• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿಕ್ಷಣ ಸಚಿವರಿಗೆ ವಿದ್ಯಾರ್ಹತೆ ಮಾತ್ರ ಸಾಕಾ? ಖಾತೆ ನಿಭಾಯಿಸುವ ಶಕ್ತಿ ಇದ್ರೆ ಸಾಲಲ್ವಾ?

|
   ಶಿಕ್ಷಣ ಸಚಿವರಿಗೆ ವಿದ್ಯಾರ್ಹತೆ ಬೇಕೋ ಅಥವಾ ಖಾತೆ ನಿಭಾಯಿಸುವ ಶಕ್ತಿ ಸಾಕೋ ? | Oneindia kannada

   ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಶುಕ್ರವಾರ (ಜೂ 8) ಸಚಿವರಿಗೆ ಖಾತೆ ಘೋಷಣೆಯಾದ ನಂತರ ಪಕ್ಷದೊಳಗಿನ ಭಿನ್ನಮತ ಮತ್ತು ನೂತನ ಉನ್ನತ ಶಿಕ್ಷಣ ಸಚಿವರ ವಿದ್ಯಾರ್ಹತೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

   ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಅವರಿಗೆ ದಕ್ಕಿದ ಉನ್ನತ ಶಿಕ್ಷಣ ಖಾತೆಯ ಬಗ್ಗೆ ಖುದ್ದು ಅವರಿಗೇ ಅಸಮಾಧಾನವಿರುವುದು ಗೌಪ್ಯವಾಗಿಯೇನೂ ಉಳಿದಿಲ್ಲ. ಎಂಟನೇ ಕ್ಲಾಸ್ ಓದಿರುವ ಜಿಟಿಡಿಗೆ ಈ ಖಾತೆ ನೀಡಿರುವುದು ಎಷ್ಟು ಸರಿ? ಇದು ಸದ್ಯದ ಹಾಟ್ ಟಾಪಿಕ್..

   ನಮ್ಮನ್ನಾಳುವ ಮಂತ್ರಿಗಳಲ್ಲಿ ಪಿಯುಸಿ ಪಾಸಾದವರು ಎಷ್ಟು ಜನ?

   ಜಿ ಟಿ ದೇವೇಗೌಡ್ರಿಗೆ ಈ ಖಾತೆ ನೀಡಿರುವುದು ವಿಪರ್ಯಾಸ ಎನ್ನುವುದಾದರೆ, ಖಾತೆ ನಿಭಾಯಿಸಲು ವಿದ್ಯಾರ್ಹತೆಯೇ ಒಂದು ಮಾನದಂಡ ಎಂದಾಯಿತು. ಹಾಗಿದ್ದಲ್ಲಿ ನಮ್ಮ ಸಂವಿಧಾನದಲ್ಲಿ ಈ ಬಗ್ಗೆ ಯಾಕೆ ಉಲ್ಲೇಖವಿಲ್ಲ? ಖಾತೆ ನಿಭಾಯಿಸಲು ಆಡಳಿತಾತ್ಮಕ ಶಕ್ತಿ, ಖಾತೆಯ ಆಗುಹೋಗು, ಮುಂದಾಗಬೇಕಾಗಿರುವ ಕೆಲಸಗಳ ಬಗ್ಗೆ ಹಿಡಿತವಿದ್ದರೆ ಸಾಲುವುದಿಲ್ಲವೇ?

   ಈ ಹಿಂದೆ ಗ್ರಾಜ್ಯುಯೇಟ್, ಡಬಲ್ ಗ್ರಾಜ್ಯುಯೇಟ್ ಡಿಗ್ರಿ ಪಡೆದ ಉನ್ನತ ಶಿಕ್ಷಣ ಸಚಿವರು, ಇಲಾಖೆಯನ್ನು ಸುವರ್ಣಯುಗಕ್ಕೆ ಏನಾದರೂ ಕೊಂಡೊಯ್ದಿದ್ದಾರಾ? ಈ ರೀತಿಯ ಹಲವು ಪ್ರಶ್ನೆಗಳು ಹುಟ್ಟುವುದು ಸಹಜ. ಎಂಟನೇ ಕ್ಲಾಸ್ ಓದಿದ ಜಿಟಿಡಿಯವರಿಗೆ ಆ ಖಾತೆಯನ್ನು ವಹಿಸಿದ್ದನ್ನು, ಸಿಎಂ ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದು ಇದೇ ದಾಟಿಯಲ್ಲೇ..

   ಇದೆಂಥ ವಿಪರ್ಯಾಸ, ವಿದ್ಯಾರ್ಹತೆ 8 ನೇ ತರಗತಿ, ಖಾತೆ-ಉನ್ನತ ಶಿಕ್ಷಣ!

