"ಲೇ ಅಶೋಕ" ಅಂತ ಕ್ಲಾಸ್‌ ತೆಗೆದುಕೊಂಡ ಲಾಯರ್‌ ಜಗದೀಶ್...!

ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಅವರ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಪೊಲೀಸ್‌ ಅಧಿಕಾರಿಯೊಬ್ಬರಿಗೆ ಕೆಟ್ಟ ಪದ ಬಳಸಿ ಬೈದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದೀಗ ಈ ಸಂಬಂಧ ಬಿಗ್‌ಬಾಸ್‌ ಖ್ಯಾತಿಯ ಲಾಯರ್‌ ಜಗದೀಶ್ ಅವರು ಆರ್. ಅಶೋಕ್ ಗೆ ಸರಿಯಾಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಹೌದು ಇತ್ತೀಚಿನ ದಿನಗಳಲ್ಲಿ ಲಾಯರ್‌ ಜಗದೀಶ್ ಅವರು ವಿವಿಧ ವಿಷಯಗಳಿಗೆ ರಿಯಾಕ್ಟ್ ಮಾಡುತ್ತಿದ್ದಾರೆ. ಇದರ ನಡುವೆ ಸಿಟಿ ರವಿ ಸೇರಿದಂತೆ ವಿವಿಧ ಬಿಜೆಪಿ ನಾಯಕರ ವಿರುದ್ಧ ಗರಂ ಆಗಿದ್ದಾರೆ. ಲೇ ಅಶೋಕ ಅಂತ ಏಕವಚನದಲ್ಲೇ ಮಾತು ಶುರು ಮಾಡಿರುವ ಲಾಯರ್‌ ಜಗದೀಶ್ ಅವರು ಬಿಜೆಪಿ ನಾಯಕರ ವಿರುದ್ಧ ಕೆಂಡಕಾರಿದ್ದಾರೆ. ಯಾರ ಬಗ್ಗೆ ಏನಂತ ಬೈದಿದ್ದಾರೆ ನೋಡೋಣ ಬನ್ನಿ..

Lawyer Jagadish attacks Opposition Leader R Ashok

ಲಾಯರ್‌ ಜಗದೀಶ್ ಬಿಜೆಪಿ ನಾಯಕರಿಗೆ ಸರಿಯಾಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಇದೀಗ ಲೇ ಅಶೋಕ ಅಂತಲೇ ಮಾತು ಶುರು ಮಾಡಿರುವ ಅವರು ನೀವು ವಿರೋಧ ಪಕ್ಷದ ನಾಯಕರಾದರೆ. ಯಾರ ಬಗ್ಗೆ ಏನು ಬೇಕಾದರೂ ಮಾತನಾಡಬಹುದಾ ಅಂತ ಕೇಳಿದ್ದಾರೆ. ಪ್ರತಿಭಟನೆ ಮಾಡುವಾಗ ಪೊಲೀಸ್‌ ಅಧಿಕಾರಿಗಳು ಬನ್ನಿ ಸರ್‌ ಅಂತ ಮನವಿ ಮಾಡಿದರೆ.

ಏ ನಾನು ಯಾರು ಗೊತ್ತೇನೋ ಅಂತ .. ಆಪೋಸಿಷನ್‌ ಲೀಡರ್‌ ನಾನು.. ಅಂತೇಳಿ ಪೊಲೀಸ್‌ ಅಧಿಕಾರಿಯ ಮೇಲೆ ಎಗರಾಡಿ, ಕೆಟ್ಟದಾಗಿ ಬೈಯಲಾಗಿದೆ. ಲೇ ಅಶೋಕ ಸಿಟಿ ರವಿ ನೋಡಿದರೆ, ಸಚಿವೆಗೆ ಕೆಟ್ಟ ಪದ ಬಳಸಿ ಬೈದಿದ್ದಾನೆ. ಇದೇ ನಾ ನಿಮ್ಮ ಸಂಸ್ಕಾರ, ಲೇ ಅಶೋಕಾ... ನೀನು ವಿರೋಧ ಪಕ್ಷದ ನಾಯಕನಾದರೆ ಏನುಬೇಕಾದರೂ ಮಾತನಾಡಬಹುದಾ ಅಂತ ಪ್ರಶ್ನೆ ಮಾಡಿದ್ದಾರೆ.

Lawyer Jagadish attacks Opposition Leader R Ashok

ಕೊಡಿಗೆಹಳ್ಳಿಯಲ್ಲಿ ನಿನ್ನ ಬಾಮೈದರು ಚಕ್ರಪಾಣಿಯೊಂದಿಗೆ ಸೇರಿಕೊಂಡು ಟ್ರಸ್ಟ್‌ ಮಾಡಿಕೊಂಡಿದ್ದಾರೆ. ಅಲ್ವೋ ಆ ಬಿಜೆಪಿ ಅವರು ನಿನ್ನನ್ನು ಮುಖ್ಯಮಂತ್ರಿ ಮಾಡಲು ಹೊರಟಿದ್ದಾರೆ ಅಂತ ಬಾಯಿಗೆ ಬಂದತೆ.. ನಾಲಿಗೆ ಇದೆ ಅಂತ ಹೆಂಗಂದರೆ ಹಂಗೆ ಮಾತನಾಡೋದಾ. ಇದೇನಾ ನೀನು ಕಲಿತಿರುವ ಸಂಸ್ಕಾರ ಅಂತ ಪ್ರಶ್ನೆ ಮಾಡಲಾಗಿದೆ.

ಇದೇನಾ ತುರ್ತು ಪರಿಸ್ಥಿತಿಯಲ್ಲಿ ಪೊಲೀಸರು ಎತ್ತಿಹಾಕಿಕೊಂಡು ಹೋದಾಗ ಕಲಿತಿರುವುದು. ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌, ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ, ಸಿಟಿ ರವಿ, ರಮೇಶ್‌ ಜಾರಕಿಹೊಳಿ ಹಾಗೂ ರೇಣುಕಾಚಾರ್ಯ ಅವರನ್ನು ಸಹ ತರಾಟೆಗೆ ತೆಗೆದುಕೊಂಡು ಬೈದಿರುವುದು ವಿಡಿಯೋದಲ್ಲಿ ಇದೆ.

ಏನ್ರೋ ನಿಮ್ದು ಬಾಳು: ಜಗದೀಶ್ ಬಿಜೆಪಿ ನಾಯಕರಿಗೆ ಏನ್ರೋ ನಿಮ್ದು ಬಾಳು ಅಂತ ಹೇಳಿರುವುದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ವೈರಲ್‌ ಆಗುತ್ತಿದೆ. ಇದರೊಂದಿಗೆ ಜೆಡಿಎಸ್‌ನ ಬಗ್ಗೆಯೂ ಅವರು ತರಾಟೆಗೆ ತೆಗೆದುಕೊಂಡಿರುವುದು ವಿಡಿಯೋದಲ್ಲಿ ಇದೆ.

ಬಸ್‌ ಪ್ರಯಾಣ ದರ ಹೆಚ್ಚಳವನ್ನು ವಿರೋಧಿಸಿ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಅವರು ಪೊಲೀಸ್‌ ಅಧಿಕಾರಿಯೊಬ್ಬರಿಗೆ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದಕ್ಕೆ ಲಾಯರ್‌ ಜಗದೀಶ್ ರಿಯಾಕ್ಟ್‌ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+