ಪರಿಷತ್ ಚುನಾವಣೆ : ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 14 : ಅಸಮಾಧಾನ, ಬಂಡಾಯದ ಬಿಸಿಯ ನಡುವೆಯೇ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದೆ. ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ ಶನಿವಾರ ಕೆಲವು ಬಂಡಾಯ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಬೆಂಗಳೂರು ನಗರ ಕ್ಷೇತ್ರ, ಉಡುಪಿಯಲ್ಲಿ ಬಂಡಾಯದ ಬಿಸಿ ತಟ್ಟಿದೆ. ವಿಜಯಪುರ-ಬಾಗಲಕೋಟೆ ಕ್ಷೇತ್ರದ ಬಿಜೆಪಿಯ ಬಂಡಾಯ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್ ನಾಮಪತ್ರ ವಾಪಸ್ ಪಡೆದಿಲ್ಲ. ಮಂಡ್ಯ, ಕೋಲಾರದಲ್ಲಿ ಜೆಡಿಎಸ್ ಬಂಡಾಯ ಶಮನಗೊಂಡಿದೆ. [ಡಿಸೆಂಬರ್ 27ರ ವಿಧಾನಪರಿಷತ್ ಚುನಾವಣೆ ಬಗ್ಗೆ ತಿಳಿಯಿರಿ]

legislative council

ಶಿಕ್ಷಕರ, ಪದವೀಧರರ ಕ್ಷೇತ್ರಗಳು ಹಾಗೂ ಸ್ಥಳೀಯ ಸಂಸ್ಥೆಗಳಿಂದ 25 ವಿಧಾನಪರಿಷತ್ ಸದಸ್ಯರ ಆಯ್ಕೆಗೆ ಡಿಸೆಂಬರ್ 27ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 30ರಂದು ಫಲಿತಾಂಶ ಹೊರಬೀಳಲಿದೆ. ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ...[ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಿಗೆ ಕಾದಿದೆಯಾ ಕಂಟಕ?]

