ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಎಸ್ ಸಿ ಫಲಿತಾಂಶ; ಕರ್ನಾಟಕದಿಂದ rank ಪಡೆದವರು ಇವರು...

By Lekhaka
|
Google Oneindia Kannada News

ಬೆಂಗಳೂರು, ಆಗಸ್ಟ್‌ 04: ಕೇಂದ್ರ ಲೋಕಸೇವಾ ಆಯೋಗ ದೇಶದ ಅತ್ಯುನ್ನತ ನಾಗರೀಕ ಸೇವೆಗಳ ನೇಮಕಕ್ಕೆ 2019ನೇ ಸಾಲಿನಲ್ಲಿ ನಡೆಸಿದ ಪರೀಕ್ಷೆಗಳ ಫಲಿತಾಂಶವನ್ನು ಇಂದು ಪ್ರಕಟಿಸಿದೆ. ಈ ಬಾರಿ ಕರ್ನಾಟಕದಿಂದ 40ಕ್ಕೂ ಹೆಚ್ಚು ಅಭ್ಯರ್ಥಿಗಳು ಕೇಂದ್ರ ಸೇವೆಗೆ ಆಯ್ಕೆಯಾಗಿರುವುದಾಗಿ ತಿಳಿದುಬಂದಿದೆ.

Recommended Video

Ayodhya Rambhoomi ಪೂಜೆಗೆ Karnatakaದ 8 ಮಂದಿಗೆ ಆಹ್ವಾನ | Oneindia Kannada

ರಾಜ್ಯದಿಂದ ಆಯ್ಕೆಯಾದವರು ಹಾಗೂ rank: ಜಯದೇವ್ 5, ಯಶಸ್ವಿನಿ 71, ವಿನೋದ್‌ ಪಾಟಿಲ್‌ ಎಚ್‌ 132, ಕೀರ್ತನಾ ಎಚ್‌ ಎಸ್‌ 167, ಸಚಿನ್‌ ಹಿರೇಮಠ ಎಸ್‌ 213, ಹೇಮ ನಾಯಕ್‌ 225, ಅಭಿಷೇಕ್ ಗೌಡ ಎಂ.ಜೆ. 278, ಕೃತಿ ಬಿ 297, ವೆಂಕಟ್‌ ಕೃಷ್ಣ 336 ,ಮಿಥುನ್‌ ಎಚ್‌ ಎನ್‌ 359, ವೆಂಕಟರಮಣ ಕವಡೆಕೇರಿ 364, ಕೌಶಿಕ್ ಎಚ್‌. ಆರ್‌. 380ನೇ ಸ್ಥಾನ ಪಡೆದಿದ್ದಾರೆ.

ವರುಣ್‌ ಬಿ. ಆರ್. 395, ಮಂಜುನಾಥ್‌ ಆರ್‌. 406, ಹರೀಶ್‌ ಬಿ.ಸಿ. 409, ಜಗದೀಶ್ ಅಡಹಳ್ಳಿ 440, ಸ್ಪರ್ಷ ನೀಳಗಿ 443, ವಿವೇಕ್‌ ಎಚ್‌.ಬಿ. 444, ಆನಂದ್ ಕಲಾದಗಿ 446, ಮೊಹಮದ್ ನದಿಮುದ್ದಿನ್ 461, ಮೇಘನಾ ಕೆ.ಟಿ 465, ಸಯ್ಯದ್ ಝಹೀದ್ ಅಲಿ 476, ವಿವೇಕ್‌ ರೆಡ್ಡಿ ಎನ್. 485, ಹೇಮಂತ್ ಎನ್‌ 498, ಖಮರುದ್ದೀನ್ 511, ವರುಣ್ ಕೆ ಗೌಡ 528, ಪ್ರಫುಲ್ ದೇಸಾಯಿ 532ನೇ rank ಪಡೆದುಕೊಂಡಿದ್ದಾರೆ.

