ಚಿಕ್ಕಮಗಳೂರು | ಕೋಟ ಶ್ರೀನಿವಾಸ ಪೂಜಾರಿ (ಬಿಜೆಪಿ) | ಜಯಪ್ರಕಾಶ್ ಹೆಗಡೆ (ಕಾಂಗ್ರೆಸ್) |
| 17 | ದಕ್ಷಿಣ ಕನ್ನಡ | ಕ್ಯಾಪ್ಟನ್ ಬ್ರಿಜೇಶ್ ಚೌಟಾ (ಬಿಜೆಪಿ) | ಪದ್ಮರಾಜ್ (ಕಾಂಗ್ರೆಸ್) |
| 18 | ಚಾಮರಾಜನಗರ | ಸುನೀಲ್ ಬೋಸ್ (ಕಾಂಗ್ರೆಸ್) | ಎಸ್. ಬಾಲರಾಜು (ಬಿಜೆಪಿ) |
| 19 | ಮೈಸೂರು-ಕೊಡಗು | ಯದುವೀರ್ ಒಡೆಯರ್ (ಬಿಜೆಪಿ) | ಎಂ. ಲಕ್ಷ್ಮಣ (ಕಾಂಗ್ರೆಸ್) |
| 20 | ಮಂಡ್ಯ | ಎಚ್. ಡಿ. ಕುಮಾರಸ್ವಾಮಿ (ಜೆಡಿಎಸ್) | ಸ್ಟಾರ್ ಚಂದ್ರು (ಕಾಂಗ್ರೆಸ್) |
| 21 | ಬೆಂಗಳೂರು ಗ್ರಾಮಾಂತರ | ಡಾ. ಸಿ. ಎನ್. ಮಂಜುನಾಥ್ (ಬಿಜೆಪಿ) | ಡಿ. ಕೆ. ಸುರೇಶ್ (ಕಾಂಗ್ರೆಸ್) |
| 22 | ಬೆಂಗಳೂರು ಉತ್ತರ | ಶೋಭಾ ಕರಂದ್ಲಾಜೆ (ಬಿಜೆಪಿ) | ಪ್ರೊ. ರಾಜೀವ್ ಗೌಡ (ಕಾಂಗ್ರೆಸ್) |
| 23 | ಬೆಂಗಳೂರು ದಕ್ಷಿಣ | ತೇಜಸ್ವಿ ಸೂರ್ಯ (ಬಿಜೆಪಿ) | ಸೌಮ್ಯಾ ರೆಡ್ಡಿ (ಕಾಂಗ್ರೆಸ್) |
| 24 | ಬೆಂಗಳೂರು ಕೇಂದ್ರ | ಪಿ. ಸಿ. ಮೋಹನ್ (ಬಿಜೆಪಿ) | ಮನ್ಸೂರ್ ಅಲಿ ಖಾನ್ (ಕಾಂಗ್ರೆಸ್) |
| 25 | ಹಾಸನ | ಶ್ರೇಯಸ್ ಪಟೇಲ್ (ಕಾಂಗ್ರೆಸ್) | ಪ್ರಜ್ವಲ್ ರೇವಣ್ಣ (ಜೆಡಿಎಸ್) |
| 26 | ಚಿಕ್ಕಬಳ್ಳಾಪುರ | ಡಾ. ಕೆ. ಸುಧಾಕರ್ (ಬಿಜೆಪಿ) | ರಕ್ಷಾ ರಾಮಯ್ಯ (ಕಾಂಗ್ರೆಸ್) |
| 27 | ಕೋಲಾರ | ಮಲ್ಲೇಶ್ ಬಾಬು (ಜೆಡಿಎಸ್) | ಕೆ. ವಿ. ಗೌತಮ್ (ಕಾಂಗ್ರೆಸ್) |
| 28 | ಚಿತ್ರದುರ್ಗ | ಗೋವಿಂದ ಕಾರಜೋಳ (ಬಿಜೆಪಿ) | ಬಿ. ಎನ್. ಚಂದ್ರಪ್ಪ (ಕಾಂಗ್ರೆಸ್) |












Click it and Unblock the Notifications