ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ ಜಮೀರ್ ಅಹಮದ್

Posted By:
Subscribe to Oneindia Kannada

ಬೆಂಗಳೂರು, ಜೂನ್ 10 : ವಿಧಾನಪರಿಷತ್ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ವಿಧಾನಸಭೆಯ ಸದಸ್ಯರು 7 ವಿಧಾನಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಶುಕ್ರವಾರ ಮತದಾನ ಮಾಡಿದರು. ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಗೆ 8 ಅಭ್ಯರ್ಥಿಗಳು ಕಣದಲ್ಲಿದ್ದರು.

ವಿಧಾನಸೌಧದಲ್ಲಿ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಆರಂಭವಾದ ಮತದಾನ ಸಂಜೆ 4 ಗಂಟೆಗೆ ಮುಕ್ತಾಯಗೊಂಡಿತು. 5 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಿತ್ತು. 6 ಗಂಟೆಯ ವೇಳೆಗೆ ಅಂತಿಮ ಫಲಿತಾಂಶ ಪ್ರಕಟಗೊಂಡಿದೆ.[ಪರಿಷತ್ ಚುನಾವಣೆ ಹೇಗೆ ನಡೆಯುತ್ತದೆ?]

ಫಲಿತಾಂಶ

* ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್, ವೀಣಾ ಅಚ್ಚಯ್ಯ, ಅಲ್ಲಂ ವೀರಭದ್ರಪ್ಪ, ಆರ್‌.ಬಿ.ತಿಮ್ಮಾಪುರ ಅವರಿಗೆ ಗೆಲುವು
* ಬಿಜೆಪಿಯ ವಿ.ಸೋಮಣ್ಣ, ಲೆಹರ್ ಸಿಂಗ್‌ಗೆ ಗೆಲುವು
* ಜೆಡಿಎಸ್‌ನ ಕೆ.ವಿ.ನಾರಾಯಣ ಸ್ವಾಮಿಗೆ ಗೆಲುವು
* ಜೆಡಿಎಸ್‌ನ ಎರಡನೇ ಅಭ್ಯರ್ಥಿ ಡಾ.ವೆಂಕಟಪತಿ ಅವರಿಗೆ ಸೋಲು

ಮತದಾನದ ಪ್ರಮುಖ ಸುದ್ದಿಗಳು

* 'ಪಕ್ಷದ ವರಿಷ್ಠರು ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಎಂದು ಕೇಳಿಲ್ಲ. ಇಂದು ಮಧ್ಯಾಹ್ನದ ತನಕವೂ ಕಾದೆವು ಯಾರಿಂದಲೂ ಕರೆ ಬರಲಿಲ್ಲ. ಆದ್ದರಿಂದ, ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದೆ' ಎಂದು ಚಾಮರಾಜಪೇಟೆ ಕ್ಷೇತ್ರದ ಜೆಡಿಎಸ್ ಶಾಸಕ ಜಮೀರ್ ಅಹಮದ್ ಖಾನ್ ಹೇಳಿದರು. [ಭಿನ್ನಮತೀಯರ ಜೊತೆ ಮಾತುಕತೆ, ಬಾಗಿಲು ಮುಚ್ಚಿದ ಎಚ್ಡಿಕೆ]

zameer

* 'ನಾನು ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ್ದೇನೆ. ಪಕ್ಷದ ನಾಯಕರ ಹೇಳಿಕೆ, ನಡೆ ಬೇಸರ ತಂದಿದೆ' ಎಂದು ನಾಗಮಂಗಲ ಶಾಸಕ ಚೆಲುವರಾಯ ಸ್ವಾಮಿ ಹೇಳಿದರು. ವಿಧಾನಸೌಧದಲ್ಲಿ ಪರಿಷತ್ ಚುನಾನವಣೆಗೆ ಮತದಾನ ಮಾಡಿದ ಬಳಿಕ ಅವರು ಮಾಧ್ಯಮಗಳ ಜೊತೆ ಶುಕ್ರವಾರ ಮಧ್ಯಾಹ್ನ ಮಾತನಾಡಿದರು.

* ಮತಪತ್ರದಲ್ಲಿ ಕನ್ನಡವಿದೆ. ನಮಗೆ ಕನ್ನಡ ಬರುವುದಿಲ್ಲ ಎಂದು ಎಂಇಎಸ್ ಶಾಸಕರು ಪರಿಷತ್ ಚುನಾವಣೆ ವೇಳೆ ಕ್ಯಾತೆ ತೆರೆದಿದ್ದಾರೆ. ಚುನಾವಣಾಧಿಕಾರಿಗಳು ಶಾಸಕರಿಗೆ ಇಂಗ್ಲಿಷ್‌ನಲ್ಲಿ ಮತಪತ್ರದಲ್ಲಿರುವ ಮಾಹಿತಿ ಕುರಿತು ವಿವರಣೆ ನೀಡಿದರು.

* 'ಪಕ್ಷದ ವರಿಷ್ಠರ ಸೂಚನೆಯಂತೆ ಅಭ್ಯರ್ಥಿಗೆ ಮತ ಹಾಕಿದ್ದೇನೆ' ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

* ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಎಲ್ಲಾ ಶಾಸಕರು ಪಕ್ಷದ ಕಚೇರಿಯಿಂದ ವಿಧಾನಸೌಧಕ್ಕೆ ತೆರಳಲು ಸಿದ್ಧವಾಗುತ್ತಿದ್ದಾರೆ. ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ವಿ.ಸೋಮಣ್ಣ ಮತ್ತು ಲೆಹರ್ ಸಿಂಗ್ ಅವರನ್ನು ಕಣಕ್ಕಿಳಿಸಿದೆ.

siddaramaiah

* ಚುನಾವಣೆ ಹಿನ್ನಲೆಯಲ್ಲಿ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ.

ಅಭ್ಯರ್ಥಿಗಳು
* ಕಾಂಗ್ರೆಸ್‌ - ರಿಜ್ವಾನ್ ಅರ್ಷದ್, ವೀಣಾ ಅಚ್ಚಯ್ಯ, ಅಲ್ಲಂ ವೀರಭದ್ರಪ್ಪ, ಆರ್‌.ಬಿ.ತಿಮ್ಮಾಪುರ
* ಬಿಜೆಪಿ - ವಿ.ಸೋಮಣ್ಣ, ಲೆಹರ್ ಸಿಂಗ್
* ಜೆಡಿಎಸ್‌ - ನಾರಾಯಣ ಸ್ವಾಮಿ, ಡಾ.ವೆಂಕಟಪತಿ [ಒಬ್ಬರು ಅಭ್ಯರ್ಥಿ ಗೆಲುವು ಸಾಧಿಸಲು 29 ಮತಗಳು ಬೇಕು]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Legislative Council election results announced On Friday, June 10, 2016. Karnataka assembly members elect 7 members for Legislative Council. Congress bagged 4 seats in election. BJP's 2 and 1 JDS members elected.
Please Wait while comments are loading...