ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Karnataka Rains : ರಾಜ್ಯದ 10ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆ: IMD

|
Google Oneindia Kannada News

ಬೆಂಗಳೂರು, ನವೆಂಬರ್ 28: ಕರ್ನಾಟಕ ರಾಜ್ಯದ 10ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಮಳೆ ಬೀಳಲಿದೆ. ಇದರಲ್ಲಿ ಉತ್ತರ ಒಳನಾಡು ಹೊರತುಪಡಿಸಿ ಉಳಿದ ಎರಡು ಭಾಗದಲ್ಲಿ ಅಧಿಕ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಕಳೆದ ಎರಡು ವಾರದಿಂದ ಹವಾಮಾನದಲ್ಲಿ ಉಂಟಾಗಿದ್ದ ಏರುಪೇರು ತುಸು ಸಹಜ ಸ್ಥಿತಿಯತ್ತ ಬರುತ್ತಿದೆ. ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ಹಾಗೂ ದೇಶದ ಕರಾವಳಿ ಭಾಗದಲ್ಲಿ ಸೃಷ್ಟಿಯಾಗಿದ್ದ ಮೇಲ್ಮೈ ಸುಳಿಗಾಳಿ ಅಬ್ಬರ ಮತ್ತು ವಾಯುಭಾರ ಕುಸಿತ ಪ್ರಭಾವ ಕಡಿಮೆಯಾಗಿದೆ. ಹೀಗಿದ್ದರೂ ರಾಜ್ಯ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಸುರಿಯಲಿದೆ.

ಭಾರತದಲ್ಲಿ ಹವಾಮಾನದ ಹೊಡೆತಕ್ಕೆ 9 ಕೋಟಿ ಜನರಿಗೆ ಊಟ ಸಿಗುವುದಿಲ್ಲ!ಭಾರತದಲ್ಲಿ ಹವಾಮಾನದ ಹೊಡೆತಕ್ಕೆ 9 ಕೋಟಿ ಜನರಿಗೆ ಊಟ ಸಿಗುವುದಿಲ್ಲ!

ಕರಾವಳಿ ಜಿಲ್ಲೆಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ದಕ್ಷಿಣ ಭಾಗದ ಜಿಲ್ಲೆಗಳಾದ ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು ಹಾಗೂ ಶಿವಮೊಗ್ಗದ ಕೆಲವು ಕಡೆಗಳಲ್ಲಿ ಹಗುರ ಮಳೆ ಸುರಿಯುವ ನಿರೀಕ್ಷೆ ಇದೆ. ಉಳಿದ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ವ್ಯಾಪಕವಾಗಿ ಮಳೆ ಬರಬಹುದು ಎನ್ನಲಾಗಿದೆ.

Light To Moderate Rain expected In More Than 10 Districts Of Karnataka

ಇದೇ ಅವಧಿಯಲ್ಲಿ ಉತ್ತರ ಒಳನಾಡಿನಲ್ಲಿ ಬೆಳಗಾವಿ, ಧಾರವಾಡ, ಹಾವೇರಿ ಇನ್ನಿತರ ಪ್ರದೇಶಗಳ ಒಂದೆರಡು ಕಡೆಗ ತುಂತುರು ಮಳೆಯ ವಾತಾವರಣ ಕಂಡು ಬರಲಿದೆ. ನಂತರ ಮತ್ತೆ ರಾಜ್ಯದ ಎಲ್ಲ ಭಾಗಗಳಲ್ಲೂ ಶುಷ್ಕ, ಒಣಹವೆಯ ವಾತಾವರಣ ನಿರೀಕ್ಷೆ ಇದೆ. ಬೆಂಗಳೂರು ನಗರ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಹಲವೆಡೆ ಬೆಳಗ್ಗೆ ಚಳಿ ಮುಂದುವರಿಯಲಿದ್ದು, ಮಧ್ಯಾಹ್ನ ಅಧಿಕ ತಾಪಮಾನ ಕಂಡು ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.

Light To Moderate Rain expected In More Than 10 Districts Of Karnataka

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮುಂದಿನ ಎರಡು ದಿನ ಆಗಾಗ ತುಂತುರು ಮಳೆ ಮತ್ತು ಬೆಳಗ್ಗೆ ಚಳಿ ವಾತಾವರಣ ಕಂಡು ಬರಲಿದೆ. ನಂತರ ಡಿಸೆಂಬರ್ 1ರಂದು ನಗರದ ಬಹಳಷ್ಟು ಕಡೆಗಳಲ್ಲಿ ತುಂತುರು ಮಳೆ ಆಗುವ ಸಾಧ್ಯತೆ ಇದೆ. ಇದರ ಹೊರತು ರಾಜ್ಯದಲ್ಲಿ ಯಾವುದೇ ಗಂಭೀರ ರೂಪದ ಬದಲಾವಣೆಗಳು ಇಲ್ಲ ಎಂದು ತಿಳಿದು ಬಂದಿದೆ.

English summary
Light To Moderate Rain expected In More Than 10 Districts Of Karnataka Indian Meteorological Department (IMD) Report said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X