ಅಕ್ರಮ ಮದ್ಯದ ವಿಷಯದಲ್ಲಿ ಕರ್ನಾಟಕವೇ ನಂಬರ್ 1!

Subscribe to Oneindia Kannada

ಬೆಂಗಳೂರು, ಆಗಸ್ಟ್, 03: ಕುಡುಕರ ಲೆಕ್ಕದಲ್ಲಿ ಮಾತ್ರವಲ್ಲ ಅತಿ ಹೆಚ್ಚು ಅಕ್ರಮ ಮದ್ಯ ದಸ್ತಗಿರಿಯಾದ ಲೆಕ್ಕದಲ್ಲಿಯೂ ಕರ್ನಾಟಕಕ್ಕೆ ಅಗ್ರ ಸ್ಥಾನ. ಪಿಟಿಐ ಬಿಡುಗಡೆ ಮಾಡಿರುವ ಗ್ರಾಫಿಕ್ ಕರ್ನಾಟಕದ ಮದ್ಯದ ಅವತಾರವನ್ನು ನಮ್ಮ ಮುಂದೆ ಮತ್ತೆ ಬಿಚ್ಚಿಟ್ಟಿದೆ.

ಆದರೆ ಈ ಬಾರಿ ಕುಡುಕರ ಲೆಕ್ಕ, ಬಾರ್ ಗಳ ಲೆಕ್ಕ ಅಥವಾ ಬಾರ್ ತೆರೆದಿರುವ ವೇಳೆಯನ್ನು ಹೇಳಲಾಗಿಲ್ಲ. ಬದಲಾಗಿ ಕರ್ನಾಟಕದಲ್ಲಿ ದಸ್ತಗಿರಿ ಮಾಡಿಕೊಂಡ ಅಕ್ರಮ ಮದ್ಯವನ್ನು ಲೀಟರ್ ಲೆಕ್ಕದಲ್ಲಿ ಇಡಲಾಗಿದೆ. ಇದು 2014 ರ ಲೆಕ್ಕ.[ಈ ವಿಷಯದಲ್ಲಿ ಕರ್ನಾಟಕಕ್ಕಿಂತ ಬಿಹಾರವೇ ಉತ್ತಮ!]

Liquor seize: Karnataka got first place!

ಕರ್ನಾಟಕದಲ್ಲಿ ಒಟ್ಟು 7766652 ಲೀಟರ್ ಅಕ್ರಮ ಮದ್ಯವನ್ನು 2014 ರಲ್ಲಿ ವಶಪಡಿಸಿಕೊಳ್ಳಲಾಗಿದ್ದು ಅತಿ ಹೆಚ್ಚಿನ ದಸ್ತಗಿರಿಗೆ ಒಳಗಾದ ಕುಖ್ಯಾತಿ ಕರ್ನಾಟಕಕ್ಕೆ ಸಲ್ಲುತ್ತದೆ.[ಬೆಂಗಳೂರು ಸಭ್ಯ ಕುಡುಕರ ರಾಜಧಾನಿ ಎಂದ ಅಬಕಾರಿ ಸಚಿವ]

ಕರ್ನಾಟಕದ ನಂತರ ಸ್ಥಾನದಲ್ಲಿ ಮಧ್ಯ ಪ್ರದೇಶ(3568073 ಲೀ) ಉತ್ತರ ಪ್ರದೇಶ(3543453 ಲೀ.), ಆಂಧ್ರ ಪ್ರದೇಶ(2996201 ಲೀ.), ರಾಜಸ್ಥಾನ(2712936.4 ಲೀ.), ಪಶ್ಚಿಮ ಬಂಗಾಳ(2244408.4 ಲೀ.), ಪಂಜಾಬ್(2182685.5 ಲೀ.) ಹರಿಯಾಣ(875460.8ಲೀ.), ಒಡಿಸ್ಸಾ(831663.6 ಲೀ.) ಬಿಹಾರ(496444.5 ಲೀ.) ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.[2014 ರ ಲೋಕಸಭಾ ಚುನಾವಣಾ ಫಲಿತಾಂಶ ನೋಡಿಕೊಂಡು ಬನ್ನಿ]

ಲೋಕಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ಈ ಮಾಹಿತಿ ಸಿಕ್ಕಿದೆ. ಒಟ್ಟಿನಲ್ಲಿ ಬೇಡದ ವಿಷಯಕ್ಕೆ ಕರ್ನಾಟಕ ಅಗ್ರ ಶ್ರೇಯಾಂಕ ಪಡೆದುಕೊಂಡಿದೆ.

ಬೆಂಗಳೂರು ಮಹಾನಗರದಲ್ಲಿ ಮಧ್ಯ ರಾತ್ರಿ ಒಂದು ಗಂಟೆವರೆಗೆ ಬಾರ್ ಗಳನ್ನು ತೆರೆದಿಡಲು ಕರ್ನಾಟಕ ಸರ್ಕಾರ ಅವಕಾಶ ನೀಡಿದೆ. ಬೆಂಗಳೂರಿನ ಕುಡುಕರು ಒಳ್ಳೆಯವರು ಎಂದು ಕರ್ನಾಟಕ ಅಬಕಾರಿ ಸಚಿವ ಎಚ್ ವೈ ಮೇಟಿ ಸರ್ಟಿಫಿಕೇಟ್ ನೀಡಿರುವುದು ಲೆಟೆಸ್ಟ್ ಸುದ್ದಿ. ಅತ್ತ ಬಿಹಾರದಲ್ಲಿ ಮದ್ಯವನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ. ಈ ಎಲ್ಲ ಅಂಶಗಳನ್ನು ತಾಳೆ ಹಾಕುತ್ತಿರುವ ಮಧ್ಯೆಯೇ ಪಿಟಿಐ ಹಳೆಯ ಲೆಕ್ಕಾಚಾರವನ್ನು ಮುಂದೆ ಇಟ್ಟಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
New Delhi: On the basis of Lok Sabha questions and answer Karnataka got first rank in liquor seize. PTI graphics says the top ten states which are placed in Illegal liquor.
Please Wait while comments are loading...