Lok Sabha Election 2024: 26 ವರ್ಷದ ಯುವಕನಿಗೆ ಟಿಕೆಟ್ ಕೊಟ್ಟ ಕಾಂಗ್ರೆಸ್ ಹೈಕಮಾಂಡ್
ಬೆಂಗಳೂರು, ಮಾರ್ಚ್ 22: ಲೋಕಸಭೆ ಚುನಾವಣೆಗೆ ಕರ್ನಾಟಕದ 17 ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟವಾಗಿದ್ದು, ಹೊಸ ಮುಖಗಳಿಗೆ ಕಾಂಗ್ರೆಸ್ ಹೈಕಮಾಂಡ್ ಆದ್ಯತೆ ನೀಡಿದೆ.17 ಜನ ಅಭ್ಯರ್ಥಿಗಳ ಫೈಕಿ ಅತ್ಯಂತ ಕಿರಿಯ ವಯಸ್ಸಿನ ಯುವಕರಿಗೆ ಹೈಕಮಾಂಡ್ ಮಣೆ ಹಾಕಿದೆ.
ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಎಂಟು ಮಂದಿ ಹೊಸಬರಿಗೆ ಮಣೆ ಹಾಕಿದ್ದು, ಈ ಹೊಸಬರಲ್ಲಿ ಹೆಚ್ಚಿನವರು ರಾಜಕೀಯ ಕುಟುಂಬದ ಹಿನ್ನೆಲೆಯವರಾಗಿದ್ದಾರೆ. ಅಲ್ಲದೇ 26 ವರ್ಷದ ಯುವಕನಿಗೆ ಬೀದರ್ ಲೋಕಸಭಾ ಕ್ಷೇತ್ರದಿಂದ ಹೈಕಮಾಂಡ್ ಟಿಕೆಟ್ ನೀಡಿದೆ. ಸಚಿವ ಈಶ್ವರ್ ಖಂಡ್ರೆ ಅವರ ಪುತ್ರ ಸಾಗರ್ ಖಂಡ್ರೆಗೆ(26 ವರ್ಷದ ಯುವಕ) ಹೈಕಮಾಂಡ್ ಟಿಕೆಟ್ ನೀಡಿದೆ.

ರಾಜ್ಯದಲ್ಲಿ 2 ಹಂತದಲ್ಲಿ (ಏ.26 ಮತ್ತು ಮೇ 7) ನಡೆಯಲಿರುವ ಲೋಕಸಭಾ ಚುನಾವಣೆಗೆ ಈವರೆಗೆ ಪ್ರಮುಖ ರಾಜಕೀಯ ಪಕ್ಷಗಳು ಪ್ರಕಟಿಸಿರುವ ಉಮೇದುವಾರರ ಪೈಕಿ ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅತ್ಯಂತ ಕಿರಿಯ ವಯಸ್ಸಿನವರಾಗಿದ್ದಾರೆ. ಕಣಕ್ಕಿಳಿಯಲಿರುವ ಯುವ ಅಭ್ಯರ್ಥಿಗಳ ಪೈಕಿ ಪ್ರಿಯಾಂಕಾ ಸತೀಶ್ ಜಾರಕಿಹೊಳಿ ಮತ್ತು ಸಾಗರ್ ಖಂಡ್ರೆ ಇಬ್ಬರೂ 1997ರಲ್ಲಿ ಜನಿಸಿದವರಾಗಿದ್ದರೂ, ಪ್ರಿಯಾಂಕಾ ಅವರು ಏಪ್ರಿಲ್ ನಲ್ಲಿ ಜನಿಸಿರುವ ಕಾರಣ, ಡಿಸೆಂಬರ್ 29ರಂದು ಜನಿಸಿದ ಸಾಗರ್ ಈ ಖಂಡ್ರೆ ಅತ್ಯಂತ ಕಿರಿಯರಾಗಿದ್ದಾರೆ.
30ಕ್ಕಿ ಕಡಿಮೆ ವಯಸ್ಸಿನವರು ಯಾರು?
* ಮೃಣಾಲ್
* ಪ್ರಿಯಾಂಕಾ
* ಸಾಗರ್ ಖಂಡ್ರೆ
* ಸಂಯುಕ್ತಾ ಪಾಟೀಲ್

