Karnataka: ಅಲೆಮಾರಿ ಲಂಬಾಣಿ 450 ಮಹಿಳಾ ಕುಶಲಕರ್ಮಿಗಳಿಂದ ಗಿನ್ನಿಸ್ ರೆಕಾರ್ಡ್: ಖರ್ಗೆ ಶ್ಲಾಘನೆ,
ಬೆಂಗಳೂರು, ಜುಲೈ 11: ಸಾಂಸ್ಕೃತಿಕ ಸೃಜನಶೀಲತೆಯ ಅದ್ಭುತ ವಿಜಯೋತ್ಸವದಲ್ಲಿ ಕರ್ನಾಟಕದ ಹಂಪಿಯ ಅಲೆಮಾರಿ ಲಂಬಾಣಿ ಸಮುದಾಯದ ಮಹಿಳೆಯರು/ಕುಶಲಕರ್ಮಿಗಳು ಅತೀ ಹೆಚ್ಚು ಕಸೂತಿ ಪ್ಯಾಚ್‌ಗಳನ್ನು ಉತ್ಪಾದಿಸುವ ಮೂಲಕ ಹೊಸ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಕುರಿತು ಎಐಸಿಸಿ ಮಲ್ಲಿಕಾರ್ಜುನ್ ಖರ್ಗೆ ಅವರು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.
ಹಂಪಿಯಲ್ಲಿ ನಡೆದ ಜಿ-20 ಕಲ್ಚರ್ ವರ್ಕಿಂಗ್ ಗ್ರೂಪ್ ಸಭೆಯಲ್ಲಿ, ಸುಮಾರು 450 ಲಂಬಾಣಿ ಕುಶಲಕರ್ಮಿಗಳು 1,755 ಕ್ಕೂ ಹೆಚ್ಚು ಅನನ್ಯ ಪ್ಯಾಚ್‌ಗಳ ವಿಸ್ಮಯಕಾರಿ ಸಂಗ್ರಹವನ್ನು ರಚಿಸುವ ಮೂಲಕ ತಮ್ಮ ಅಸಾಧಾರಣ ಕೌಶಲ್ಯ ಮತ್ತು ಕರಕುಶಲತೆಯನ್ನು ಪ್ರದರ್ಶಿಸಿದ್ದಾರೆ. ಇದು ಗಿನ್ನಿಸ್ ದಾಖಲೆ ಸೇರಿದೆ.

ಕರ್ನಾಟಕದ 450 ಕುಶಲಕರ್ಮಿಗಳು ಲಂಬಾಣಿ ಕಸೂತಿಯು ವರ್ಣರಂಜಿತ ಎಳೆಗಳು, ಕನ್ನಡಿ ಕೆಲಸ ಮತ್ತು ಹೊಲಿಗೆ ಮಾದರಿಗಳ ಪ್ಯಾಚ್‌ಗಳನ್ನು ರಚಿಸಿದ್ದಾರೆ. ಈ ಕಲೆಯು ಇದು ಜವಳಿ ಅಲಂಕರಣದ ರೋಮಾಂಚಕ ಮತ್ತು ಸಂಕೀರ್ಣವಾದ ರೂಪವಾಗಿದೆ.
ಕರ್ನಾಟಕದ ಅಲೆಮಾರಿ ಲಂಬಾಣಿ ಸಮುದಾಯದ ಸುಮಾರು 450 ಮಹಿಳಾ ಲಂಬಾಣಿ ಕುಶಲಕರ್ಮಿಗಳು 1,755 ಕ್ಕೂ ಹೆಚ್ಚು ಅನನ್ಯ ಪ್ಯಾಚ್‌ಗಳ ವಿಸ್ಮಯಕಾರಿ ಸಂಗ್ರಹವನ್ನು ರಚಿಸುವ ಮೂಲಕ ಹೊಸ ಗಿನ್ನಿಸ್ ದಾಖಲೆ ಮಾಡಿರುವುದು ನಮಗೆ ಅತ್ಯಂತ ಹೆಮ್ಮೆಯ ವಿಷಯ.
— Mallikarjun Kharge (@kharge) July 11, 2023
ಈ ಸಾಧನೆಗೆ ಭಾಗಿಯಾದ ಎಲ್ಲಾ ಲಂಬಾಣಿ ಕುಶಲಕರ್ಮಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
ಸಮಾಜದ ಪ್ರಗತಿಗೆ… pic.twitter.com/ilssgPuh2D
ಕರ್ನಾಟಕದ ಈ ಊರಿನ ಕುಶಲಕರ್ಮಿಗಳಿಂದ ಸಾಧನೆ
ಕರ್ನಾಟಕ ರಾಜ್ಯದ ಸಂಡೂರು, ಕೇರಿ ತಾಂಡಾ, ಮರಿಯಮ್ಮನಹಳ್ಳಿ, ಕದಿರಂಪುರ, ಸೀತಾರಾಮ್ ತಾಂಡಾ, ಬಿಜಾಪುರ ಮತ್ತು ಕಮಲಾಪುರದಂತಹ ಹಲವಾರು ಹಳ್ಳಿಗಳ ಜನರಿಗೆ ಇಂತಹ ಕರಕುಶಲ ಕಲೆ ಸಿದ್ಧವಾಗಿದೆ. 'ಸಾಂಸ್ಕೃತಿಕ ಮತ್ತು ಸೃಜನಾತ್ಮಕ ಕೈಗಾರಿಕೆಗಳ ಪ್ರಚಾರ ಮತ್ತು ಸೃಜನಶೀಲ ಆರ್ಥಿಕತೆ' ಉಪಕ್ರಮವು ಲಂಬಾಣಿ ಕಸೂತಿಯ ಶ್ರೀಮಂತ ಕಲಾತ್ಮಕ ಸಂಪ್ರದಾಯವನ್ನು ಗುರುತಿಸುತ್ತದೆ. ಈ ಮೂಲಕ ಕರ್ನಾಟಕ ಮತ್ತು ಭಾರತದ ಸೃಜನಶೀಲ ಆರ್ಥಿಕತೆ ಉತ್ತೇಜಿಸುತ್ತದೆ.