ಕ್ಷೇತ್ರ

ಕಣದಲ್ಲಿರುವ ಅಭ್ಯರ್ಥಿಗಳು

ಬಳ್ಳಾರಿ ಕೆ.ಸಿ.ಕೊಂಡಯ್ಯ (ಕಾಂಗ್ರೆಸ್), ಚನ್ನಬಸವನ ಗೌಡ (ಬಿಜೆಪಿ)
ಶಿವಮೊಗ್ಗ
ಆರ್.ಪ್ರಸನ್ನ ಕುಮಾರ್ (ಕಾಂಗ್ರೆಸ್), ಆರ್.ಕೆ.ಸಿದ್ದರಾಮಣ್ಣ (ಬಿಜೆಪಿ), ಎಚ್.ಎನ್.ನಿರಂಜನ (ಜೆಡಿಎಸ್)
ಬೆಂಗಳೂರು ನಗರ
ಎಂ.ನಾರಾಯಣ ಸ್ವಾಮಿ (ಕಾಂಗ್ರೆಸ್), ದೊಡ್ಡ ಬಸವರಾಜು (ಬಿಜೆಪಿ), ಬಿ.ದಯಾನಂದ ರೆಡ್ಡಿ (ಕಾಂಗ್ರೆಸ್ ಬಂಡಾಯ ಅಭ್ಯರ್ಥಿ)
ಬೆಂಗಳೂರು ಗ್ರಾಮಾಂತರ
ಬಿ.ರವಿ (ಕಾಂಗ್ರೆಸ್), ಇ.ಕೃಷ್ಣಪ್ಪ (ಜೆಡಿಎಸ್), ಹನುಮಂತೇಗೌಡ (ಬಿಜೆಪಿ)
ಕೋಲಾರ
ಎಂ.ಎಲ್.ಅನಿಲ್ ಕುಮಾರ್ (ಕಾಂಗ್ರೆಸ್), ಸಿ.ಆರ್.ಮನೋಹರ್ (ಜೆಡಿಎಸ್), ಜಿ.ಇ.ರಾಮೇಗೌಡ (ಬಿಜೆಪಿ)
ತುಮಕೂರು
ಆರ್.ರಾಜೇಂದ್ರ (ಕಾಂಗ್ರೆಸ್), ಬೆಮೆಲ್ ಕಾಂತರಾಜು (ಜೆಡಿಎಸ್), ಹುಲಿ ನಾಯ್ಕರ್ (ಬಿಜೆಪಿ)
ಮೈಸೂರು (ದ್ವಿ ಸದಸ್ಯ ಕ್ಷೇತ್ರ)
ಆರ್.ಧರ್ಮಸೇನ (ಕಾಂಗ್ರೆಸ್), ಸಂದೇಶ್ ನಾಗರಾಜ್ (ಜೆಡಿಎಸ್), ಆರ್.ರಘು (ಬಿಜೆಪಿ), ವಾಟಾಳ್ ನಾಗರಾಜ್ (ಕನ್ನಡ ಚಳವಳಿ ವಾಟಾಳ್ ಪಕ್ಷ)
ಹಾಸನ
ಪಟೇಲ್ ಶಿವರಾಂ (ಜೆಡಿಎಸ್), ಎಂ.ಎ.ಗೋಪಾಲಸ್ವಾಮಿ (ಕಾಂಗ್ರೆಸ್), ರೇಣುಕುಮಾರ್ (ಬಿಜೆಪಿ)
ಮಂಡ್ಯ
ಎಲ್.ಆರ್.ಶಿವರಾಮೇಗೌಡ (ಕಾಂಗ್ರೆಸ್), ಅಪ್ಪಾಜಿ ಗೌಡ (ಜೆಡಿಎಸ್), ಕೆ.ನಾಗಣ್ಣ ಗೌಡ (ಬಿಜೆಪಿ)
ಕೊಡಗು
ಎಚ್.ಎಸ್.ಚಂದ್ರಮೌಳಿ (ಕಾಂಗ್ರೆಸ್), ಸುನೀಲ್ ಸುಬ್ರಮಣಿ (ಬಿಜೆಪಿ), ಸಂಕೇತ್ ಪೂವಯ್ಯ (ಜೆಡಿಎಸ್)
ಚಿಕ್ಕಮಗಳೂರು
ಗಾಯತ್ರಿ ಶಾಂತೇಗೌಡ (ಕಾಂಗ್ರೆಸ್), ಎಂ.ಕೆ.ಪ್ರಾಣೇಶ್ (ಬಿಜೆಪಿ), ರಂಜನ್ ಅಜಿತ್ ಕುಮಾರ್ (ಜೆಡಿಎಸ್)
ರಾಯಚೂರು-ಕೊಪ್ಪಳ
ಸಿ.ವಿ.ಚಂದ್ರಶೇಖರ್ (ಬಿಜೆಪಿ), ಬಸವರಾಜ್ ಪಾಟೀಲ್ ಇಟಗಿ (ಕಾಂಗ್ರೆಸ್)
ಕಲಬುರಗಿ-ಯಾದಗಿರಿ
ಬಿ.ಜಿ.ಪಾಟೀಲ್ (ಬಿಜೆಪಿ), ಅಲ್ಲಮಪ್ರಭು ಪಾಟೀಲ್ (ಕಾಂಗ್ರೆಸ್), ದೇವೇಗೌಡ ತೆಲ್ಲೂರ (ಜೆಡಿಎಸ್)
ಬೀದರ್
ಸಂಜಯ ಖೇಣಿ (ಬಿಜೆಪಿ), ವಿಜಯಸಿಂಗ್ ಧರ್ಮಸಿಂಗ್ (ಕಾಂಗ್ರೆಸ್), ಸುಬ್ಬಾರೆಡ್ಡಿ (ಜೆಡಿಎಸ್)
ಬೆಳಗಾವಿ (ದ್ವಿ ಸದಸ್ಯ ಕ್ಷೇತ್ರ)
ಮಹಾಂತೇಶ ಕವಟಗಿಮಠ (ಬಿಜೆಪಿ), ವೀರಕುಮಾರ ಪಾಟೀಲ (ಕಾಂಗ್ರೆಸ್), ಡಿ.ಬಿ.ನಾಯ್ಕ (ಜೆಡಿಎಸ್)
ದಕ್ಷಿಣ ಕನ್ನಡ-ಉಡುಪಿ (ದ್ವಿ ಸದಸ್ಯ ಕ್ಷೇತ್ರ)
ಕೋಟ ಶ್ರೀನಿವಾಸ ಪೂಜಾರಿ (ಬಿಜೆಪಿ), ಪ್ರತಾಪಚಂದ್ರ ಶೆಟ್ಟಿ (ಕಾಂಗ್ರೆಸ್), ಪ್ರವೀಣಚಂದ್ರ ಜೈನ್ (ಜೆಡಿಎಸ್), ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್ ಬಂಡಾಯ ಅಭ್ಯರ್ಥಿ)
ಚಿತ್ರದುರ್ಗ
ರಘು ಆಚಾರ್ (ಕಾಂಗ್ರೆಸ್), ಕೆ.ಎಸ್.ನವೀನ್ (ಬಿಜೆಪಿ)., ಎಲ್.ಸೋಮಣ್ಣ (ಜೆಡಿಎಸ್)
ಉತ್ತರ ಕನ್ನಡ
ಎಸ್‌.ಎಲ್.ಘೋಟ್ನೇಕರ (ಕಾಂಗ್ರೆಸ್), ಗಣಪತಿ ಉಳ್ವೇಕರ (ಬಿಜೆಪಿ), ಡಿ.ರವಿಕುಮಾರ (ಜೆಡಿಎಸ್), ರವೀಂದ್ರ ನಾಯ್ಕ (ಕಾಂಗ್ರೆಸ್ ಬಂಡಾಯ)
ಧಾರವಾಡ-ಹಾವೇರಿ-ಗದಗ (ದ್ವಿ ಸದಸ್ಯ ಕ್ಷೇತ್ರ)
ಪ್ರದೀಪ್ ಶೆಟ್ಟರ (ಬಿಜೆಪಿ), ನಾಗರಾಜ ಛಬ್ಬಿ (ಕಾಂಗ್ರೆಸ್), ಶ್ರೀನಿವಾಸ ಮಾನೆ (ಕಾಂಗ್ರೆಸ್), ವಾಗೀಶ ಪ್ರಸಾದ (ಜೆಡಿಎಸ್)
ವಿಜಯಪುರ-ಬಾಗಲಕೋಟೆ (ದ್ವಿಸದಸ್ಯ ಕ್ಷೇತ್ರ)
ಎಸ್‌.ಆರ್.ಪಾಟೀಲ (ಕಾಂಗ್ರೆಸ್), ಜಿ.ಎಸ್.ನ್ಯಾಮಗೌಡ (ಬಿಜೆಪಿ), ಕಾಂತಪ್ಪ ಇಂಚಗೇರಿ (ಜೆಡಿಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Legislative council election 2015 : All parties candidate list. Election will be held on December 27.
Please Wait while comments are loading...