ಯಾವೆಲ್ಲಾ ಹೊಸ ಮುಖಗಳಿಗೆ ಕಾಂಗ್ರೆಸ್ ಟಿಕೆಟ್?
* ಸಾಗರ್ ಖಂಡ್ರೆ
* ಮೃಣಾಲ್ ಹೆಬ್ಬಾಳ್ಕರ್
* ಪ್ರಿಯಾಂಕಾ ಜಾರಕಿಹೊಳಿ
* ಸಂಯುಕ್ತಾ ಪಾಟೀಲ್
* ಪ್ರಭಾ ಮಲ್ಲಿಕಾರ್ಜುನ
* ಮನ್ಸೂರ್ ಅಲಿ ಖಾನ್
* ಪದ್ಮರಾಜ್
* ವಿನೋದ್ ಅಸುಟಿ
ಕರ್ನಾಟಕದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
1.ಬಾಗಲಕೋಟೆ ಲೋಕಸಭಾ ಕ್ಷೇತ್ರ-ಸಂಯುಕ್ತಾ ಪಾಟೀಲ್
2.ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ-ಸೌಮ್ಯಾರೆಡ್ಡಿ
3.ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ-ಎಂ.ವಿ.ರಾಜೀವ್ ಗೌಡ
4.ಮೈಸೂರು ಲೋಕಸಭಾ ಕ್ಷೇತ್ರ-ಎಂ.ಲಕ್ಷ್ಮಣ್
5.ಚಿತ್ರದುರ್ಗ ಲೋಕಸಭಾ ಕ್ಷೇತ್ರ-ಬಿ.ಎನ್.ಚಂದ್ರಪ್ಪ
6.ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ-ಪದ್ಮರಾಜ್
7.ಉಡುಪಿ, ಚಿಕ್ಕಮಗಳೂರು ಕ್ಷೇತ್ರ-ಜಯಪ್ರಕಾಶ್ ಹೆಗ್ಡೆ
8.ಕಲಬುರಗಿ ಲೋಕಸಭಾ ಕ್ಷೇತ್ರ-ರಾಧಾಕೃಷ್ಣ ದೊಡ್ಡಮನಿ
9.ದಾವಣಗೆರೆ ಲೋಕಸಭಾ ಕ್ಷೇತ್ರ-ಪ್ರಭಾ ಮಲ್ಲಿಕಾರ್ಜುನ
10.ಬೆಂಗಳೂರು ಸೆಂಟ್ರಲ್ ಕ್ಷೇತ್ರ-ಮನ್ಸೂರ್ ಅಲಿಖಾನ್
11.ಉತ್ತರ ಕನ್ನಡ ಕ್ಷೇತ್ರ-ಡಾ.ಅಂಜಲಿ ನಿಂಬಾಳ್ಕರ್
12.ಧಾರವಾಡ ಲೋಕಸಭಾ ಕ್ಷೇತ್ರ-ವಿನೋದ್ ಅಸೋಟಿ
13.ಕೊಪ್ಪಳ ಲೋಕಸಭಾ ಕ್ಷೇತ್ರ-ರಾಜಶೇಖರ್ ಹಿಟ್ನಾಳ್
14.ಬೀದರ್ ಲೋಕಸಭಾ ಕ್ಷೇತ್ರ-ಸಾಗರ್ ಖಂಡ್ರೆ
15.ರಾಯಚೂರು ಲೋಕಸಭಾ ಕ್ಷೇತ್ರ-ಕುಮಾರ್ ಜಿ ನಾಯಕ್
16.ಬೆಳಗಾವಿ ಲೋಕಸಭಾ ಕ್ಷೇತ್ರ-ಮೃಣಾಲ್ ಹೆಬ್ಬಾಳ್ಕರ್
17. ಚಿಕ್ಕೋಡಿ ಲೋಕಸಭಾ ಕ್ಷೇತ್ರ-ಪ್ರಿಯಾಂಕಾ ಜಾರಕಿಹೊಳಿ
18. ಶಿವಮೊಗ್ಗ ಲೋಕಸಭಾ ಕ್ಷೇತ್ರ-ಗೀತಾ ಶಿವರಾಜ್ ಕುಮಾರ್
19. ತುಮಕೂರು ಲೋಕಸಭಾ ಕ್ಷೇತ್ರ -ಎಸ್ಪಿ ಮುದ್ದಹನುಮೇಗೌಡ
20. ಮಂಡ್ಯ ಲೋಕಸಭಾ ಕ್ಷೇತ್ರ-ವೆಂಕಟರಾಮೇಗೌಡ (ಸ್ಟಾರ್ ಚಂದ್ರು)
21.ಹಾಸನ ಲೋಕಸಭಾ ಕ್ಷೇತ್ರ- ಶ್ರೇಯಸ್ ಪಟೇಲ್
22. ಬೆಂಗಳೂರು ಗ್ರಾಮಾಂತರಲೋಕಸಭಾ ಕ್ಷೇತ್ರ -ಡಿಕೆ ಸುರೇಶ್
23. ವಿಜಯಪುರ ಲೋಕಸಭಾ ಕ್ಷೇತ್ರ- ಎಚ್ಆರ್ ಅಲ್ಗೂರ್
24. ಹಾವೇರಿ ಲೋಕಸಭಾ ಕ್ಷೇತ್ರ-ಆನಂದ್ ಸ್ವಾಮಿ ಗಡ್ಡ ದೇವರಮಠ
ಬಾಕಿ ಇರುವ ಕಾಂಗ್ರೆಸ್ ಕ್ಷೇತ್ರಗಳು
ಚಿಕ್ಕಬಳ್ಳಾಪುರ - ರಕ್ಷಾ ರಾಮಯ್ಯ - ಶಿವಶಂಕರ್ ರೆಡ್ಡಿ, ವೀರಪ್ಪ ಮೊಯ್ಲಿ
ಕೋಲಾರ - ಚಿಕ್ಕಪೆದ್ದಣ್ಣ, ಎಲ್.ಹನುಮಂತಯ್ಯ
ಚಾಮರಾಜನಗರ - ಸುನೀಲ್ ಬೋಸ್, ದರ್ಶನ್ ಧ್ರುವ ನಾರಾಯಣ
ಬಳ್ಳಾರಿ - ಸೌಪರ್ಣಿಕಾ ತುಕಾರಾಂ, ವೆಂಕಟೇಶ್ ಪ್ರಸಾದ್, ವಿ.ಎಸ್. ಉಗ್ರಪ್ಪ, ತುಕಾರಾಂ












Click it and Unblock the Notifications