ಲಿಂಗಾಯತ ಪಂಚಮಸಾಲಿ ಹೋರಾಟ ಮತ್ತೆ ಮುನ್ನೆಲೆಗೆ: ಸರ್ಕಾರಕ್ಕೆ ಏ.14ರ ಗಡುವು
ಬೆಂಗಳೂರು, ಮಾ.15: ಲಿಂಗಾಯತ ಪಂಚಮಸಾಲಿ ಹೋರಾಟ ಮತ್ತೆ ಮುನ್ನೆಲೆಗೆ ಬಂದಿದ್ದು, ಸರ್ಕಾರಕ್ಕೆ ಮತ್ತೊಂದು ಗಡುವು ನೀಡಲಾಗಿದೆ.
ಲಿಂಗಾಯತ ಪಂಚಮಸಾಲಿ ಮೀಸಲಾತಿಗಾಗಿ ಕೂಡಲಸಂಗಮ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯ ಸತ್ಯಾಗ್ರಹ ಸಂಧರ್ಭದಲ್ಲಿವಿಧಾನಸೌಧದ ಅಧಿವೇಶನದಲ್ಲಿಸರ್ಕಾರವು 2021 ಮಾರ್ಚ 15 ಕ್ಕೆ ಕೊಟ್ಟ ಮಾತಿಗೆ ಒಂದು ವರ್ಷವಾಗಿದೆ. ಈ ಕಾರಣದಿಂದಾಗಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಮಾ.15ರಂದು ಸಭೆ ನಡೆಸಿ ಮುಂದಿನ ಹೋರಾಟದ ಸಿದ್ಧತೆ ಮಾಡಿಕೊಳ್ಳಲಾಯಿತು.
ಬೆಂಗಳೂರಿನ ಲಿಂಗಾಯತ ಪಂಚಮಸಾಲಿ (ಗೌಡ - ಮಲೆಗೌಡ - ದೀಕ್ಷಾ ಲಿಂಗಾಯತರುಗಳ) ದುಂಡು ಮೇಜಿನ ಪರಿಷತ್ ನಲ್ಲಿ ನಿರ್ಧರಿಸಿದ ಮೂರು ಅಂತಿಮ ನಿರ್ಣಯಗಳನ್ನು ಕೈಗೊಂಡು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಘೋಷಿಸಿದರು.

1)ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ಬಜೆಟ್ ಅಧಿವೇಶನದ ಮಾರ್ಚ್ 30ರ ಒಳಗಾಗಿ ಹಿಂದುಳಿದವರ್ಗದ ಆಯೋಗದಿಂದ ವರದಿ ಪಡೆದುಕೊಳ್ಳಬೇಕು.
2) ಏಪ್ರಿಲ್ 14 ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯಂದು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಯನ್ನು ಮುಖ್ಯಮಂತ್ರಿಗಳು ಘೋಷಿಸಬೇಕು.
3) ಏಪ್ರಿಲ್ 14 ರ ಒಳಗಾಗಿ ಒಂದು ವೇಳೆ ಮೀಸಲಾತಿ ಘೋಷಿಸದಿದ್ದರೆ, ಅಂದೇ ಕೂಡಲಸಂಗಮದಲ್ಲಿ ಅಂತಿಮ ಸಭೆ ಕರೆದು, ಉಗ್ರ ಹೋರಾಟದ ಅಂತಿಮ ದಿನವನ್ನು ಘೋಷಿಸುತ್ತೇವೆ ಎಂಬ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಸಭೆಯಲ್ಲಿ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ, ಸಿದ್ದು ಸವದಿ, ಎಂ.ವೈ. ಪಾಟೀಲ್, ಚನ್ನರಾಜ್ ಹಟ್ಟಿಹೊಳಿ, ಶಾಸಕ ಹಾಗೂ ಮೀಸಲಾತಿ ಚಳುವಳಿಯ ಪಾದಯಾತ್ರೆ ಸ್ವಾಗತ ಸಮಿತಿ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಎಚ್ ಎಸ್ ಶಿವಶಂಕರ ಸಹಿತ ಹಲವರು ಹಾಜರಿದ್ದರು.












Click it and Unblock the Notifications