ನವೆಂಬರ್ 20ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್-ಕಾರಣ ಏನು?
ಬೆಂಗಳೂರು, ನವೆಂಬರ್, 14: ಸಾಮಾನ್ಯವಾಗಿ ರಾಷ್ಟ್ರೀಯ ಹಬ್ಬಗಳ ದಿನ, ಚುನಾವಣೆ ಸಂದರ್ಭಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಮದ್ಯ ಮಾರಾಟ ಬಂದ್ ಮಾಡಲಾಗುತ್ತದೆ. ಇನ್ನು ಇದೇ ನವೆಂಬರ್ 20ರಂದು ರಾಜ್ಯಾದ್ಯಂತ ಮದ್ಯ ಮಾರಾಟವನ್ನು ಬಂದ್ ಮಾಡಲಾಗುತ್ತೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಾರಣ ಏನೆಂದು ಇಲ್ಲಿ ತಿಳಿಯಿರಿ.
ಅಬಕಾರಿ ಇಲಾಖೆಯಲ್ಲಿ ಲಂಚದ ಆಟ ಮಿತಿಮಿತಿ ಮೀರಿ ಹೋಗಿದೆ. ಇದನ್ನು ಸಹಿಸಿಕೊಳ್ಳಲು ಸಾದ್ಯವಾಗುತ್ತಿಲ್ಲ. ಆದ್ದರಿಂದ ಮದ್ಯ ಮಾರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್ ಹೆಗ್ಡೆ ಅವರು ಇದೇ ನವೆಂಬರ್ 20ರಂದು ರಾಜ್ಯಾದ್ಯಂತ ಎಂಎಸ್‌ಐಎಲ್ ಹೊರತುಪಡಿಸಿ ಮಿಕ್ಕಿದ ಎಲ್ಲಾ ಮದ್ಯ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳ ತಪ್ಪಿಸಿ ಮತ್ತು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನವೆಂಬರ್ 20ರಂದು ರಾಜ್ಯಾದ್ಯಂತ ಮದ್ಯ ಮಾರಾಟ ನಿಷೇಧಿಸಲು ತೀರ್ಮಾನ ಮಾಡಿದ್ದೇವೆ ಎಂದರು. ಇನ್ನು ವರ್ಗಾವಣೆ ಆದಂತಹ ಅಧಿಕಾರಿಗಳು ನೇರವಾಗಿ ಬಂದು ನಾವು ಲಂಚ ಕೊಟ್ಟು ಬಂದಿದ್ದೇವೆ ಎಂದು ಹೇಳಿ ಹಣ ಕೇಳುತ್ತಾರೆ ಎಂದು ಆರೋಪಿಸಿದ್ದಾರೆ ಎಂದರು.
ಇದೊಂದು ಅನುದಾನ ಇಲ್ಲದ ಇಲಾಖೆ, ಇದರಿಂದ ಹಣಕಾಸು ಸಚಿವರ ಬಳಿಯೇ ಈ ಇಲಾಖೆ ಇರಲಿ ಅನ್ನೋದು ನಮ್ಮ ಬೇಡಿಕೆಯಾಗಿದೆ. ನಾವು ಸರ್ಕಾರಕ್ಕೆ ಮನವಿ ಮಾಡಿರುವುದು ನಿಜ, ಅವ್ಯವಹಾರ ಇರುವುದು ಸಹ ನಿಜ. ಆದರೆ, ನಾವು ರಾಜ್ಯಪಾಲರಿಗಾಗಲಿ, ಮೋದಿಗಾಗಲಿ ದೂರು ಕೊಟ್ಟಿಲ್ಲ ಎಂದು ಗೋವಿಂದರಾಜ್ ಹೇಳಿದರು.
ನಮ್ಮ ಸನ್ನದುದಾರರು ತಡೆದುಕೊಳ್ಳಲು ಸಾದ್ಯ ಆಗುದಷ್ಟು ಕಿರುಕುಳ ನೀಡುತ್ತಿದ್ದಾರೆ. ಇದರಿಂದ ನಾವು ಮುಂದೆ ಬರುತ್ತಿದ್ದೇವೆ. ಗೋಪಾಲಯ್ಯ ಸಚಿವರಾಗಿದ್ದಾಗಲು ಹೆಚ್ಚಾಗಿತ್ತು. ಅದಕ್ಕಿಂತ ಹಿಂದೆ ನಾಗೇಶ್ ಸಚಿವರಾಗಿದ್ದಾಗಲೂ ಹೆಚ್ಚಾಗಿತ್ತು. ಇದನ್ನು ತಡೆದುಕೊಳ್ಳುವುದಕ್ಲೆ ಸಾದ್ಯ ಆಗದಷ್ಟು ಲಂಚಾವತಾರ ಮಿತಿ ಮೀರಿದೆ. ಆದರೆ, ಸತೀಶ್ ಜಾರಕಿ ಹೊಳಿ ಸಚಿವರಾಗಿದ್ದಾಗ ಇದು ಯಾವುದು ಇರಲಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications