ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನರಿಗೆ ಉಡಾಫೆ ಘೋಷಣೆ ಮಾಡಿದ್ದಾರೆ ಅಂದ್ರೆ 78 ರಿಂದ 50 ಸ್ಥಾನಕ್ಕೆ ಕಾಂಗ್ರೆಸ್ ಹೋಗುತ್ತೆ: ಸಿಎಂ ಇಬ್ರಾಹಿಂ

|
Google Oneindia Kannada News

ಬೆಂಗಳೂರು,ಜನವರಿ17: ಕಾಂಗ್ರೆಸ್ ಜನರಿಗೆ ಉಡಾಫೆ ಘೋಷಣೆ ಕೊಡುತ್ತಿದ್ದಾರೆ ಅಂದ್ರೆ 78 ರಿಂದ 50 ಸ್ಥಾನಕ್ಕೆ ಕಾಂಗ್ರೆಸ್ ಹೋಗುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಮಂಗಳವಾರ ನಗರದಲ್ಲಿ ಕಾಂಗ್ರೆಸ್ ಗೃಹ ಲಕ್ಷ್ಮಿ ಯೋಜನೆ ಘೋಷಣೆ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು,ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಸರ್ಕಾರವಿದೆಯಲ್ಲ ಮಾಡ್ತಾರಾ.? ಜನರಿಗೆ ಟೋಪಿ ಹಾಕುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಉತ್ತರಪ್ರದೇಶದಲ್ಲಿ ಹೋಗಿ ಕ್ಯಾಂಪೇನ್ ಮಾಡಿದ್ರು ಏನಾಯ್ತು ಅಲ್ಲಿ. ಊರಿನಲ್ಲಿ ನಡೆದಿಲ್ಲ ಅಂದ್ರೆ ಪರರ ಊರಲ್ಲಿ ನಡೆಯುತ್ತಾ ಎಂದು ಕಾಂಗ್ರೆಸ್ ಹೈಕಮಾಂಡ್ ವಿರುದ್ದ ಕಿಡಿಕಾರಿದ್ದಾರೆ.

ಜೆಡಿಎಸ್ ಸರಕಾರ ಬಂದರೆ ರೈತ ಚೈತನ್ಯ ಯೋಜನೆ ಜತೆಗೆ ತೆಲಂಗಾಣ ಮಾದರಿಯ ಕೃಷಿ ಬಂಧು ಜಾರಿ: ಹೆಚ್ಡಿಕೆಜೆಡಿಎಸ್ ಸರಕಾರ ಬಂದರೆ ರೈತ ಚೈತನ್ಯ ಯೋಜನೆ ಜತೆಗೆ ತೆಲಂಗಾಣ ಮಾದರಿಯ ಕೃಷಿ ಬಂಧು ಜಾರಿ: ಹೆಚ್ಡಿಕೆ

ರೈತರ ಬಗ್ಗೆ ಆ ಯಮ್ಮ ಮಾತನಾಡಿಲ್ಲ. ರೈತರ ಬಗ್ಗೆ ವರಿಗೆ ಗೊತ್ತೆ ಇಲ್ಲ, ಕನಿಷ್ಠ ರೈತರ ಕಷ್ಟದ ಬಗ್ಗೆ ಡಿ.ಕೆ. ಶಿವಕುಮಾರ್ ಆದ್ರೂ ಹೇಳಿ ಕೊಡಬೇಕಿತ್ತು. ಸಿಟಿಯಲ್ಲಿರುವ ಮನೆಗೆ ಕರೆಂಟ್ ಕೊಟ್ಟರೆ ಸಾಕು. ರೈತರ ಮನೆಯಲ್ಲಿ ದೀಪ ಹಚ್ಚಬಾರದಾ.? ಸಿಟಿಯಲ್ಲಿ ನಾಯಿ ಏರ್ ಕಂಡಿನಷ್ಡ್ ರೂಂಗೆ ಕರೆಂಟ್ ಇದೆ, ರೈತರ ಪಂಪಸೆಟ್‌‌ಗಳಿಗೆ ವಿದ್ಯುತ್ ಇಲ್ಲ. ಜನರಿಗೆ ಉಡಾಫೆ ಘೋಷಣೆ ಕೊಡುತ್ತಿದ್ದಾರೆ ಅಂದ್ರೆ 78 ರಿಂದ 50 ಸ್ಥಾನಕ್ಕೆ ಕಾಂಗ್ರೆಸ್ ಹೋಗುತ್ತದೆ ಎಂದು ಕಿಡಿಕಾರಿದ್ದಾರೆ.

