ಹಿಜಾಬ್ ವಿವಾದ: ಹೈಕೋರ್ಟ್ ವಿಚಾರಣೆ LIVE ಪ್ರಸಾರ ಲಕ್ಷಾಂತರ ಬಾರಿ ವೀಕ್ಷಣೆ
ಬೆಂಗಳೂರು, ಫೆಬ್ರವರಿ 27: ಹಿಜಾಬ್ ವಿವಾದ ಆರಂಭವಾದ ನಂತರ ಕರ್ನಾಟಕ ಹೈಕೋರ್ಟ್ ಯೂಟ್ಯೂಬ್ ಮೂಲಕ ನೇರ ಕೋರ್ಟ್ ಕಲಾಪ ವೀಕ್ಷಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಈವರೆಗೆ 12 ದಿನಗಳ ಕಾಲ ನಡೆದ ವಿಚಾರಣೆಯನ್ನು 35 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಆ ಮೂಲಕ ಕರ್ನಾಟಕ ಹೈಕೋರ್ಟ್ ನ್ಯಾಯಾಂಗ ಇತಿಹಾಸದಲ್ಲಿಯೇ ಹೊಸ ದಾಖಲೆಯನ್ನು ಬರೆದಿದೆ.
ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಹಿಜಾಬ್ ಪ್ರಕರಣದ ಸಂಬಂಧ ಫೆ.10 ರಿಂದ ಫೆ. 25ವರವರೆಗೆ 11 ದಿನಗಳ ಕಲಾಪವನ್ನು ಕರ್ನಾಟಕ ಹೈಕೋರ್ಟ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವಿಶ್ವದ ವಿವಿಧೆಡೆಯಿಂದ ಬರೋಬ್ಬರಿ 35 ಲಕ್ಷ ಮಂದಿ ವೀಕ್ಷಿಸಿದ್ದು, ದಿನವೂ ವೀಕ್ಷಕರ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ. ಜೊತೆಗೆ ಯೂಟ್ಯೂಬ್ ಚಂದಾದಾರರ ಸಂಖ್ಯೆಯೂ ಏರುಮುಖಿಯಾಗಿದ್ದು, ಸಾವಿರಗಟ್ಟಲೆ ಇದ್ದ ಆ ಪ್ರಮಾಣ ಈಗಾಗಲೇ ಒಂದು ಲಕ್ಷ ದಾಟಿದೆ.
ತರಗತಿಯಲ್ಲಿ ಹಿಜಾಬ್ ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರ ನೇತೃತ್ವದ ಪೀಠವು ಫೆಬ್ರವರಿ 10ರಿಂದ ಪ್ರತಿದಿನ ಸರಾಸರಿ ಎರಡು ಗಂಟೆಯಂತೆ ಸುಮಾರು 25 ಗಂಟೆ ವಿಚಾರಣೆ ನಡೆಸಿ ಶುಕ್ರವಾರ ಪೀಠವು ತೀರ್ಪು ಕಾಯ್ದಿರಿಸಿದೆ. ಇದೀಗ ಎಲ್ಲರೂ ತೀರ್ಪಿಗಾಗಿ ಕಾಯುತ್ತಿದ್ದಾರೆ.
I'm so happy that Karnataka High Court is amongst the few Courts to live stream its proceedings. So many citizens can watch the #HijabBan case proceedings.
— Swapnil V. Tripathi (@S_Tripathi07) February 10, 2022
ಒಪ್ಪಿಗೆ ಮೇರೆಗೆ ಲೈವ್ ಸ್ಟ್ರೀಮಿಂಗ್: ಹಿಜಾಬ್ ವಿವಾದದ ವಿಚಾರಣೆ ಕೈಗೆತ್ತಿಕೊಂಡ ಬಳಿಕ ಪೂರ್ಣಪೀಠ ಅರ್ಜಿದಾರರು, ಪ್ರತಿವಾದಿಗಳ ಒಪ್ಪಿಗೆ ಮೇರೆಗೆ ಇಡೀ ಕಲಾಪವನ್ನು ಪಕ್ಷಕಾರರ ಒಪ್ಪಿಗೆಯೊಂದಿಗೆ ಯೂಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲು ಪೀಠವು ಕ್ರಮ ಕೈಗೊಂಡಿದೆ. ಹಿಜಾಬ್ ಗೆ ಸಂಬಂಧಿಸಿದ 11 ದಿನಗಳ ವಿಚಾರಣೆಯ ವಿಡಿಯೊಗಳನ್ನು 35 ಲಕ್ಷ ಮಂದಿ ವೀಕ್ಷಿಸಿದ್ದಾರೆ.
ಕರ್ನಾಟಕ ಹೈಕೋರ್ಟ್‌ನಲ್ಲಿ ವರ್ಚುವಲ್ ವಿಚಾರಣೆಗೆ ಜೂಮ್ ಸಾಫ್ಟ್‌ವೇರ್ ಬಳಸಲಾಗುತ್ತಿದ್ದು, ಇಲ್ಲಿ ಗರಿಷ್ಠ 500 ಮಂದಿ ಮಾತ್ರ ಕಲಾಪದಲ್ಲಿ ಭಾಗವಹಿಸಬಹುದು ಅಥವಾ ವೀಕ್ಷಿಸಬಹುದು. ಇಷ್ಟು ಜನರು ಏಕೈಕ ಬಾರಿಗೆ ಲಾಗಿನ್ ಆದರೆ ತಾಂತ್ರಿಕ ಸಮಸ್ಯೆಗಳು ಸೃಷ್ಟಿಯಾಗುತ್ತಿತ್ತು.
Around 16,000 people watching the Hijab Ban hearing. Live streaming of proceedings does make a difference.
