ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌರಿ ಹತ್ಯೆ ವಿರೋಧಿಸಿ ಪ್ರತಿರೋಧ ಸಮಾವೇಶ ಆರಂಭ

|
Google Oneindia Kannada News

Recommended Video

Gauri Lankesh Hatya Virodhi Vedike has organized a mega procession today in Bengaluru for justice

ಬೆಂಗಳೂರು, ಸೆಪ್ಟೆಂಬರ್ 12 : ಪ್ರತಿರೋಧ ಸಮಾವೇಶ ಆರಂಭ. ಮೇದಾ ಪಾಟ್ಕರ್, ಸೀತಾರಾಂ ಯೆಚೂರಿ, ಚಂದ್ರಶೇಖರ ಕಂಬಾರ, ಪ್ರಕಾಶ್ ರೈ, ದೇವನೂರು ಮಹಾದೇವ, ಗಿರೀಶ್ ಕಾರ್ನಡ್, ಆನಂದ್ ಪಟವರ್ಧನ್ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿದ್ದಾರೆ.

* ರೈಲ್ವೆ ನಿಲ್ದಾಣದಿಂದ ಹೊರಟ ಜಾಥಾ ಸೆಂಟ್ರಲ್ ಕಾಲೇಜು ಮೈದಾನ ತಲುಪಿದೆ. ಕೆಲವೇ ಕ್ಷಣಗಳಲ್ಲಿ ಪ್ರತಿರೋಧ ಸಮಾವೇಶ ಆರಂಭವಾಗಲಿದೆ.

In Pics: ನಾನೂ ಗೌರಿ ಎಂದು ಬಂದರು ಸಾವಿರಾರು ಮಂದಿ

* ಗೌರಿ ಲಂಕೇಶ್ ತಾಯಿ ಇಂದಿರಾ ಲಂಕೇಶ್, ಸಹೋದರಿ ಕವಿತಾ ಲಂಕೇಶ್ ಸಮಾವೇಶ ನಡೆಯುವ ಸ್ಥಳಕ್ಕೆ ಆಗಮಿಸಿದರು.

Live updates : Fight against Gauri Lankesh murder, mega rally September 12, 2017

* 'ಭಾರತೀಯ ಸಂವಿಧಾನಕ್ಕೆ ದೊಡ್ಡ ಅಪಾಯ ಸೃಷ್ಟಿಯಾಗಿದೆ. ಗೌರಿಯವರನ್ನು ಹತ್ಯೆ ಮಾಡುವ ಮೂಲಕ ರಾಜ್ಯದಲ್ಲಿ ಹತ್ಯೆ ಸಂಸ್ಕೃತಿಯನ್ನು ಮುಂದುವರೆಸಲಾಗುತ್ತಿದೆ. ಇದನ್ನು ತಡೆಗಟ್ಟಬೇಕು. ಭಾರತದ ಶಾಂತಿ ಸೌಹಾರ್ದತೆಯ ಪರಂಪರೆಯನ್ನು ಮುಂದುವರಿಸಬೇಕು. ಇದಕ್ಕಾಗಿ ದೇಶದಾದ್ಯಂತ ಚಿಂತಕರು ಆಗಮಿಸಿದ್ದಾರೆ. ಈ ಸಮಾವೇಶ ಒಂದು ಮಹಾಸಂಗಮ. ಕೊಲೆಗಡುಕ ಮನಸ್ಥಿತಿಯನ್ನಿ ಖಂಡಿಸಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ' ಎಂದು ಗೌರಿ ಹತ್ಯೆ ಹೋರಾಟ ಸಮಿತಿ ಸದಸ್ಯೆ ಕೆ.ನೀಲಾ ಹೇಳಿದರು.

* ಕಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸೆಂಟ್ರಲ್ ಕಾಲೇಜು ಮೈದಾನದ ತನಕ ಬೃಹತ್ ಜಾಥಾ ಆರಂಭವಾಗಿದೆ.

