ಭಾರತದಲ್ಲಿ ಹಿಂದೂಗಳಿಗಿರುವಷ್ಟೇ ಹಕ್ಕು ಕ್ರೈಸ್ತರಿಗಿದೆ: ಸೂಲಿಬೆಲೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಉಡುಪಿ, ಡಿಸೆಂಬರ್, 09: ಭಾರತದಲ್ಲಿ ಹಿಂದೂಗಳು ಮತ್ತು ಕ್ರೈಸ್ತರು ಸಮನ್ವಯದಿಂದ ಬಾಳುತ್ತಿದ್ದಾರೆ. ದೇಶದ ಮೇಲೆ ಹಿಂದೂಗಳಿಗಿರುವಷ್ಟೇ ಹಕ್ಕು, ಅಧಿಕಾರ ಕ್ರೈಸ್ತ ಧರ್ಮೀಯರಿಗೂ ಇದೆ ಎಂದು ಅಂಕಣಕಾರ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಮೂಡುಪೆರಂಪಳ್ಳಿಯಲ್ಲಿ ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿಯವರಿಂದ ನವಚೈತನ್ಯ ಯುವಕ ಮಂಡಲ ಕಟ್ಟಿದ ವಿಶ್ವಪ್ರಿಯ ರಂಗಮಂಟಪದ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೂ ಧರ್ಮೀಯರು ಸಹಿಷ್ಣುಗಳಲ್ಲ , ಒಪ್ಪಿಕೊಳ್ಳುವವರು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ ಎಂದರು.[ತಾಜ್ ಮಹಲ್ ಹಿಂದೂ ದೇಗುಲವೇ? ಮೋದಿ ಸರ್ಕಾರದ ಉತ್ತರ]

Living right have same to Hindus and Christians in the India told by Chakravarti sulibele in Mangaluru

ಉಡುಪಿಯ ಪೆರಂಪಲ್ಲಿ ಭಾಗದಲ್ಲಿ ಕ್ರೈಸ್ತರು ಹಾಗೂ ಹಿಂದೂಗಳು ಪರಸ್ಪರ ಸಹಕಾರ ಮನೋಭಾವ, ಪ್ರೀತಿಯಿಂದ ಬದುಕುತ್ತಿದ್ದಾರೆ. ನಟ ಆಮೀರ್ ಖಾನ್ ಅವರಿಗೆ ಈ ಸ್ಥಳ ಪರಿಚಯಿಸಬೇಕಿದೆ. ಇದರಿಂದ ಅವರ ಮನದಲ್ಲಿ ಮೂಡಿರುವ ಅಸಹಿಷ್ಣುತೆ ಮನೋಭಾವ ದೂರವಾಗಬಹುದು. ಹಿಂದೂ ಜನರಿಗೆ ಧರ್ಮವಾಗಲೀ, ಆಚರಣೆ ಬದುಕುವ ರೀತಿ ನೀತಿ ಇನ್ನೂ ಅರ್ಥವಾಗಿಲ್ಲ ಎಂದರು.[ಸಾಮಾಜಿಕ ತಾಣದಲ್ಲಿ ಬಿರುಗಾಳಿ ಎಬ್ಬಿಸಿರುವ ಅಮೀರ್ ಮಾತು]

ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಮಾತನಾಡಿ, 'ಯುವಕ ಮಂಡಲ ರಂಗಮಂಟಪ ಕಟ್ಟುವ ಕೆಲಸಕ್ಕೆ ವೈಯಕ್ತಿಕವಾಗಿ 1 ಲಕ್ಷ ಮತ್ತು ಸರ್ಕಾರದ ಮಲೆನಾಡು ಅಭಿವೃದ್ದಿ ಮಂಡಳಿಯಿಂದ 5 ಲಕ್ಷ ಯುವಕ ಮಂಡಲಕ್ಕೆ ನೀಡಿದ್ದೇನೆ.

ಪಾಸ್ ಕದ್ರುವಿನಲ್ಲಿ ನದಿ ತಡೆ ಗೋಡೆಗೆ 50 ಲಕ್ಷ ಬಿಡುಗಡೆ ಮಾಡಿದ್ದು ಉಪ್ಪೂರು ಮಣಿಪಾಲ ನದಿ ಸೇತುವೆಗೆ 10 ಕೋಟಿ ಬಿಡುಗಡೆ ಟೆಂಡರ್ ಗೆ ಸಂಪುಟದಲ್ಲಿ ಒಪ್ಪಿಗೆ ಬಾಕಿ ಇದೆ. ಎರಡೂವರೆ ವರ್ಷದಲ್ಲಿ ಕಾಮಗಾರಿ ಮುಗಿಯಲಿದೆ' ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hindus and Christians both have equal rights to live in India. Asserts Writer, activist Chakravarti Soolibele @astitvam speaking at a public function in Mangaluru.
Please Wait while comments are loading...