Let CP Yogeshwar Win In Channapatna And Show It CM Ibrahim Said

ಇನ್ನೂ ಮೂರು ತಿಂಗಳು ಇದೆಯಲ್ಲ, ಛತ್ತೀಸ್ ಗಢ, ರಾಜಸ್ಥಾನದಲ್ಲಿ ಇದೇ ಘೋಷಣೆ ಜಾರಿ ಮಾಡಲಿ. ರಾಜ್ಯದಲ್ಲಿ ಕಾಂಗ್ರೆಸ್ ಇದ್ರೂನೂ ದರಿದ್ರ ಲಕ್ಷ್ಮಿನೆ, ಬಿಜೆಪಿ ಇದ್ರೂ ದರಿದ್ರ ಲಕ್ಷ್ಮಿ. ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಅಷ್ಟಲಕ್ಷ್ಮಿಯರು ಬರ್ತಾರೆ ಎಂದು ಹೇಳಿದರು. ನಾವು ಮನೆಯವರು. ಹೊರಗಿನವರು ಬರ್ತಾರೆ,ಹೋಗುತ್ತಾರೆ. ಮನೆಯಲ್ಲಿದ್ದವರು ನಾವು, ದೇವೆಗೌಡ್ರು. ನಮಗೆ ಯಾರು ಹೈಕಮಾಂಡ್ ಇಲ್ಲ. ನಾವು ಇಲ್ಲೇ ಇರ್ತೀವಿ, ಕೆರೆಯ ನೀರನ್ನು ಕೆರೆಗೆ ಚೆಲ್ಲುತ್ತೇವೆ ಎಂದು ಹೇಳಿದರು.

ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಮನೆ ದೇವರ ನುಡಿದಿರುವ ವಿಚಾರವಾಗಿ ಮಾತನಾಡಿ, ದೇವರು ಹೇಳುವ ಮುನ್ನವೇ ನಾನು ಹೇಳಿದ್ದೆ. ಸಿದ್ದರಾಮಯ್ಯನವರಿಗೆ 20 ವರ್ಷದಿಂದ ಜಾತಕ ಹೇಳಿ ಬಾದಾಮಿಗೆ ನಾನು ಕರೆದುಕೊಂಡು ಹೋಗಿದ್ದೆ. ಚಿಕ್ಕಯ್ಯಮ್ಮನವರು ಹೇಳೋಕೆ ಮುಂಚೆನೆ ನಾನು ಹೇಳಿದ್ದೆ. ಕೋಲಾರದಲ್ಲಿ ಸಿದ್ದರಾಮಯ್ಯ ನಿಂತರೆ ಕಡಿಮೆ ಮತ ತಗೋತಾರೆ, ವರ್ತೂರು ಪ್ರಕಾಶ್ ಸ್ಥಳೀಯವರು, ವರ್ತೂರು ಪ್ರಕಾಶ್ 2ನೇ ಸ್ಥಾನ,ಸಿದ್ದರಾಮಯ್ಯ ಮೂರನೇ ಸ್ಥಾನ ಬರ್ತಾರೆ. ವರ್ತೂರು ಪ್ರಕಾಶ್ ಮತ್ತು ಸಿದ್ದರಾಮಯ್ಯ ನಡುವೆ ಪೈಪೋಟಿ ಆಗುತ್ತದೆ. ವರ್ತೂರು ಪ್ರಕಾಶ್ ಭಂಡ,ಅವನು ಸಿದ್ದರಾಮಯ್ಯರನ್ನ ಎದುರಿಸುತ್ತಾರೆ ಎಂದು ಹೇಳಿದರು.

ಸ್ಯಾಂಟ್ರೋ ರವಿ ವಿಚಾರದ ತನಿಖೆ ಹೈಕೋರ್ಟ್ ನ್ಯಾಯಧೀಶರಿಂದ ನ್ಯಾಯಾಂಗ ತನಿಖೆಯಾಗಬೇಕು. ಯಾವ ಯಾವ ಅಧಿಕಾರಿ ವರ್ಗಾವಣೆ ಆಗಿದೆ ಅವರನ್ನು ಅಮಾನತು ಮಾಡಿ, ಮಂತ್ರಿಗಳಿಂದ ರಾಜೀನಾಮೆ ತೆಗೆದುಕೊಳ್ಳಿ. ಸಚಿವರು ಸ್ಟೇ ತೆಗೆದುಕೊಂಡಿರುವುದನ್ನು ವೆಕೆಟ್ ಮಾಡಿಸಿ, ಆ ಸಿಡಿ ರಹಸ್ಯ ಏನಿದೆ ಬಯಲು ಮಾಡಿ ಎಂದು ಆಗ್ರಹಿಸಿದರು.

