• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಮಖಂಡಿ ಬಿಜೆಪಿ ಟಿಕೆಟ್‌ಗೆ ನಿರಾಣಿ ಸಹೋದರರ ಹರಸಾಹಸ!

By ಬಾಗಲಕೋಟೆ ಪ್ರತಿನಿಧಿ
|

ಬಾಗಲಕೋಟೆ, ಏಪ್ರಿಲ್ 02 : ತೀವ್ರ ಕುತೂಹಲ ಕೆರಳಿಸಿರುವ ಸಕ್ಕರೆ ನಾಡು ಹಾಗೂ ಹೆಚ್ಚಾಗಿ ರೈತಾಪಿ ಕುಟುಂಬಗಳು ಇರುವ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳಲು ಮೂವರು ನಾಯಕರು ಪೈಪೋಟಿಗೆ ಇಳಿದಿದ್ದಾರೆ.

ಮಾಜಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಮುರುಗೇಶ ನಿರಾಣಿ ಅವರು ಸಹೋದರ ಸಂಗಮೇಶ ನಿರಾಣಿಗೆ ಟಿಕೆಟ್ ನೀಡಬೇಕು ಎಂದು ನಾಯಕರನ್ನು ಒತ್ತಾಯಿಸುತ್ತಿದ್ದಾರೆ.

ಯಲಬುರ್ಗಾ ಕ್ಷೇತ್ರದಿಂದ ವೀಣಾ ಕಾಶಪ್ಪನವರ ಸ್ಪರ್ಧೆ?

ಜಮಖಂಡಿಯಲ್ಲಿ ಪಂಚಮಸಾಲಿ ಸಮುದಾಯದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಸಂಗಮೇಶ ನಿರಾಣಿಯವರಿಗೆ ಬಿಜೆಪಿ ಟಿಕೇಟ್ ನೀಡಿದರೆ ಗೆಲುವು ಸುಲಭ ಎಂದು ಅರಿತಿರುವ ಮುರಗೇಶ ನಿರಾಣಿ ಅವರು ಕಳೆದ ಕೆಲವು ತಿಂಗಳ ಹಿಂದಿನಿಂದ ಜಮಖಂಡಿ ಕ್ಷೇತ್ರದಲ್ಲಿ ಸಮಾಜಮುಖಿ ಹಾಗೂ ಆರೋಗ್ಯ ಶಿಬಿರ ಮತ್ತು ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಾ ಜನರ ನಡುವೆ ಗುರುತಿಸಿಕೊಳ್ಳುತ್ತಿದ್ದಾರೆ.

ಬಾಗಲಕೋಟೆ : ಎಚ್.ವೈ.ಮೇಟಿಗೆ ಚರಂತಿಮಠ ಸವಾಲು!

ಇದನ್ನೇ ಮಾನದಂಡವಾಗಿಟ್ಟುಕೊಂಡು ಸಂಗಮೇಶ ನಿರಾಣಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಮುರಗೇಶ ನಿರಾಣಿಯವರು ನಾಯಕರ ದುಂಬಾಲು ಬಿದ್ದಿದ್ದು ನಿಜ. ಹಿಂದೆ ಬಿಜೆಪಿಯಿಂದ ಆಯ್ಕೆಯಾಗಿದ್ದ ಮತ್ತು ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದ ಶ್ರೀಕಾಂತ ಕುಲಕರ್ಣಿ ಅವರು ಸಹ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಜಮಖಂಡಿ ಟಿಕೆಟ್

ಜಮಖಂಡಿ ಟಿಕೆಟ್

ಸಂಗಮೇಶ್ ನಿರಾಣಿ ಮತ್ತು ಶ್ರೀಕಾಂತ ಕುಲಕರ್ಣಿ ಅವರ ಜೊತೆಗೆ ಜಗದೀಶ ಗುಡಗುಂಟಿ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಕೆಲವು ದಿನಗಳ ಹಿಂದೆ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಜಗದೀಶ ಗುಡಗುಂಟಿ ಅವರು ಬಿಜೆಪಿಗೆ ಸೇರಿದ್ದಾರೆ. ಉದ್ಯಮಿ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರಾಗಿರುವ ಜಗದೀಶ ಅವರು ರೈತರ ಸ್ನೇಹಿಯಾಗಿದ್ದಾರೆ.

ಜಮಖಂಡಿಯಿಂದ ತಮಗೆ ಟಿಕೆಟ್ ನೀಡಿದರೆ ಗೆಲುವು ಖಚಿತ ಎಂದು ಈಗಾಗಲೇ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಬಾಗಲಕೋಟೆಯ ಶಿವಯೋಗಮಂದಿರಕ್ಕೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡಿದಾಗ 200ಕ್ಕೂ ಹೆಚ್ಚು ಸ್ವಾಮೀಜಿಗಳು ಜಗದೀಶ ಗುಡಗುಂಟಿಯವರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಒತ್ತಡ ಹಾಕಲು ಎಲ್ಲ ರೂಪರೇಷ ಹೆಣದಿದ್ದರು.