ರಾಘವೇಂದ್ರ ಎನ್‌ 536, ಭರತ್‌ ಕೆ.ಆರ್‌. 545, ಪೃಥ್ವಿ ಹುಲ್ಲಟ್ಟಿ 582, ಸುಹಾಸ್ ಆರ್ 583, ಅಭಿಲಾಷ್ ಶಶಿಕಾಂತ್ ಬಾದ್ದೂರ್ 591, ದರ್ಶನ್ ಕುಮಾರ್‌ ಎಚ್‌. ಜಿ. 594, ಸವಿತ ಗೊಟ್ಯಾಲ್ 626, ಪ್ರಜ್ವಲ್ 636, ರಮೇಶ್‌ 646, ಪ್ರಿಯಾಂಕ ಕಾಂಬ್ಳೆ 670, ಚೈತ್ರ ಎ.ಎಂ. 713, ಚಂದನ ಜಿ.ಎಸ್‌. 777, ಮಂಜೇಶ್ ಕುಮಾರ್‌ ಎ.ಪಿ. 800ನೇ ಸ್ಥಾನ ಪಡೆದುಕೊಂಡಿದ್ದಾರೆ.

 ಉತ್ತರ ಕನ್ನಡ ಜಿಲ್ಲೆಯಿಂದ ನಾಲ್ವರು ತೇರ್ಗಡೆ

ಉತ್ತರ ಕನ್ನಡ ಜಿಲ್ಲೆಯಿಂದ ನಾಲ್ವರು ತೇರ್ಗಡೆ

ಯುಪಿಎಸ್ ಸಿ ಪರೀಕ್ಷೆಯಲ್ಲಿ ಈ ಬಾರಿ ಉತ್ತರ ಕನ್ನಡ ಜಿಲ್ಲೆಯಿಂದ ನಾಲ್ಕು ಜನರು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಅಂಕೋಲಾ ತಾಲೂಕಿನ ವಾಸರಕುದ್ರಿಗಿಯ ಹೇಮಾ ನಾಯಕ ಅವರು 225ನೇ rankನಲ್ಲಿ ತೇರ್ಗಡೆಯಾಗಿದ್ದಾರೆ. ಎಸ್ ಬಿಐ ಬ್ಯಾಂಕ್ ಅಧಿಕಾರಿಯಾಗಿರುವ ಯಲ್ಲಾಪುರದ ವೆಂಕಟ್ರಮಣ ಕವಡಿಕೇರಿಗೆ 363ನೇ rank ಬಂದಿದೆ. ದಾಂಡೇಲಿಯ ಸಚಿನ್ ಹಿರೇಮಠ್ ಅವರು 213ನೇ rank ಪಡೆದುಕೊಂಡಿದ್ದರೆ, ಕುಮಟಾ ಕತಗಾಲ ಮೂಲದ, ಹಾಲಿ ಬೆಂಗಳೂರು ವಾಸವಿರುವ ಬಿ.ಕೃತಿ 297ನೇ rankನಲ್ಲಿ ತೇರ್ಗಡೆಯಾಗಿದ್ದಾರೆ.

2019ನೇ ಸಾಲಿನ ಯುಪಿಎಸ್ ಸಿ ಪರೀಕ್ಷಾ ಫಲಿತಾಂಶ ಪ್ರಕಟ2019ನೇ ಸಾಲಿನ ಯುಪಿಎಸ್ ಸಿ ಪರೀಕ್ಷಾ ಫಲಿತಾಂಶ ಪ್ರಕಟ

 ಚಿಕ್ಕಮಗಳೂರು ಜಿಲ್ಲೆಯ ಯಶಸ್ವಿನಿಗೆ 71ನೇ rank

ಚಿಕ್ಕಮಗಳೂರು ಜಿಲ್ಲೆಯ ಯಶಸ್ವಿನಿಗೆ 71ನೇ rank

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಬಾಣೂರು ಗ್ರಾಮದ ಯಶಸ್ವಿನಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ದೇಶಕ್ಕೆ 71ನೇ rank ಪಡೆದುಕೊಂಡಿದ್ದಾರೆ. 25 ವರ್ಷದ ಯಶಸ್ವಿನಿ ಈ ಬಾರಿ ನಡೆದ ಯುಪಿಎಸ್ ‍ಸಿ ಪರೀಕ್ಷೆಯಲ್ಲಿ 71ನೇ ಸ್ಥಾನ ಪಡೆದು ಜಿಲ್ಲೆಯ ಜನರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಶಿಕ್ಷಕ ವೃತ್ತಿಯಲ್ಲಿರುವ ಬಸವರಾಜಪ್ಪ ಹಾಗೂ ಇಂದಿರಾ ಎಂಬುವರ ಮಗಳಾಗಿರುವ ಯಶಸ್ವಿನಿ ಕಡೂರಿನಲ್ಲಿ 10ನೇ ತರಗತಿಯವರೆಗೂ ವಿದ್ಯಾಭ್ಯಾಸ ಮಾಡಿದ್ದಾರೆ. ಶಿವಮೊಗ್ಗದ ಜ್ಞಾನದೀಪ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದು, ಬೆಂಗಳೂರಿನ ಆರ್.ವಿ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ ವಿಭಾಗದಲ್ಲಿ ಪದವಿ ಮುಗಿಸಿದ್ದಾರೆ.

