Lal Krishna Advani: ಬಿಜೆಪಿ ಪಾಲಿನ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ ಇನ್ನಿಲ್ಲ? ಅಸಲಿ ಸತ್ಯ ತಿಳಿಯದೆ ಏನೂ ಮಾಡಬೇಡಿ!
ಭಾರತ ಕಂಡ ಶ್ರೇಷ್ಠ ರಾಜಕಾರಣಿ & ಭಾರತದ ಮಾಜಿ ಉಪ್ರಧಾನಿ, ಬಿಜೆಪಿ ಪಾಲಿನ 'ಭೀಷ್ಮ' ಲಾಲ್ ಕೃಷ್ಣ ಅಡ್ವಾಣಿ ಇನ್ನಿಲ್ಲ ಎಂಬ ಸುದ್ದಿ ಇದೀಗ ಸಂಚಲನ ಸೃಷ್ಟಿ ಮಾಡಿದೆ. ಈ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನದ ಬಿರುಗಾಳಿ ಎಬ್ಬಿಸಿದ್ದು, ಎಲ್ಲೆಲ್ಲೂ ಜನ ಈ ಬಗ್ಗೆ ಪೋಸ್ಟ್ ಹಾಕಿ ಸಂತಾಪ ಸೂಚಿಸುತ್ತಿದ್ದಾರೆ. ಹಾಗಾದ್ರೆ ಈ ಸುದ್ದಿಯ ಅಸಲಿ ಕಹಾನಿ ಏನು? ಸಂಪೂರ್ಣ ಮಾಹಿತಿ ನಾವು ನೀಡಿದ್ದೇವೆ ಮುಂದೆ ಓದಿ.
ಇದು ಸೋಷಿಯಲ್ ಮೀಡಿಯಾ ಕಾಲ, ಇದೇ ಕಾರಣಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿಗಳು ಅತಿ ಬೇಗ ಹರಡುತ್ತವೆ. ಅದರಲ್ಲೂ ದೊಡ್ಡ ದೊಡ್ಡ ನಾಯಕರ ಕುರಿತು ಸುಳ್ಳು ಸುದ್ದಿಗಳನ್ನ ಹರಡುವ ಕಿರಾತಕರು ಸಾಕಷ್ಟು ಜನ ಇದ್ದಾರೆ. ಅದೇ ರೀತಿ ಈಗ ಮತ್ತೆ ಒಂದು ಸುದ್ದಿ ವೈರಲ್ ಆಗುತ್ತಿದೆ. ಭಾರತ ದೇಶದ ಮಾಜಿ ಉಪಪ್ರಧಾನಿ ಬಗ್ಗೆಯೇ ಇದೀಗ ಸುಳ್ಳು ಸುದ್ದಿ ಹರಡಲಾಗಿದೆ. ಹಾಗಾದ್ರೆ ಅಡ್ವಾಣಿ ಅವರ ಆರೋಗ್ಯ ಹೇಗಿದೆ? ಈಗ ಇರುವ ಮಾಹಿತಿ ಏನು? ಲಾಲ್ ಕೃಷ್ಣ ಅಡ್ವಾಣಿ ಅವರ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿರುವುದು ಯಾರು? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಸುಳ್ಳು ಸುದ್ದಿಯಿಂದ ಸಂಚಲನ!
ಅಂದಹಾಗೆ ಲಾಲ್ ಕೃಷ್ಣ ಅಡ್ವಾಣಿ ಅವರು ಕೆಲವು ದಿನಗಳ ಹಿಂದಷ್ಟೇ ವಯೋ ಸಹಜವಾದ ಕಾಯಿಲೆಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತೆರಳಿದ್ದರು. ಆ ನಂತರ ಚಿಕಿತ್ಸೆ ಪಡೆದು ಅವರು ಡಿಸ್ಚಾರ್ಜ್ ಕೂಡ ಆಗಿದ್ದರು. ಆದರೆ ಹೀಗೆ, ಭಾರತದ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರು ಆಸ್ಪತ್ರೆಯಿಂದ ಬಿಡುಗಡೆ ಆಗಿ ಬಂದ ನಂತರ ಯಾರೋ ಕಿಡಿಗೇಡಿಗಳು, ಈ ರೀತಿಯಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಲಾಲ್ ಕೃಷ್ಣ ಅಡ್ವಾಣಿ ಅವರು ಈಗ ಸಂಪೂರ್ಣ ಆರೋಗ್ಯವಾಗಿ ಇದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬುದಾಗಿ ಖಚಿತ ಮಾಹಿತಿ ಸಿಕ್ಕಿದೆ. ಹೀಗಾಗಿ ಸಾಮಾನ್ಯ ಜನರು ಸೋಷಿಯಲ್ ಮೀಡಿಯಾದಲ್ಲಿ ಈ ಸುಳ್ಳು ಸುದ್ದಿಯನ್ನ ಶೇರ್ ಮಾಡುವ ಮೊದಲು ಒಮ್ಮ ಪರಿಶೀಲನೆ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.
ಹೋರಾಟದ ನೆಲೆಯಿಂದ ಅಡ್ವಾಣಿ ಅವರು..
1927 ನವೆಂಬರ್ 8 ರಂದು ಜನಿಸಿದ ಲಾಲ್ ಕೃಷ್ಣ ಅಡ್ವಾಣಿ ಅವರು ಹೋರಾಟದ ನೆಲೆಯಿಂದ ಬಂದ ನಾಯಕ. ಬಿಜೆಪಿ ಪಕ್ಷದಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದ ಲಾಲ್ ಕೃಷ್ಣ ಅಡ್ವಾಣಿ ಅವರು, ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲೂ ಸದ್ದು ಮಾಡಿದ್ದರು. ಹಾಗೇ ದೊಡ್ಡ ದೊಡ್ಡ ಹೋರಾಟದಲ್ಲಿ & ಕಾಂಗ್ರೆಸ್ ವಿರುದ್ಧ ಭಾರಿ ದೊಡ್ಡ ಪ್ರತಿಭಟನೆಗಳನ್ನು ಹಮ್ಮಿಕೊಂಡು ಸದ್ದು ಮಾಡಿದ್ದರು.
ವಾಜಪೇಯಿ ಅವರ ಸರ್ಕಾರದಲ್ಲಿ ಲಾಲ್ ಕೃಷ್ಣ ಅಡ್ವಾಣಿ ಉಪಪ್ರಧಾನಿ ಆಗಿ ಕೆಲಸ ಮಾಡಿ, ಇಡೀ ದೇಶದ & ಜಗತ್ತಿನ ಗಮನವನ್ನ ಸೆಳೆದಿದ್ದರು. ಹೀಗಿದ್ದಾಗ ಅವರಿಗೆ 96 ವರ್ಷ ವಯಸ್ಸು ಆಗಿದ್ದು, ಯಾರೋ ಕೆಲವು ಕಿಡಿಗೇಡಿ ಯುವಕರು ಸೋಷಿಯಲ್ ಮೀಡಿಯಾ ಮೂಲಕ ಅವರ ಸಾವಿನ ಕುರಿತು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಈ ಬಗ್ಗೆ ಜನಾಕ್ರೋಶಕ್ಕೆ ಈ ಸುಳ್ಳು ಸುದ್ದಿಯು ಕಾರಣವಾಗ್ತಿದೆ. ಅಲ್ಲದೆ ಹೀಗೆ ಸುಳ್ಳು ಸುದ್ದಿ ಹರಡುವವರ ವಿರುದ್ಧ ಪೊಲೀಸರು ಕ್ರಮವನ್ನ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ ಜನ.












Click it and Unblock the Notifications