‘ಕರ್ನಾಟಕ ಭಯೋತ್ಪಾದಕರ ಅಡಗುತಾಣ ಇದಕ್ಕೆ ಕಾರಣ...’

ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟ ಇದೀಗ 2024ರ ಲೋಕಸಭೆ ಚುನಾವಣೆಗೆ ತೊಡೆತಟ್ಟಿ ನಿಂತಿವೆ. ಗೆದ್ದೇ ಗೆಲ್ಲಬೇಕು ಎಂಬ ಛಲದಲ್ಲಿ ಎರಡೂ ಒಕ್ಕೂಟಗಳ ನಡುವೆ ಭರ್ಜರಿ ತಿಕ್ಕಾಟ ನಡೆದಿದೆ. ಇದೇ ಸಮಯದಲ್ಲಿ ಕರ್ನಾಟಕ ರಾಜಕೀಯ ಕೂಡ ಕಾವೇರಿದ್ದು, ಬಿಜೆಪಿ & ಕಾಂಗ್ರೆಸ್ ನಡುವೆ ಭರ್ಜರಿ ಫೈಟಿಂಗ್ ಆರಂಭ ಆಗಿದೆ. ಅದ್ರಲ್ಲೂ ಬಿಜೆಪಿ ಈಗ 'ಕರ್ನಾಟಕ ಭಯೋತ್ಪಾದಕರ ಅಡಗುತಾಣ ಇದಕ್ಕೆ ಕಾರಣ..' ಅಂತಾ ಹೊಸ ಆರೋಪದ ಬಾಂಬ್ ಸಿಡಿಸಿದೆ.

ಲೋಕಸಭೆ ಚುನಾವಣೆ 2024ಕ್ಕೆ ಈಗ ಕ್ಷಣಗಣನೆ ಶುರುವಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಭಾರತೀಯ ಚುನಾವಣಾ ಆಯೋಗ ಕೂಡ ಎಲೆಕ್ಷನ್ ಡೇಟ್ ಘೋಷಣೆ ಮಾಡುವ ನಿರೀಕ್ಷೆ ಇದೆ. ಹೀಗಿದ್ದಾಗ ಕರ್ನಾಟಕ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿಗಳ ಮೊದಲನೇ ಪಟ್ಟಿಯನ್ನು ರಿಲೀಸ್ ಮಾಡಿದೆ. ಬಿಜೆಪಿ ಕೂಡ ಪಟ್ಟಿ ಘೋಷಣೆಗೆ ಸಿದ್ಧತೆ ನಡೆಸಿದೆ. ಆದರೆ ಇದೇ ಸಮಯದಲ್ಲಿ ಈಗ ಇಬ್ಬರ ನಡುವೆ ಫೈಟಿಂಗ್ ಬಲು ಜೋರಾಗಿದೆ. ಹೀಗೆ ಕರ್ನಾಟಕದ ಲೋಕಸಭೆ ಎಲೆಕ್ಷನ್ ವಿಚಾರದಲ್ಲಿ 'ಪಾಕಿಸ್ತಾನ' ಕೂಡ ಎಂಟ್ರಿಯಾಗಿದೆ! ಯಾಕೆ ಗೊತ್ತಾ?

Lok Sabha Election 2024 Karnataka Congress And BJP Continues Their Fight In Karnataka

ಜಿದ್ದಿಗೆ ಬಿದ್ದ ಬಿಜೆಪಿ & ಕಾಂಗ್ರೆಸ್!

