ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ಹುಟ್ಟೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಜಯ

|
Google Oneindia Kannada News

ಚಾಮರಾಜನಗರ, ಮೇ 19 : ಸಿಎಂ ಸಿದ್ದರಾಮಯ್ಯ ತಮ್ಮ ಹುಟ್ಟೂರಿಗೆ ತೆರಳಿ ಮತದಾನ ಮಾಡಿದ್ದು ಫಲ ನೀಡಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ ಗೆಲುವು ಸಾಧಿಸಿದ್ದಾರೆ. 1,41,182 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ.

2009ರಲ್ಲಿ ಮುಖಾಮುಖಿಯಾಗಿದ್ದ ಅಭ್ಯರ್ಥಿಗಳೇ 2014ರ ಚುನಾವಣೆಯಲ್ಲಿಯೂ ಎದುರಾಳಿಗಳಾಗಿದ್ದು ಚಾಮರಾಜನಗರ ಕ್ಷೇತ್ರದ ವಿಶೇಷವಾಗಿತ್ತು. ಹಾಲಿ ಸಂಸದರಾಗಿದ್ದ ಕಾಂಗ್ರೆಸ್ ಪಕ್ಷದ ಧ್ರುವನಾರಾಯಣ ಅವರು, 5,67,782 ಮತಗಳನ್ನು ಗಳಿಸುವ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಜಯಗಳಿಸಿದರು. [ಕರ್ನಾಟಕದಲ್ಲಿ ಗೆದ್ದವರು, ಸೋತವರು]

Dhruvanarayana

ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು. ಆದರೆ, ಸಿದ್ದರಾಮಯ್ಯ ಅವರ ಹುಟ್ಟೂರು ಸಿದ್ದರಾಮನಹುಂಡಿ ಚಾಮರಾಜನಗರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ವರುಣಾ ವಿಧಾನಸಭೆ ಕ್ಷೇತ್ರದಲ್ಲಿದೆ. ಆದ್ದರಿಂದ ಚಾಮರಾಜನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವ ಮೂಲಕ ಸಿಎಂ ತಮ್ಮ ಹುಟ್ಟೂರಿನಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. [2009ರ ಫಲಿತಾಂಶಕ್ಕಾಗಿ ಇಲ್ಲಿ ನೋಡಿ]

ಚಾಮರಾಜನಗರ ಕ್ಷೇತ್ರದಲ್ಲಿ ಹಾಲಿ ಸಂಸದ ಧ್ರುವನಾರಾಯಣ ಅವರಿಗೆ ಬಿಜೆಪಿಯಿಂದ ಕೃಷ್ಣಮೂರ್ತಿ, ಜೆಡಿಎಸ್ ಪಕ್ಷದಿಂದ ಕೋಟೆ ಶಿವಣ್ಣ, ಆಮ್ ಆದ್ಮಿ ಪಕ್ಷದಿಂದ ಸಂಪತ್ ಕುಮಾರ್ ಎದುರಾಳಿಗಳಾಗಿದ್ದರು. ಇವರಲ್ಲಿ ಕೃಷ್ಣಮೂರ್ತಿ ಮತ್ತು ಕೋಟೆ ಶಿವಣ್ಣ 2009ರ ಚುನಾವಣೆಯಲ್ಲಿಯೂ ಧ್ರುವನಾರಾಯಣ ವಿರುದ್ಧ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.

2014ರ ಫಲಿತಾಂಶ : 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಧ್ರುವನಾರಾಯಣ ಅವರು 1,41,182 ಮತಗಳ ಅಂತರದಿಂದ ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಎರಡನೇ ಸ್ಥಾನ ಪಡೆದರೆ, ಜೆಡಿಎಸ್ ಅಭ್ಯರ್ಥಿ ಕೋಟೆ ಶಿವಣ್ಣ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಚಾಮರಾಜನಗರ ಪಡೆದ ಸ್ಥಾನ ಪಕ್ಷ ಪಡೆದ ಮತಗಳು
ಧ್ರುವನಾರಾಯಣ 1
ಕಾಂಗ್ರೆಸ್ 5,67,782
ಕೃಷ್ಣಮೂರ್ತಿ
2
ಬಿಜೆಪಿ 4,26,600
ಕೋಟೆ ಶಿವಣ್ಣ
3
ಜೆಡಿಎಸ್ 58,760
ಶಿವಮಲ್ಲು
4
ಬಿಎಸ್ಪಿ
34,846
English summary
Lok Sabha Election results 2014, Karnataka : Congress candidate Rangaswamy Dhruvanarayana wins in Chamarajanagar Lok Sabha constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X