Alcohol Price: ಮದ್ಯ ಪ್ರಿಯರಿಂದ ಶಾಕ್: ಸರ್ಕಾರದ ಲೆಕ್ಕಾಚಾರ ತಲೆಕೆಳಗೆ!
Alcohol Price: ಕರ್ನಾಟಕದಲ್ಲಿ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆಯ ಕಿಕ್ ಅನ್ನು ಮದ್ಯ ಪ್ರಿಯರು ಇಳಿಸಿದ್ದಾರೆ. ಹೌದು ಕುಡುಕರು ಸರ್ಕಾರದ ಮೇಲೆ ತಿರುಗಿ ಬಿದ್ದಿದ್ದು. ಇದರಿಂದ ಮದ್ಯದ ಬೆಲೆ ಏರಿಕೆ ಮಾಡುವ ಮುಚ್ಚೆ ಮತ್ತೊಮ್ಮೆ ಯೋಚನೆ ಮಾಡುವಂತೆ ಮದ್ಯ ಪ್ರಿಯರು ಮಾಡಿದ್ದಾರೆ. ಬೆಲೆ ಏರಿಕೆಯ ಮೂಲಕ ಲಾಭ ಪಡೆದುಕೊಳ್ಳುವ ಲೆಕ್ಕಾಚಾರದಲ್ಲಿದ್ದ ಸರ್ಕಾರಕ್ಕೇ ಇದೀಗ ಶಾಕ್ ಎದುರಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ರಾಜ್ಯದಲ್ಲಿ ಮದ್ಯ ಪ್ರಿಯರು ಸರ್ಕಾರಕ್ಕೆ ಭಾರೀ ಶಾಕ್ ಕೊಟ್ಟಿದ್ದಾರೆ. ಮೂರು ಮೂರು ಬಾರಿ ಮದ್ಯದ ಬೆಲೆಯನ್ನು ಏರಿಕೆ ಮಾಡಿ ಅಬಕಾರಿ ಆದಾಯ ಸಂಗ್ರಹ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದ ಸರ್ಕಾರಕ್ಕೆ ಇದೀಗ ಭಾರೀ ಆಘಾತ ಎದುರಾಗಿದೆ. ಮದ್ಯ ಬೆಲೆಯು ಕಳೆದ ಒಂದೂವರೆ ವರ್ಷದ ಅವಧಿಯಲ್ಲೇ ಮೂರು ಬಾರಿ ಹೆಚ್ಚಳವಾಗಿತ್ತು. ಒಂದರ ಹಿಂದೆ ಒಂದು ವಸ್ತುಗಳ ಬೆಲೆ ಏರಿಕೆಯ ನಂತರ ಮದ್ಯದ ಬೆಲೆ ಏರಿಕೆಯು ಜನ ಸಾಮಾನ್ಯರಿಗೆ ಭಾರೀ ಶಾಕ್ ಕೊಟ್ಟಿತ್ತು. ಇದೀಗ ಆ ಶಾಕ್ ಅನ್ನು ಮದ್ಯ ಪ್ರಿಯರು ಸರ್ಕಾರಕ್ಕೆ ಹಾಗೂ ಮದ್ಯ ಮಾರಾಟ ಕಂಪನಿಗಳಿಗೆ ಹಸ್ತಾಂತರಿಸಿದ್ದಾರೆ. ಅದೇನು ಎನ್ನುವ ವಿವರ ಇಲ್ಲಿದೆ.