 ಮೈಸೂರು ಮೂಲದ ಮೇಘನಾಗೆ 465ನೇ ಸ್ಥಾನ

ಮೈಸೂರು ಮೂಲದ ಮೇಘನಾಗೆ 465ನೇ ಸ್ಥಾನ

ಕೇಂದ್ರ ಲೋಕಸೇವಾ ಆಯೋಗ ದೇಶದ ಅತ್ಯುನ್ನತ ನಾಗರೀಕ ಸೇವೆಗಳ ನೇಮಕಕ್ಕೆ 2019ನೇ ಸಾಲಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಮೈಸೂರು ಮೂಲದ ಕೆ.ಟಿ. ಮೇಘನಾ ಅವರು 465ನೇ rank ಪಡೆದಿದ್ದಾರೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕುಡುಕೂರು ಮೂಲದವರಾದ ಇವರು ಹಾಲಿ ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಾಗಿದ್ದಾರೆ. ತಾಂಡವಮೂರ್ತಿ ಹಾಗೂ ನವನೀತ ದಂಪತಿ ಪುತ್ರಿ ಮೇಘನಾ ಅವರು ಪೂರ್ಣ ಪ್ರಮಾಣದಲ್ಲಿ ದೃಷ್ಟಿ ಸಮಸ್ಯೆ ಎದುರಿಸುತ್ತಿದ್ದಾರೆ. 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ರೆಟಿನಾ ಸಮಸ್ಯೆ ಎದುರಾಗಿ, ಶೇ.70ರಷ್ಟು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರು. ಆದರೆ ತಮಗಿರುವ ಈ ವೈಕಲ್ಯವನ್ನು ಮೆಟ್ಟಿನಿಂತು ಯುಪಿಎಸ್ ‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ್ದಾರೆ.

ಯುಪಿಎಸ್ ಸಿ ಪರೀಕ್ಷಾ ಫಲಿತಾಂಶ ಪ್ರಕಟ; ಅಂಕೋಲಾ ತಾಲೂಕಿನಿಂದ ನಾಲ್ವರು ತೇರ್ಗಡೆಯುಪಿಎಸ್ ಸಿ ಪರೀಕ್ಷಾ ಫಲಿತಾಂಶ ಪ್ರಕಟ; ಅಂಕೋಲಾ ತಾಲೂಕಿನಿಂದ ನಾಲ್ವರು ತೇರ್ಗಡೆ

 ಬೆಳಗಾವಿ ಜಿಲ್ಲೆಯ ಮೂವರಿಗೆ ಸ್ಥಾನ

ಬೆಳಗಾವಿ ಜಿಲ್ಲೆಯ ಮೂವರಿಗೆ ಸ್ಥಾನ

ಯುಪಿಎಸ್ ‍ಸಿ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಒಬ್ಬರು, ಚಿಕ್ಕೋಡಿಯ ಇಬ್ಬರು rank ಗಳಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದ ರೈತನ ಮಗ ಪ್ರಫುಲ್ ಕೆಂಪಣ್ಣ ದೇಸಾಯಿ 532ನೇ rank ಪಡೆದಿದ್ದರೆ, ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಯುವಕ ಗಜಾನನ ಬಾಳೆ ಅವರು 663ನೇ rank ಪಡೆದಿದ್ದಾರೆ. ಅರಣ್ಯ ರಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಮಗಳು ಪ್ರಿಯಾಂಕಾ ವಿಠ್ಠಲ ಕಾಂಬ್ಳೆ 670ನೇ rank ಪಡೆದಿದ್ದಾರೆ.

English summary
UPSC Exam 2019 results announced today. More than 40 candidates from karnataka got rank in UPSC exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X