— Areeb Uddin (@Areebuddin14) February 15, 2022
I hope other courts including the Supreme Court of India should consider doing the same.#HijabRow pic.twitter.com/H47sna8nNP
ಯೂಟ್ಯೂಬ್ ಲೈವ್ ನಿಲ್ಲಿಸಲು ಮನವಿ ತಿರಸ್ಕಾರ;
ಹಿಜಾಬ್ ವಿವಾದದ ವಿಚಾರಣೆ ಮಧ್ಯದಲ್ಲಿ, ಅರ್ಜಿದಾರರ ಹಿರಿಯ ವಕೀಲ ರವಿವರ್ಮಕುಮಾರ್, ಪ್ರಕರಣದ ವಿಚಾರಣೆ ಯೂಟ್ಯೂಬ್ ಲೈವ್ ಮಾಡಲಾಗುತ್ತಿದೆ. ಇದು ರಾಜ್ಯಾದ್ಯಂತ ತೀವ್ರ ಪರಿಣಾಮಗಳನ್ನು ಉಂಟು ಮಾಡುತ್ತಿದೆ, ಹಾಗಾಗಿ ತಾತ್ಕಾಲಿಕವಾಗಿ ಲೈವ್ ನಿಲ್ಲಿಸಬೇಕು ಎಂದು ಕೋರಿದರು.

ಆದರೆ ಎಜಿ ಕೂಡ ಆಕ್ಷೇಪ ಎತ್ತಿದರು. ಸಿಜೆ "ಈಗಾಗಲೇ ಅರ್ಜಿದಾರರ ವಾದ ಲೈವ್ ಆಗಿದೆ, ಸರ್ಕಾರದ ವಾದವನ್ನೂ ಜನರು ಕೇಳಲಿ ಬಿಡಿ, ಅದರಲ್ಲೇನಿದೆ ''ಎಂದು ಮನವಿ ತಿರಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಕರ್ನಾಟಕವೇ ಮೊದಲು:
ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ನ ಎಲ್ಲ ಕಲಾಪಗಳನ್ನು ಲೈವ್ ಸ್ಟ್ರೀಮ್ ಮಾಡಲು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಲು ಸುಪ್ರೀಂಕೋರ್ಟ್ ಆದೇಶ ನೀಡಿದ ಬಳಿಕ ಅದನ್ನು ಮೊದಲಿಗೆ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದು ಕರ್ನಾಟಕ ಹೈಕೋರ್ಟ್. ಜೊತೆಗೆ ಅದಕ್ಕೆ ಪೂರಕವಾಗಿ ಕರ್ನಾಟಕ ನ್ಯಾಯಾಲಯ ಕಲಾಪಗಳ ನೇರಪ್ರಸಾರ (ಲೈವ್‌ಸ್ಟ್ರೀಮ್) ಮತ್ತು ರೆಕಾರ್ಡಿಂಗ್ ನಿಯಮ 2021 ಅನ್ನು ಜಾರಿ ಮಾಡಿ, ಜನವರಿ 1ರಿಂದಲೇ ನಿಯಮಗಳು ಅಸ್ತಿತ್ವಕ್ಕೆ ಬರುವಂತೆ ಆದೇಶಿಸಲಾಗಿದೆ.
2021ರಲ್ಲಿ ಕೋವಿಡ್ ಸಮಯದಲ್ಲಿ ಪ್ರಯೋಗ ನಡೆಸಿದ್ದ ಹೈಕೋರ್ಟ್ 2022ರ ಹೊಸ ವರ್ಷದ ಮೊದಲ ದಿನದಿಂದಲೇ ನ್ಯಾಯಾಲಯದ ಕಲಾಪಗಳನ್ನು ಯೂಟ್ಯೂಬ್ ಮೂಲಕ ಲೈವ್ ಸ್ಟ್ರೀಮ್ ಕಡ್ಡಾಯಗೊಳಿಸಿತ್ತು. ಆನಂತರ ದಿನವೂ ಕೋರ್ಟ್ ಹಾಲ್ ಒಂದು ಹಾಗೂ ಇನ್ನಿತರ ಕೆಲ ಕೋರ್ಟ್‌ಗಳ ಕಲಾಪ ಯೂಟ್ಯೂಬ್‌ನಲ್ಲಿ ಪ್ರಸಾರವಾಗುತ್ತಿತ್ತು. ಆದರೆ ಕರ್ನಾಟಕ ಹೈಕೋರ್ಟ್ ಹಿಜಾಬ್ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಬಳಿಕ ಅಪಾರ ನೋಡುಗರು ಮತ್ತು ಚಂದಾದಾರನ್ನು ಸೇರ್ಪಡೆಯಾಗಿ ಕರ್ನಾಟಕ ಹೈಕೋರ್ಟ್ ಭಾರತದ ನ್ಯಾಯಾಂಗ ಇತಿಹಾಸದಲ್ಲೇ ವಿಶಿಷ್ಟ ಮೈಲುಗಲ್ಲು ಸಾಧಿಸಲು ಸಾಧ್ಯವಾಗಿದೆ. ಬೇರೆ ಯಾವ ಹೈಕೋರ್ಟ್ ಚಂದಾದಾರರ ಸಂಖ್ಯೆಯೂ ಒಂದು ಲಕ್ಷ ದಾಟಿಲ್ಲ. ಬಹುತೇಕ ಹೈಕೋರ್ಟ್‌ಗಳಲ್ಲಿ ಯೂಟ್ಯೂಬ್ ಲೈವ್‌ಸ್ಟ್ರೀಮ್ ಇನ್ನಷ್ಟೇ ಆರಂಭವಾಗಬೇಕಿದೆ.












Click it and Unblock the Notifications