ಕಳೆದ ಎರಡು ವರ್ಷಗಳಿಂದಲೂ ಅಬಕಾರಿ ಇಲಾಖೆಗೆ ಟಾರ್ಗೆಟ್ ರೀಚ್ ಆಗುವುದಕ್ಕೆ ಆಗುತ್ತಿಲ್ಲ. 2024 - 2025ನೇ ಸಾಲಿನಲ್ಲೂ ಸರ್ಕಾರಕ್ಕೆ ಮದ್ಯದಿಂದ ನಿರೀಕ್ಷಿತ ಆದಾಯ ಬಂದಿಲ್ಲ. ಬರೋಬ್ಬರಿ 2,995 ಕೋಟಿ ರೂ ಸಂಗ್ರಹದಲ್ಲಿ ಖೋತಾ ಆಗಿದೆ ಎಂದು ಹೇಳಲಾಗಿದೆ. ಇದು ಸರ್ಕಾರಕ್ಕೆ ಮದ್ಯ ಪ್ರಿಯರು ಕೊಟ್ಟಿರುವ ಭರ್ಜರಿ ಶಾಕ್. ಮದ್ಯ ಮಾರಾಟ ಪ್ರಮಾಣ ತುಸು ಹೆಚ್ಚಳವಾಗಿದೆ. ಆದರೆ, ಸರ್ಕಾರಕ್ಕೆ ಹೆಚ್ಚಾಗಿ ಆದಾಯ ಬರುತ್ತಿದ್ದ ಬಿಯರ್ ಮಾರಾಟವೇ ಕುಸಿತ ಕಂಡಿದೆ. ಸರ್ಕಾರವು ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಅಂದರೆ 18 ತಿಂಗಳ ಅವಧಿಯಲ್ಲಿ ಬರೋಬ್ಬರಿ ಮೂರು ಬಾರಿ ಬಿಯರ್ ಮಾರಾಟ ಬೆಲೆಯನ್ನು ಹೆಚ್ಚಳ ಮಾಡಿತ್ತು.
ಇದರಿಂದ ಬಿಯರ್ ಮಾರಾಟವು ಭಾರೀ ಕುಸಿತ ಕಂಡಿದ್ದು. ಲಾಭದ ನಿರೀಕ್ಷೆಯಲ್ಲಿದ್ದ ಸರ್ಕಾರಕ್ಕೆ ಆಘಾತ ಎದುರಾಗಿದೆ. ಬಿಯರ್ ಮಾರಾಟ ಕುಸಿತ ಕಾಣುವುದಕ್ಕೆ ರಾಜ್ಯ ಸರ್ಕಾರವು ಬಿಯರ್ ಬೆಲೆಯನ್ನು ನಿರಂತರವಾಗಿ ಹೆಚ್ಚಿಸಿದ್ದೇ ಕಾರಣ ಅಂತ ಹೇಳಲಾಗಿದೆ. 2023 -2024ನೇ ಸಾಲಿಗೆ ಹೋಲಿಕೆ ಮಾಡಿದರೆ, 2024 - 2025ರ ಮಾರ್ಚ್ ಅವಧಿಯವರೆಗೆ ಬಿಯರ್ ಮಾರಾಟ ಕುಸಿತ ಕಂಡಿದೆ. ಬೆಲೆ ಏರಿಕೆ ಮಾಡಿ ಅಬಕಾರಿ ಆದಾಯದ ನಿರೀಕ್ಷೆಯಲ್ಲಿದ್ದ ಸರ್ಕಾರಕ್ಕೆ ಮದ್ಯ ಪ್ರಿಯರು ಸೆಡ್ಡು ಹೊಡೆದಿದ್ದಾರೆ.

ಈ ರೀತಿ ಇರುವಾಗಲೇ ಬಿಯರ್ ಮಾರಾಟ ಕಂಪನಿಗಳು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು. ದಯವಿಟ್ಟು ಯಾವುದೇ ಕಾರಣಕ್ಕೂ ಮದ್ಯದ ಮೇಲೆ ಅದರಲ್ಲೂ ಮುಖ್ಯವಾಗಿ ಬಿಯರ್ ಬೆಲೆ ಏರಿಕೆ ಮಾಡಬೇಡಿ. ಈಗಾಗಲೇ ಬಿಯರ್ ಬೆಲೆ ಹೆಚ್ಚಳವಾಗಿರುವುದರಿಂದ ಬಿಯರ್ ಮಾರಾಟದಲ್ಲಿ ಭಾರೀ ಕುಸಿತ ಕಂಡಿದೆ ಎಂದು ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ವಿವಿಧ ವಸ್ತುಗಳ ಬೆಲೆ ಭರ್ಜರಿ ಏರಿಕೆ ಕಂಡಿದೆ. ಅಲ್ಲದೇ ಸೇವೆಗಳ ಬೆಲೆಯೂ ಭಾರೀ ಏರಿಕೆ ಕಂಡಿದೆ. ಇದರ ಬೆನ್ನಲ್ಲೇ ಬ್ರೂವರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದಿಂದ (ಭಾರತದ ಅತಿ ದೊಡ್ಡ ಬಿಯರ್ ತಯಾರಕ ಸಂಘ) ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದೆ.












Click it and Unblock the Notifications