ವಿದ್ಯುತ್ ಇಲಾಖೆಯ ಲೈನ್‌ಮನ್ ಇನ್ನು ಮುಂದೆ 'ಪವರ್‌ಮನ್'
ಬೆಂಗಳೂರು, ಅಕ್ಟೋಬರ್ 25 : ವಿದ್ಯುತ್ ಇಲಾಖೆಯಲ್ಲಿರುವ ಲೈನ್‌ಮನ್ ಹೆಸರು ಬದಲಾವಣೆಯಾಗಲಿದೆ. ಹೌದು, ಲೈನ್ ಮನ್ ಇನ್ನು ಮುಂದೆ ಪವರ್‌ಮನ್ ಆಗಲಿದ್ದು, ಅಕ್ಟೋಬರ್ 28ರಂದು ಈ ಕುರಿತು ಘೋಷಣೆ ಮಾಡಲಾಗುತ್ತದೆ.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಈ ಕುರಿತು ಹೇಳಿಕೆ ನೀಡಿದ್ದಾರೆ. 'ಬ್ರಿಟಿಷರ ಕಾಲದಿಂದಲೂ ಲೈನ್‌ಮನ್ ಎಂಬ ಹೆಸರು ಇದೆ. ತಜ್ಞರೊಂದಿಗೆ ಚರ್ಚಿಸಿ ಆ ಹೆಸರನ್ನು ಪವರ್‌ಮನ್ ಎಂದು ಬದಲಿಸಿದ್ದೇವೆ' ಎಂದು ಹೇಳಿದರು.

'ಇಲಾಖೆಯ ಸಿಬ್ಬಂದಿಗಳಿಗೆ ಸನ್ಮಾನ ಮಾಡಲು ಅಕ್ಟೋಬರ್ 28ರಂದು ರಾಜ್ಯ ಮಟ್ಟದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಅಂದು ಪವರ್‌ಮನ್ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ' ಎಂದು ಸಚಿವರು ತಿಳಿಸಿದರು.
ವಿದ್ಯುತ್ ಇಲಾಖೆಯ ಲೈನ್‌ಮನ್‌ಗಳ ಸಂಘವೂ ಹೆಸರನ್ನು ಬದಲಿಸುವಂತೆ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಮನವಿಯನ್ನು ಅಂಗೀಕರಿಸಿದ ಸರ್ಕಾರ ತಜ್ಞರ ಜೊತೆ ಚರ್ಚೆ ನಡೆಸಿ 'ಪವರ್‌ಮನ್' ಎಂಬ ಹೆಸರನ್ನು ಅಂತಿಮಗೊಳಿಸಿದೆ.
ಜನರು ಮತ್ತು ಇಲಾಖೆಯ ನಡುವಿನ ಮೊದಲ ಕೊಂಡಿ ಲೈನ್ ಮನ್. ವಿದ್ಯುತ್ ಸಂಪರ್ಕ ಕಡಿತಗೊಂಡರೆ ಮೊದಲು ಜನರು ಕರೆ ಮಾಡುವುದು ಇವರಿಗೆ.












Click it and Unblock the Notifications