   ಆದರೂ, ಕಾನೂನು ಸಚಿವರು LLB, ರೈತ ಕುಟುಂಬದ ಹಿನ್ನಲೆಯಿಂದ ಬಂದವರಿಗೆ ಕೃಷಿ, ನೀರಾವರಿ, ಡಿಗ್ರಿ ಪಡೆದವರಿಗೆ ಶಿಕ್ಷಣ ಸಚಿವ ಸ್ಥಾನ ನೀಡುತ್ತಾ ಬಂದಿರುವುದು ಎಸ್ ಎಂ ಕೃಷ್ಣ ಅವಧಿಯಿಂದಲೂ ಇದೆ. 1999 ರಿಂದ 2018ರ ವರೆಗೆ, ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಸಚಿವರು ಯಾರ್ಯಾರು, ಅವರ ವಿದ್ಯಾರ್ಹತೆ ಏನು? ಕೆಳಗಿದೆ ಪಟ್ಟಿ.. ( ಚುನಾವಣಾ ಆಯೋಗಕ್ಕೆ ಘೋಷಣೆ ಮಾಡಿದಂತೆ)

   ಶಿಕ್ಷಣ ಸಚಿವ: ಡಾ. ಜಿ ಪರಮೇಶ್ವರ್

   ಶಿಕ್ಷಣ ಸಚಿವ: ಡಾ. ಜಿ ಪರಮೇಶ್ವರ್

   ಮುಖ್ಯಮಂತ್ರಿಯಾಗಿದ್ದವರು: ಎಸ್ ಎಂ ಕೃಷ್ಣ
   ಪಕ್ಷ: ಕಾಂಗ್ರೆಸ್
   ಶಿಕ್ಷಣ ಸಚಿವರ ಅವಧಿ: 11.10.1999 - 28.05.2004
   ಶಿಕ್ಷಣ ಸಚಿವರಾಗಿದ್ದವರು: ಡಾ. ಜಿ ಪರಮೇಶ್ವರ್
   ಶಿಕ್ಷಣ ಸಚಿವರ ವಿದ್ಯಾರ್ಹತೆ: ಎಂ ಎಸ್ಸಿ, ಪಿಎಚ್ಡಿ (ಸಸ್ಯಶಾಸ್ತ)

   ಶಿಕ್ಷಣ ಸಚಿವ: ಡಾ. ಮಂಜುನಾಥ್

   ಶಿಕ್ಷಣ ಸಚಿವ: ಡಾ. ಮಂಜುನಾಥ್

   ಮುಖ್ಯಮಂತ್ರಿಯಾಗಿದ್ದವರು: ಧರಂ ಸಿಂಗ್
   ಪಕ್ಷ: ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರಕಾರ
   ಶಿಕ್ಷಣ ಸಚಿವರ ಅವಧಿ: 28.05.2004 - 02.02.2006
   ಶಿಕ್ಷಣ ಸಚಿವರಾಗಿದ್ದವರು: ಡಾ. ಮಂಜುನಾಥ್
   ಶಿಕ್ಷಣ ಸಚಿವರ ವಿದ್ಯಾರ್ಹತೆ: ಎಂ ಎಸ್ಸಿ, ಪಿಎಚ್ಡಿ (ಪ್ರಾಣಿಶಾಸ್ತ)

   ಶಿಕ್ಷಣ ಸಚಿವ: ಡಿ ಎಚ್ ಶಂಕರಮೂರ್ತಿ

   ಶಿಕ್ಷಣ ಸಚಿವ: ಡಿ ಎಚ್ ಶಂಕರಮೂರ್ತಿ

   ಮುಖ್ಯಮಂತ್ರಿಯಾಗಿದ್ದವರು: ಎಚ್ ಡಿ ಕುಮಾರಸ್ವಾಮಿ
   ಪಕ್ಷ: ಬಿಜೆಪಿ - ಜೆಡಿಎಸ್ ಸಮ್ಮಿಶ್ರ ಸರಕಾರ
   ಶಿಕ್ಷಣ ಸಚಿವರ ಅವಧಿ: 03.02.2006 - 08.10.2007
   ಶಿಕ್ಷಣ ಸಚಿವರಾಗಿದ್ದವರು: ಡಿ ಎಚ್ ಶಂಕರಮೂರ್ತಿ
   ಶಿಕ್ಷಣ ಸಚಿವರ ವಿದ್ಯಾರ್ಹತೆ: ಬಿಎಸ್ಸಿ

