ಮಂಗಳೂರು ಸ್ಫೋಟ, ಮತದಾರರ ದತ್ತಾಂಶ ದುರ್ಬಳಕೆ ಹಿಂದಿನ ಸತ್ಯ ಬಯಲಾಗಲಿ: ಡಿ.ಕೆ.ಶಿವಕುಮಾರ್‌

ಬೆಂಗಳೂರು, ಡಿಸೆಂಬರ್‌ 15: ಮಂಗಳೂರು ಸ್ಫೋಟ ಹಾಗೂ ಮತದಾರರ ದತ್ತಾಂಶ ದುರ್ಬಳಕೆ ಹಿಂದಿನ ಸತ್ಯ ಬಯಲಾಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒತ್ತಾಯಿಸಿದ್ದಾರೆ.

ಈ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಅವರು, 'ಕರ್ನಾಟಕದಲ್ಲಿ ಮತದಾರರ ಮಾಹಿತಿ ದುರ್ಬಳಕೆ ಮಾಡಿರುವುದು ರಾಷ್ಟ್ರೀಯ ಭದ್ರತೆಯ ಸಮಸ್ಯೆ. ಮತದಾರರ ಮಾಹಿತಿಯನ್ನು ಕಳ್ಳತನ ಮಾಡಲು ಹೇಗೆ ಸಾಧ್ಯ? ಇದನ್ನು ಯಾರು ಹಾಗೂ ಯಾರ ಸೂಚನೆ ಮೇರೆಗೆ ಮಾಡಿದರು? ವಿದೇಶದಿಂದ ಸೈಬರ್‌ ದಾಳಿ ಮಾಡಲಾಯಿತೇ?' ಎಂದು ಪ್ರಶ್ನಿಸಿದ್ದಾರೆ.

'ಇದನ್ನು ಭಯೋತ್ಪಾದನಾ ಕೃತ್ಯವೆಂದು ಪರಿಗಣಿಸಿ ಅದಕ್ಕೆ ಕಾರಣರಾದವರನ್ನು ಭಯೋತ್ಪಾದನಾ ವಿರೋಧಿ UAPA ಕಾನೂನಿನಡಿಯಲ್ಲಿ ಬಂಧಿಸಬೇಕು. ಮಂಗಳೂರು ಸ್ಪೋಟವೇ ಆಗಲಿ ಅಥವಾ ಮತದಾರರ ಮಾಹಿತಿ ಕಳ್ಳತನವೇ ಆಗಿರಲಿ ಕಾಂಗ್ರೆಸ್‌ ಪಕ್ಷ ಕೇಳುತ್ತಿರುವುದು ಮುಕ್ತ, ನ್ಯಾಯಸಮ್ಮತ ಹಾಗೂ ಪ್ರಾಮಾಣಿಕ ತನಿಖೆ. ಎರಡನ್ನೂ ಪ್ರಾಮಾಣಿಕತೆಯಿಂದ ತನಿಖೆ ಮಾಡಬೇಕು' ಎಂದು ಅವರು ಒತ್ತಾಯಿಸಿದ್ದಾರೆ.

Let the truth behind Mangalore blast, Voter Data Theft Says DK Shivakumar

'ಆದರೆ ದುರಾದೃಷ್ಟಕರ ಸಂಗತಿ ಏನಂದರೆ ಈ ಸರ್ಕಾರ ಪ್ರಾಮಾಣಿಕತೆಯಿಂದ ಯಾವ ಕೆಲಸವನ್ನೂ ಮಾಡುತ್ತಿಲ್ಲ. ಜನತೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಮತದಾರರ ಮಾಹಿತಿ ಕಳ್ಳತನ ಹಗರಣದ ಸತ್ಯಾಂಶ ಬಹಿರಂಗಗೊಂಡಂತೆ ಮಂಗಳೂರು ಸ್ಫೋಟದ ಹಿಂದಿರುವವರು ಯಾರು ಎಂಬ ಸತ್ಯವೂ ಬಯಲಾಗಬೇಕು' ಎಂದು ಡಿಕೆಶಿ ಟ್ವೀಟ್‌ ಮಾಡಿದ್ದಾರೆ.

'ಕಾಂಗ್ರೆಸ್ ಪಕ್ಷ ಸತ್ಯ, ನ್ಯಾಯದಲ್ಲಿ ನಂಬಿಕೆ ಇಟ್ಟಿದೆ. ಆದರೆ ಬಿಜೆಪಿ ಸುಳ್ಳಿನ ಕತ್ತಿ ಅಲಗಿನ ಮೇಲೆ ನಿಂತಿದೆ . ಮಂಗಳೂರು ಸ್ಫೋಟ ಮತ್ತು ಮತದಾರರ ದತ್ತಾಂಶ ದುರ್ಬಳಕೆ ಹಗರಣದ ಕುರಿತಂತೆ ಪ್ರಾಮಾಣಿಕ ತನಿಖೆಯನ್ನು ಕಾಂಗ್ರೆಸ್ ಬಯಸುತ್ತದೆ. ಬಿಜೆಪಿ ಕೇವಲ ರಾಜಕೀಯ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದೆ' ಎಂದು ಅವರು ಹೇಳಿದ್ದಾರೆ.

Let the truth behind Mangalore blast, Voter Data Theft Says DK Shivakumar

'ಮತದಾರರ ಮಾಹಿತಿ ಕಳ್ಳತನದ ಬಗ್ಗೆ ಮಾಧ್ಯಮಗಳು ಏಕೆ ಮಾತನಾಡುತ್ತಿಲ್ಲ? ಮಾಧ್ಯಮದವರು ಲಂಚ ಪಡೆದಿದ್ದಾರೆ ಎಂಬ ಕಾರಣಕ್ಕೋ? ಅಥವಾ ಮಾಧ್ಯಮದವರು ಬಿಜೆಪಿಗೆ ಹೆದರುತ್ತಿದ್ದಾರೆಯೋ?' ಎಂದು ಅವರು ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+