ಗೌರಿ ಹತ್ಯೆ : ಅಂಕಣಕಾರ ಶಿವಸುಂದರ್ ವಿಶೇಷ ಸಂದರ್ಶನಗೌರಿ ಹತ್ಯೆ : ಅಂಕಣಕಾರ ಶಿವಸುಂದರ್ ವಿಶೇಷ ಸಂದರ್ಶನ

* ಹಾಡುಗಳ ಮೂಲಕ ಪ್ರತಿರೋಧ ಸಮಾವೇಶಕ್ಕೆ ಹೊಸ ರೂಪ. ಗೌರಿ ಲಂಕೇಶ್ ಕುರಿತಾಗಿ 12 ಪ್ರತಿರೋಧ ಗೀತೆಗಳ ರಚನೆ. 'ನಾನು ಗೌರಿ' ಎಂಬ ಕಪ್ಪು ಪಟ್ಟಿ ಕಟ್ಟಿಕೊಂಡ ಸಮಾನ ಮನಸ್ಕರು

Live updates : Fight against Gauri Lankesh murder, mega rally September 12, 2017

* ರಾಜ್ಯದ ವಿವಿಧ ಜಿಲ್ಲೆಗಳಿಂದ ಸಮಾವೇಶದಲ್ಲಿ ಪಾಲ್ಗೊಳ್ಳಲು ನೂರಾರು ಜನರು ಆಗಮಿಸಿದ್ದು, ರೈಲ್ವೆ ನಿಲ್ದಾಣದ ಬಳಿ ಸೇರಿದ್ದಾರೆ

ಸಿಬಿಐ ತನಿಖೆಯಲ್ಲಿ ನಂಬಿಕೆಯಿಲ್ಲ: ಸಿಎಂ ಬಳಿ ಗೌರಿ ತಾಯಿ ಇಂಗಿತಸಿಬಿಐ ತನಿಖೆಯಲ್ಲಿ ನಂಬಿಕೆಯಿಲ್ಲ: ಸಿಎಂ ಬಳಿ ಗೌರಿ ತಾಯಿ ಇಂಗಿತ

* ಜಾಥಾದಲ್ಲಿ ಎಲ್ಲರೂ ಕಪ್ಪು ಬಣ್ಣದ ಛತ್ರಿ ಹಿಡಿದು ಸಾಗಲಿದ್ದಾರೆ. ಛತ್ರಿಯ ಮೇಲೆ ಕಲಾವಿದರು ಸೌಹಾರ್ದ ಸಂದೇಶವನ್ನು ಬರೆದಿರುತ್ತಾರೆ

* ಸೆ.5ರಂದು ರಾತ್ರಿ ಬೆಂಗಳೂರಿನ ಆರ್.ಆರ್.ನಗರ ನಿವಾಸದಲ್ಲಿ ಗೌರಿ ಲಂಕೇಶ್ ಹತ್ಯೆಯಾಗಿತ್ತು

Live updates : Fight against Gauri Lankesh murder, mega rally September 12, 2017

ಪ್ರತಿರೋಧ ಸಮಾವೇಶ : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿರೋಧ ಸಮಾವೇಶ ಆಯೋಜಿಸಲಾಗಿದೆ. 'ಗೌರಿ ಲಂಕೇಶ್ ಸಾವಿಗೆ ಒಂದು ಹನಿ ಕಣ್ಣೀರು, ಒಂದು ನಿಮಿಷ ಮೌನ ಹಾಗೂ ಒಂದು ದೃಢ ನಿರ್ಧಾರ' ಎಂಬ ಧ್ಯೇಯದೊಂದಿಗೆ ಸಮಾವೇಶ ನಡೆಯಲಿದೆ.

ಗೌರಿ ಹತ್ಯೆ, ಸಚಿವ ರವಿಶಂಕರ್ ಗೆ ರಾಮಲಿಂಗಾರೆಡ್ಡಿ ತಿರುಗೇಟುಗೌರಿ ಹತ್ಯೆ, ಸಚಿವ ರವಿಶಂಕರ್ ಗೆ ರಾಮಲಿಂಗಾರೆಡ್ಡಿ ತಿರುಗೇಟು

ಬುಧವಾರ ಬೆಳಗ್ಗೆ 11ಗಂಟೆಗೆ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಪ್ರತಿರೋಧ ಸಮಾವೇಶ ನಡೆಯಲಿದೆ. ಇದಕ್ಕೂ ಮೊದಲು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸೆಂಟ್ರಲ್ ಕಾಲೇಜು ಮೈದಾನದ ತನಕ ಜಾಥಾ ನಡೆಯಲಿದೆ. ಸಮಾವೇಶದ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Live updates : Fight against Gauri Lankesh murder, mega rally September 12, 2017
English summary
The forum ‘Gauri Lankesh Hathya Virodhi Horata Vedike’ organized national-level resistance convention to condemn the murder on September 12, 2017 at Central College grounds, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X