   ಶಿಕ್ಷಣ ಸಚಿವ: ಅರವಿಂದ ಲಿಂಬಾವಳಿ

   ಶಿಕ್ಷಣ ಸಚಿವ: ಅರವಿಂದ ಲಿಂಬಾವಳಿ

   ಮುಖ್ಯಮಂತ್ರಿಯಾಗಿದ್ದವರು: ಬಿ ಎಸ್ ಯಡಿಯೂರಪ್ಪ
   ಪಕ್ಷ: ಬಿಜೆಪಿ
   ಶಿಕ್ಷಣ ಸಚಿವರ ಅವಧಿ: 30.05.2008 - 04.08.2011
   ಶಿಕ್ಷಣ ಸಚಿವರಾಗಿದ್ದವರು: ಅರವಿಂದ ಲಿಂಬಾವಳಿ
   ಶಿಕ್ಷಣ ಸಚಿವರ ವಿದ್ಯಾರ್ಹತೆ: ಡಿಪ್ಲಮೋ, ಬಿಇ (ಸಿವಿಲ್)

   ಶಿಕ್ಷಣ ಸಚಿವ: ಡಾ. ವಿ ಎಸ್ ಆಚಾರ್ಯ

   ಶಿಕ್ಷಣ ಸಚಿವ: ಡಾ. ವಿ ಎಸ್ ಆಚಾರ್ಯ

   ಮುಖ್ಯಮಂತ್ರಿಯಾಗಿದ್ದವರು: ಡಿ ವಿ ಸದಾನಂದ ಗೌಡ
   ಪಕ್ಷ: ಬಿಜೆಪಿ
   ಶಿಕ್ಷಣ ಸಚಿವರ ಅವಧಿ: 05.08.2011 - 11.07.2012
   ಶಿಕ್ಷಣ ಸಚಿವರಾಗಿದ್ದವರು: ಡಾ. ವಿ ಎಸ್ ಆಚಾರ್ಯ
   ಶಿಕ್ಷಣ ಸಚಿವರ ವಿದ್ಯಾರ್ಹತೆ: ಎಂಬಿಬಿಎಸ್

   ಶಿಕ್ಷಣ ಸಚಿವ: ಸಿ ಟಿ ರವಿ

   ಶಿಕ್ಷಣ ಸಚಿವ: ಸಿ ಟಿ ರವಿ

   ಮುಖ್ಯಮಂತ್ರಿಯಾಗಿದ್ದವರು: ಜಗದೀಶ್ ಶೆಟ್ಟರ್
   ಪಕ್ಷ: ಬಿಜೆಪಿ
   ಶಿಕ್ಷಣ ಸಚಿವರ ಅವಧಿ: 12.07.2012- 12.05.2013
   ಶಿಕ್ಷಣ ಸಚಿವರಾಗಿದ್ದವರು: ಸಿ ಟಿ ರವಿ
   ಶಿಕ್ಷಣ ಸಚಿವರ ವಿದ್ಯಾರ್ಹತೆ: ಬಿಎ

   ಶಿಕ್ಷಣ ಸಚಿವ: ಬಸವರಾಜ ರಾಯರೆಡ್ಡಿ

   ಶಿಕ್ಷಣ ಸಚಿವ: ಬಸವರಾಜ ರಾಯರೆಡ್ಡಿ

   ಮುಖ್ಯಮಂತ್ರಿಯಾಗಿದ್ದವರು: ಸಿದ್ದರಾಮಯ್ಯ
   ಪಕ್ಷ: ಕಾಂಗ್ರೆಸ್
   ಶಿಕ್ಷಣ ಸಚಿವರ ಅವಧಿ: 13.05.2013 - 15.05.2018
   ಶಿಕ್ಷಣ ಸಚಿವರಾಗಿದ್ದವರು: ಬಸವರಾಜ ರಾಯರೆಡ್ಡಿ
   ಶಿಕ್ಷಣ ಸಚಿವರ ವಿದ್ಯಾರ್ಹತೆ: ಬಿಎ, ಎಲ್ ಎಲ್ ಬಿ

   ಶಿಕ್ಷಣ ಸಚಿವ: ಜಿ ಟಿ ದೇವೇಗೌಡ

   ಶಿಕ್ಷಣ ಸಚಿವ: ಜಿ ಟಿ ದೇವೇಗೌಡ

   ಮುಖ್ಯಮಂತ್ರಿಯಾಗಿರುವವರು: ಎಚ್ ಡಿ ಕುಮಾರಸ್ವಾಮಿ
   ಪಕ್ಷ: ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರಕಾರ
   ಶಿಕ್ಷಣ ಸಚಿವರ ಅವಧಿ: 23.05.2018 -
   ಶಿಕ್ಷಣ ಸಚಿವರಾಗಿದ್ದವರು: ಜಿ ಟಿ ದೇವೇಗೌಡ
   ಶಿಕ್ಷಣ ಸಚಿವರ ವಿದ್ಯಾರ್ಹತೆ: ಎಂಟನೇ ತರಗತಿ

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   ಇನ್ನಷ್ಟು karnataka ಸುದ್ದಿಗಳುView All

   English summary
   List of Higher Education ministers of Karnataka and their qualifications from SM Krishna period to till date. From last almost twenty years, higher education ministers who serveed for state, they are with minimum degree qualifications.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more