ಕರ್ನಾಟಕದಲ್ಲಿ ಜಿದ್ದಿಗೆ ಬಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಮಾತಿನ ಯುದ್ಧ ನಡೆಸುತ್ತಿವೆ. ಈ ಸಮಯದಲ್ಲೇ ಕಾಂಗ್ರೆಸ್ ವಿರುದ್ಧ ಟ್ವೀಟ್ ಮಾಡಿರುವ ಬಿಜೆಪಿ, 'ಕರ್ನಾಟಕ ಭಯೋತ್ಪಾದಕರ ಅಡಗುತಾಣ ಇದಕ್ಕೆ ಕಾರಣ @INCKarnataka ದ ಪಾʻಕೈʼಸ್ತಾನ್‌ ಸರ್ಕಾರ! ಪಿಎಫ್‌ಐ ನಿಷೇಧದ ನಂತರ ಉಗ್ರ ಚಟುವಟಿಕೆಗಳು ರಾಜ್ಯದಲ್ಲಿ ಸ್ಥಗಿತಗೊಂಡಿದ್ದವು. ಆದರೆ, ಯಾವಾಗ ಮಜಾವಾದಿ @siddaramaiah ಸರ್ಕಾರ ಅಧಿಕಾರಕ್ಕೆ ಬಂದು ಇದು "ಭಯೋತ್ಪಾದಕ ಬ್ರದರ್ಸ್‌ ಸರ್ಕಾರ"ವೆಂದು ಸಾಬೀತು ಮಾಡಿತೋ, ಅಲ್ಲಿಂದ ಕರ್ನಾಟಕ ತಾಲಿಬಾನ್‌ ಆಗಿದೆ.' ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಆರೋಪ ಮಾಡಿದೆ.

ಆರೋಪದ ಪಟ್ಟಿ ಹೀಗಿದೆ ನೋಡಿ!

ತನ್ನ ಆರೋಪವನ್ನು ಇದೇ ಟ್ವೀಟ್‌ನಲ್ಲಿ ಮುಂದುವರಿಸಿರುವ ಬಿಜೆಪಿ, 'ವಿಧಾನಸೌಧದಲ್ಲೇ ಪಾಕ್‌ ಪರ ಘೋಷಣೆ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಬ್ಲಾಸ್ಟ್‌, ಇದೀಗ ಬೆಳಗಾವಿಯ ನಿಪ್ಪಾಣಿಯ ರಾಮ ಮಂದಿರದಲ್ಲಿ ಎರಡು ಬಾರಿ ಬಹುದೊಡ್ಡ ಬಾಂಬ್‌ ಬ್ಲಾಸ್ಟ್‌ ಮಾಡುವ ಬೆದರಿಕೆ ಪತ್ರ. ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕದಲ್ಲಿ @RahulGandhi ದ್ವೇಷದ ಅಂಗಡಿ ಓಪನ್‌ ಮಾಡಿದ್ದಾರೆ. ರಾಜ್ಯದಲ್ಲಿ ದಿನಕ್ಕೊಂದು ಬಾಂಬ್‌ ಸ್ಫೋಟವಾಗುವ ಬೆದರಿಕೆ ಇದ್ದರೂ #ಸ್ಲೀಪಿಂಗ್‌_ಸರ್ಕಾರ ಮಾತ್ರ ನಿದ್ದೆಯಿಂದ ಎದ್ದೇಳುವುದಿಲ್ಲ!' ಅಂತಾ ಕಾಂಗ್ರೆಸ್ ನಾಯಕರನ್ನು ಕೆಣಕಿದೆ ಕರ್ನಾಟಕ ಬಿಜೆಪಿ ಘಟಕ.

Lok Sabha Election 2024 Karnataka Congress And BJP Continues Their Fight In Karnataka

ಒಟ್ನಲ್ಲಿ ಬಿಜೆಪಿ & ಕಾಂಗ್ರೆಸ್ ನಡುವೆ ಸಿಕ್ಕಾಪಟ್ಟೆ ತಿಕ್ಕಾಟ ನಡೆಯುತ್ತಿದೆ. ಇಬ್ಬರೂ ಇದೀಗ ಭರ್ಜರಿ ಫೈಟಿಂಗ್ ಮಾಡ್ತಿದ್ದಾರೆ. ಅದರಲ್ಲೂ ಎರಡೂ ಪಕ್ಷಗಳು ಪರಸ್ಪರ ಗಂಭೀರವಾದ ಆರೋಪ ಮಾಡುತ್ತಿದ್ದು, ಇನ್ನೇನು ಕೆಲವೇ ದಿನದಲ್ಲಿ ಲೋಕಸಭೆ ಚುನಾವಣೆ ಬರಲಿದೆ. ಹೀಗಿದ್ದಾಗ ಕರ್ನಾಟಕದ ಮತದಾರ ಯಾರ ಪರ ಮತ ಹಾಕುತ್ತಾನೆ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+