ನಿರಾಣಿ ಸಹೋದರರಿಗೆ ಹಿನ್ನಡೆ

ನಿರಾಣಿ ಸಹೋದರರಿಗೆ ಹಿನ್ನಡೆ

ಸ್ವಾಮೀಜಿಗಳ ಮಾತು ಕೇಳಿ ಜಗದೀಶ ಗುಡಗುಂಟಿಯವರಿಗೆ ಟಿಕೆಟ್ ನೀಡುತ್ತಾರೆ? ಎಂಬ ಆತಂಕ ನಿರಾಣಿ ಸಹೋದರರಿಗೆ ಶುರುವಾಗಿತ್ತು. ನಿರಾಣಿಯವರು ತಮ್ಮ ಸಮಾಜದ ಸ್ವಾಮೀಜಿಗಳ ಮೂಲಕ ಸಂಗಮೇಶ ನಿರಾಣಿಗೆ ಜಮಖಂಡಿಯಿಂದ ಟಿಕೆಟ್ ನೀಡಬೇಕು ಎಂದು ಅಮಿತ್ ಶಾ ಅವರಿಗೆ ಒತ್ತಡ
ಹಾಕಲು ಎಲ್ಲ ಪ್ರತಿತಂತ್ರ ರೂಪಿಸಿದ್ದರು.

ಬೀಳಗಿ ಮತಕ್ಷೇತ್ರದಲ್ಲಿ ಮುರುಗೇಶ ನಿರಾಣಿಯವರು ಬಿಜೆಪಿಯಿಂದ ಸ್ಪರ್ಧೆ ನಡೆಸಲು ತಯಾರಾಗಿದ್ದಾರೆ. ಅದರಂತೆ ತಮ್ಮ ಸಹೋದರನಿಗೆ ಜಮಖಂಡಿಗೆ ಟಿಕೆಟ್ ಪಡೆದುಕೊಂಡು ಗೆಲ್ಲಿಸಲು ಎಲ್ಲ ತಂತ್ರ ಹೆಣೆದಿದ್ದಾರೆ. ಬಿಜೆಪಿಯಲ್ಲಿ ಕುಟುಂಬಕ್ಕೆ ಒಂದೇ ಟಿಕೆಟ್ ಎಂದು ಹೇಳಿರುವುದು ಅವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಸಂಗಮೇಶ್‌ಗೆ ಸಹಾಯಕ

ಸಂಗಮೇಶ್‌ಗೆ ಸಹಾಯಕ

ಜಮಖಂಡಿಯಲ್ಲಿ ಪಂಚಮಸಾಲಿ ಸಮುದಾಯದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆರ್‌.ಎಸ್‌.ಎಸ್.ನಾಯಕರು ಅವರ ಬೆಂಬಲಕ್ಕೆ ನಿಂತಿದ್ದಾರೆ.

ಸಂಗಮೇಶ ನಿರಾಣಿಯವರಿಗೆ ಬಿಜೆಪಿ ಟಿಕೇಟ್ ನೀಡಿದರೆ ಗೆಲುವು ಸುಲಭ ಎಂದು ಅರಿತಿರುವ ಮುರಗೇಶ ನಿರಾಣಿ ಅವರು ಕಳೆದ ಕೆಲವು ತಿಂಗಳ ಹಿಂದಿನಿಂದ ಜಮಖಂಡಿ ಕ್ಷೇತ್ರದಲ್ಲಿ ಸಮಾಜಮುಖಿ ಹಾಗೂ ಆರೋಗ್ಯ ಶಿಬಿರ ಮುಂತಾದ ಕಾರ್ಯಕ್ರಮ ನಡೆಸುತ್ತಾ ಜನರ ನಡುವೆ ಗುರುತಿಸಿಕೊಳ್ಳುತ್ತಿದ್ದಾರೆ.

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ?

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ?

ಸಹೋದರನಿಗೆ ಟಿಕೆಟ್ ನೀಡಲು ಬಿಜೆಪಿ ನಾಯಕರು ನಿರಾಕರಿಸಿದರೆ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಆದರೆ, ಇದುವರೆಗೆ ಯಾರಿಗೆ ಟಿಕೆಟ್ ಸಿಗುತ್ತದೆ? ಎಂಬ ಬಗ್ಗೆ ಯಾವ ನಾಯಕರು ಹೇಳಿಕೆ ನೀಡಿಲ್ಲ. ಆದ್ದರಿಂದ ಟಿಕೆಟ್ ಆಕಾಂಕ್ಷಿಗಳು ಕಾದು ಕುಳಿತಿದ್ದಾರೆ.

2013ರ ಚುನಾವಣೆಯಲ್ಲಿ ಶ್ರೀಕಾಂತ್ ಕುಲಕರ್ಣಿ ಅವರು 20,982 ಮತಗಳನ್ನು ಪಡೆದಿದ್ದರು. ಆದ್ದರಿಂದ, ಅವರು ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka assembly elections just a couple of days away, the lobbying for tickets in the BJP is getting intense in Jamkhandi, Bagalkot district. Sangamesh Nirani brother of Former minister Murugesh Nirani, Shrikant Kulkarni and other leaders in the ticket race.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more