ಲಂಬಾಣಿ ಕುಶಲಕರ್ಮಿಗಳ ಈ ಸಾಧನೆ ನಾಡಿಗೆ ದೇಶಕ್ಕೆ ಅಪಾರ ಹೆಮ್ಮೆ ತಂದಿದೆ. ಆದರೆ ಸಮುದಾಯಕ್ಕೆ ಸಬಲೀಕರಣ ಮತ್ತು ಮನ್ನಣೆಯನ್ನು ನೀಡಿದೆ ಎಂದು ಸಂಸ್ಕೃತಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಿಲಿ ಪಾಂಡೆ ಹೇಳಿದರು. ಜಿ20 ಪ್ರತಿನಿಧಿಗಳ ಮಧ್ಯೆ, ಲಂಬಾಣಿ ಕುಶಲಕರ್ಮಿಗಳು ಈ ಐತಿಹಾಸಿಕ ಸಾಧನೆ ಮತ್ತು ಅವರ ಜೀವನ ಮತ್ತು ಸಬಲೀಕರಣದ ಮೇಲೆ ಅದರ ಪ್ರಭಾವದ ಬಗ್ಗೆ ತಮ್ಮ ಭಾವನೆಗಳನ್ನು ಹಂಚಿಕೊಂಡರು.
ಈ ಸಾಧನೆಯಿಂದ ಲಂಬಾಣಿ ಸಮುದಾಯ ಅಭಿವೃದ್ಧಿ
ಹಿರಿಯ ಲಂಬಾಣಿ ಕುಶಲಕರ್ಮಿ ಶಾಂತಾ ಬಾಯಿ ಈ ಕುರಿತು ಪ್ರತಿಕ್ರಿಯಿಸಿದ್ದು, ನಮ್ಮ ಕರಕುಶಲ ವಸ್ತುಗಳು ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿರುವುದು ನಮಗೆ ಅತೀವ ಸಂತಸ ತಂದಿದೆ, ಗೌರವವು ಹೆಚ್ಚಾಗಿದೆ. ಈ ಸಾಧನೆಯು ನಮ್ಮ ಪ್ರತಿಭೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಸಮುದಾಯಕ್ಕೆ ಪ್ರದರ್ಶಿಸಿದಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸದ್ಯ ನಮಗೆ ಸಿಕ್ಕ ಈ ಮನ್ನಣೆಯು ಲಂಭಾಣಿ ಸಮುದಾಯಕ್ಕೆ ಹೆಚ್ಚಿನ ಅವಕಾಶಗಳನ್ನು ತರುತ್ತದೆ ಮತ್ತು ನಮ್ಮ ಜೀವನ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. G20 ಪ್ರತಿನಿಧಿಗಳ ಉಪಸ್ಥಿತಿಯು ಲಂಬಾಣಿ ಕುಶಲಕರ್ಮಿಗಳ ಅಪಾರ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆ ಆಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಲಂಬಾಣಿ ಸಮುದಾಯವು ಮತ್ತಷ್ಟು ಸಶಕ್ತಗೊಳಿಸಲು ಸರ್ಕಾರ ಯೋಜನೆ ರೂಪಿಸಲು ಇದೊಂದು ದಾರಿಯಾಗಲಿದೆ.
ಎಐಸಿಸಿ ಅಧ್ಯಕ್ಷರ ಟ್ವೀಟ್ ಶ್ಲಾಘನೆ
ಈ ಸಾಧನೆಗೆ ಭಾಗಿಯಾದ ಕರ್ನಾಟಕದ ಎಲ್ಲಾ ಲಂಬಾಣಿ ಕುಶಲಕರ್ಮಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಶ್ಲಾಘಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮಂಗಳವಾರ ಟ್ವೀಟ್ ಮಾಡಿದ್ದಾರೆ.
ಕರ್ನಾಟಕದ ಅಲೆಮಾರಿ ಲಂಬಾಣಿ ಸಮುದಾಯದ ಸುಮಾರು 450 ಮಹಿಳಾ ಲಂಬಾಣಿ ಕುಶಲಕರ್ಮಿಗಳು 1,755 ಕ್ಕೂ ಹೆಚ್ಚು ಅನನ್ಯ ಪ್ಯಾಚ್‌ಗಳ ವಿಸ್ಮಯಕಾರಿ ಸಂಗ್ರಹವನ್ನು ರಚಿಸುವ ಮೂಲಕ ಹೊಸ ಗಿನ್ನಿಸ್ ದಾಖಲೆ ಮಾಡಿರುವುದು ನಮಗೆ ಅತ್ಯಂತ ಹೆಮ್ಮೆಯ ವಿಷಯ. ಇಂತಹ ಸಾಧನೆಗಳು ಮಹಿಳಾ ಸಬಲೀಕರಣವನ್ನು ಪ್ರೋತ್ಸಾಹಿಸುವುದಲ್ಲದೆ ಇಂತಹ ಇತಿಹಾಸವುಳ್ಳ ಬುಡಕಟ್ಟು ಕಲೆಗಳಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
-
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ












Click it and Unblock the Notifications