Let CP Yogeshwar Win In Channapatna And Show It CM Ibrahim Said

ಜೆಡಿಎಸ್ ಶಾಸಕರು ಸೋಲ್ತಾರೆ ಎಂಬ ಸಿ.ಪಿ.ಯೋಗೇಶ್ವರ್ ಆಡಿಯೋ ವಿಚಾರವಾಗಿ ಮಾತನಾಡಿ, ನಿಮ್ಮ ನಿಮ್ಮ ಮನೆ ಚಿಂತೆ ಮಾಡಿಕೊಳ್ಳಿ. ಸಿ.ಪಿ.ಯೋಗೇಶ್ವರ್ ಚನ್ನಪಟ್ಟಣದಲ್ಲಿ ಗೆದ್ದು ತೋರಿಸಲಿ ಎಂದು ಹೇಳಿದರು.

ಶಾಸಕ ತಿಪ್ಪಾರೆಡ್ಡಿ ವಿರುದ್ದ ಕಂಟ್ರಾಕ್ಟರ್ ಆರೋಪ ವಿಚಾರವಾಗಿ ಉತ್ತರಿಸಿ, ಈಗಾಗಲೇ ಈ ಸರ್ಕಾರದ ಮೇಲೆ ಅರೋಪ‌‌ ಇದೆ. ಮುಖ್ಯಮಂತ್ರಿ ಅವರೇ,ಆರಗ ಜ್ಞಾನೇಂದ್ರ ಅವರೇ ತನಿಖೆ ಮಾಡಿಸ್ತೀರಾ? ತಿಪ್ಪಾರೆಡ್ಡಿ ಅವರು ದೂರು ಕೊಡ್ತಾರಾ? ನನ್ನ ರಾಜಕೀಯ ಜೀವನದಲ್ಲಿ ಇಂತಹ ದರಿದ್ರರು, ನೀತಿ ಗೆಟ್ಡವರು, ಭ್ರಷ್ಟರನ್ನ ನೋಡಿಲ್ಲ. ಇವರಿಗೆ ಅಂಜಿಗೆ,‌ಅಳುಕು ಇಲ್ಲ. ಮುಖ ವರೆಸಿಕೊಂಡು ಮತ್ತೆ ಭ್ರಷ್ಟಾಚಾರ ಮಾಡ್ತಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕೋಲಾರದಲ್ಲಿ ಜೆಡಿಎಸ್ ಬಿಜೆಪಿ ಒಳಮೈತ್ರಿ ಎಂಬ ಚರ್ಚೆ ವಿಚಾರವಾಗಿ ಮಾತನಾಡಿ, ಲೆಹರ್ ಸಿಂಗ್ ಗೆಲ್ಲಿಸೋದಕ್ಕೆ ಒಳ ಒಪ್ಪಂದ ಮಾಡಿಕೊಂಡವರು ಯಾರು.? ಒಳ ಒಪ್ಪಂದ ಮಾಡಿಕೊಂಡು ಲೆಹರ್ ಸಿಂಗ್ ಗೆಲ್ಲಿಸೋದು ಯಾರು.? ಒಬ್ಬ ಮಾರ್ವಾಡಿ ಗೆಲ್ಲಿಸೋಕೆ ಕರ್ನಾಟಕದ ಕುಪೇಂದ್ರ ರೆಡ್ಡಿಯನ್ನ ಸೋಲಿಸಿದ್ರಿ. ನಾವು ರೈತರ ಮಕ್ಕಳು ಒಪ್ಪಂದ ಮಾಡಿಕೊಂಡ್ರೆ ಮಾಡಿಕೊಂಡಿದ್ದಿವೆ ಅಂತಾ ಹೇಳ್ತಿವಿ. ಗುಬ್ಬಿ ವಾಸು ಕೋಲಾರದ ಶ್ರೀನಿವಾಸ್ ಗೌಡರಿಗೆ ಹಣ ಕೊಟ್ಟಿದ್ದು ಯಾರು.? ಎಂದು ಪ್ರಶ್ನಿಸಿದರು.

English summary
karnataka assembly elections 2023; Let CP Yogeshwar Win In Channapatna And Show It CM Ibrahim Said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X