Property: ರಾಜ್ಯದಲ್ಲಿ ಆಸ್ತಿಗಳಿಗೆ ಈ ದಾಖಲೆ ಲಿಂಕ್, ಮಹತ್ವದ ಬೆಳವಣಿಗೆ!
ಆಸ್ತಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಹಲವು ಮಹತ್ವದ ಸುಧಾರಣೆಗಳನ್ನು ತರುತ್ತಲ್ಲೇ ಇದೆ. ಇದೀಗ ಆಸ್ತಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಜಾರಿ ಮಾಡಿರುವ ಹೊಸ ಕ್ರಮದಿಂದ ಆಸ್ತಿಗಳ ಸಂರಕ್ಷಣೆ ಹಾಗೂ ಪಿತ್ರಾರ್ಜಿತ ಆಸ್ತಿ ವಿಷಯದಲ್ಲಿ ಸಹಕಾರಿಯಾಗಿದೆ ಎಂದೇ ಹೇಳಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಆಸ್ತಿ ಸಂರಕ್ಷಣೆ ಹಾಗೂ ಆಸ್ತಿಗಳಲ್ಲಿ ಆಗುವ ಮೋಸವನ್ನು ತಪ್ಪಿಸುವ ನಿಟ್ಟಿನಲ್ಲಿ ಹಲವು ಸುಧಾರಣೆ ಕ್ರಮಗಳನ್ನು ಅನುಸರಿಸುತ್ತಿದೆ. ಆದರೆ, ಇ - ಖಾತಾ ವಿಚಾರದಲ್ಲಿ ಗೊಂದಲಗಳು ಸೃಷ್ಟಿಯಾಗಿವೆ. ಇದರ ಹೊರತಾಗಿ ಆಸ್ತಿಗಳ ಸುರಕ್ಷತೆಯಲ್ಲಿ ಹೊಸ ಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ.
ಕರ್ನಾಟಕದಲ್ಲಿ ಆಸ್ತಿಗಳ ಮಾರಾಟ ಹಾಗೂ ಖರೀದಿ ಸಮಯದಲ್ಲಿ ಯಾವುದೇ ಮೋಸಗಳು ನಡೆಯಬಾರದು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರವು ಹಲವು ಸುಧಾರಣೆ ಕ್ರಮಗಳನ್ನು ಅನುಸರಿಸುತ್ತಿದೆ. ಇದೀಗ ಆಸ್ತಿ ಮೋಸವನ್ನು ತಪ್ಪಿಸುವ ಉದ್ದೇಶದಿಂದ ಆಸ್ತಿಗಳಿಗೆ / ಆಸ್ತಿ ದಾಖಲೆಗಳಿಗೆ ಆಧಾರ್ ಲಿಂಕ್ ಮಾಡುಲಾಗುತ್ತಿದೆ. ಆಸ್ತಿಯಲ್ಲಿ ಆಗುವ ವಂಚನೆ ತಪ್ಪಿಸುವುದಕ್ಕೆ, ರೈತರಿಗೆ ಸರ್ಕಾರದಿಂದ ಸಕಾಲಿಕ ನೆರವು ನೀಡುವುದಕ್ಕೆ. ಅಲ್ಲದೆ ಮುಖ್ಯವಾಗಿ ಸರ್ಕಾರಿ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಲು ಇದು ಸಹಕಾರಿಯಾಗಿದೆ. ಪಿತ್ರಾರ್ಜಿತ ಖಾತೆಗಳನ್ನು ಕೊಡಲು ಈ ವಿಧಾನ ಸಹಕಾರಿಯಾಗಿದೆ ಎಂದು ಕಂದಾಯ ಇಲಾಖೆ ಹೇಳಿದೆ ಎಂದು ದಿ ಹಿಂದೂ ವರದಿ ಮಾಡಿದೆ.

ಕರ್ನಾಟಕದಲ್ಲಿ 2025ನೇ ಸಾಲಿನ ಜನವರಿ ಅಂತ್ಯದ ವೇಳೆಗೆ ಒಟ್ಟು 2.22 ಕೋಟಿ ಭೂ ದಾಖಲೆಗಳನ್ನು ಆಧಾರ್ ಕಾರ್ಡ್‌ನೊಂದಿಗೆ ಯಶಸ್ವಿಯಾಗಿ ಜೋಡಣೆ ಮಾಡಲಾಗಿದೆ. ಈ ರೀತಿ ಆಸ್ತಿಗಳೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುತ್ತಿರುವುದರಿಂದ ಆಸ್ತಿಗಳಲ್ಲಿ ಆಗುವ ವಂಚನೆಯನ್ನು ತಪ್ಪಿಸಲು ಸಾಧ್ಯವಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕ ಸಿಬ್ಬಂದಿಯ ಕೆಲಸದಿಂದ ಇದನ್ನು ಮಾಡಲು ಸಾಧ್ಯವಾಗಿದೆ ಎಂದಿದ್ದಾರೆ.
ಖಾತಾ ಸಿದ್ದರಾಮಯ್ಯ ಸಭೆ: ಇನ್ನು ರಾಜ್ಯದಲ್ಲಿ ಇ -ಖಾತಾ ಹಾಗೂ ಬಿ - ಖಾತಾ ವಿಚಾರದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿದ್ದು. ಈ ಸಂಬಂಧ ಈಚೆಗೆ ಕಂದಾಯ ವಿಭಾಗದ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿದ್ದಾರೆ.
ಕಂದಾಯ ವಿಭಾಗದ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಆಸ್ತಿದಾರರಿಗೆ ಖಾತಾ ನೀಡುವುದಕ್ಕೆ ಸಂಬಂಧಿಸಿದಂತೆ ಮಹತ್ವದ ಸೂಚನೆಯನ್ನು ಕೊಡಲಾಗಿದೆ. ಅದರಲ್ಲೂ ಮುಖ್ಯವಾಗಿ ಒಂದು ಬಾರಿ ಮಾತ್ರ ಬಿ ಖಾತಾ ನೀಡಬೇಕು. ಈ ರೀತಿ ಬಿ - ಖಾತಾ ನೀಡುವುದಕ್ಕೆ ಕೇವಲ ಮೂರು ತಿಂಗಳು ಮಾತ್ರ ಗಡುವು ಇರಲಿದೆ. ಈ ರೀತಿ ಖಾತಾ ನೀಡುವ ಸಮಯದಲ್ಲಿ ಆಸ್ತಿದಾರರಿಗೆ ಸಮಸ್ಯೆ ಕೊಡಬಾರದು. ಅವರನ್ನು ಕಚೇರಿಗಳಿಗೆ ಸುತ್ತಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಹೀಗಾಗಿ ಬಿ ಖಾತಾ ಹೊಂದಿರುವ ಆಸ್ತಿದಾರರು ತುಸು ನಿರಾಳರಾಗಿದ್ದಾರೆ.
ಇದೇ ಸಮಯದಲ್ಲಿ ಒಂದು ಬಾರಿ ಮಾತ್ರ ಈ ಸೇವೆ ಇರಲಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.












Click it and Unblock the Notifications