ಪರಿಷತ್ ಚುನಾವಣೆ : ಜೆಡಿಎಸ್ 12 ಅಭ್ಯರ್ಥಿಗಳ ಪಟ್ಟಿ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 07 : ವಿಧಾನಪರಿಷತ್ ಚುನಾವಣಾ ಕಣ ರಂಗೇರುತ್ತಿದ್ದು, ಟಿಕೆಟ್ ಪಡೆಯಲು ಮೂರು ಪಕ್ಷಗಳಲ್ಲಿ ಪೈಪೋಟಿ ನಡೆಯುತ್ತಿದೆ. ಭಾನುವಾರ ಜೆಡಿಎಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಡಿಸೆಂಬರ್ 27ರಂದು ಚುನಾವಣೆ ನಡೆಯಲಿದೆ.

ತುಮಕೂರು ಕ್ಷೇತ್ರದಿಂದ ಜೆಡಿಎಸ್‌ ಟಿಕೆಟ್‌ ಸಿಗದ ಕಾರಣಕ್ಕೆ ಅಸಮಧಾನಗೊಂಡಿದ್ದ ವಿಧಾನ ಪರಿಷತ್‌ ಸದಸ್ಯ ಎಂ.ಆರ್‌. ಹುಲಿನಾಯ್ಕರ್‌ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ನೀಡುವ ಮೂಲಕ ಹೊಸ ದಾಳ ಉರುಳಿಸಿದೆ. ತುಮಕೂರಿನಲ್ಲಿ ಜೆಡಿಎಸ್ ಕಾಂತರಾಜ್ ಅವರಿಗೆ ಟಿಕೆಟ್ ನೀಡಿದೆ. [ಪರಿಷತ್ ಚುನಾವಣೆ ಬಗ್ಗೆ ತಿಳಿಯಿರಿ]

jds

ಜೆಡಿಎಸ್ ತನ್ನ ಮೊದಲ ಪಟ್ಟಿಯಲ್ಲಿ ಮೂವರು ಹಾಲಿ ಸದಸ್ಯರಿಗೆ ಟಿಕೆಟ್‌ ನೀಡಿದೆ. ಹಾಲಿ ಐವರು ಸದಸ್ಯರ ಪೈಕಿ ಮೊದಲ ಪಟ್ಟಿಯಲ್ಲಿ ಮೂವರಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ನೀಡಲಾಗಿದೆ. ಹಾಸನ ಕ್ಷೇತ್ರದಿಂದ ಪಟೇಲ್‌ ಶಿವರಾಂ, ಮೈಸೂರಿನಿಂದ ಸಂದೇಶ ನಾಗರಾಜ್‌ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಇ. ಕೃಷ್ಣಪ್ಪ ಅವರು ಟಿಕೆಟ್ ಪಡೆದಿದ್ದಾರೆ. [ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ]

ಅಭ್ಯರ್ಥಿಗಳ ಪಟ್ಟಿ

* ಶಿವಮೊಗ್ಗ - ಎಚ್.ಎನ್.ನಿರಂಜನ್
* ಉತ್ತರ ಕನ್ನಡ - ರವಿ ಕುಮಾರ್
* ಕೊಡಗು - ನರೇಶ್ ಕುಮಾರ್
* ಮೈಸೂರು - ಸಂದೇಶ್ ನಾಗರಾಜ್
* ಕೋಲಾರ - ಸಿ.ಆರ್.ಮನೋಹರ್
* ಹಾಸನ - ಪಟೇಲ್ ಶಿವರಾಂ
* ತುಮಕೂರು - ಕಾಂತರಾಜ್
* ಚಿಕ್ಕಮಗಳೂರು - ರಂಜನ್ ಅಜಿತ್ ಕುಮಾರ್
* ಬೆಂಗಳೂರು ಗ್ರಾಮಾಂತರ - ಇ.ಕೃಷ್ಣಪ್ಪ
* ದಕ್ಷಿಣ ಕನ್ನಡ - ಎಸ್.ಪ್ರಕಾಶ್ ಶೆಟ್ಟಿ, ಪ್ರವೀಣಚಂದ್ರ ಜೈನ್
* ಚಿತ್ರದುರ್ಗ - ಎಲ್.ಸೋಮಣ್ಣ
* ಕಲಬುರಗಿ - ದೇವೇಗೌಡ ತೆಲ್ಲೂರು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Janta Dal Secular (JDS) on Sunday announced 12 candidates list for Legislative council election. Election will be held on December 27, 2015.
Please Wait while comments are loading...