ಲಕ್ಷ್ಮೀ ಹೆಬ್ಬಾಳ್ಕರ್ ದುಡ್ಡು ಹಂಚಿಕೆ: ಡಿ ಕೆ ಶಿವಕುಮಾರ್ ಖಡಕ್ ಉತ್ತರ
ಗುಂಡ್ಲುಪೇಟೆ ಉಪಚುನಾವಣೆಯ ವೇಳೆ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ದುಡ್ಡು ಹಂಚಿಕೆ ಮಾಡಿದ್ದಾರೆ ಎನ್ನುವ ಆರೋಪಕ್ಕೆ ಇಂಧನ ಸಚಿವ ಡಿ ಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದು, ಇದೊಂದು ವೃಥಾ ಆರೋಪ ಎಂದಿದ್ದಾರೆ.
ಬೆಂಗಳೂರು, ಏ 6: ಗುಂಡ್ಲುಪೇಟೆ ಉಪಚುನಾವಣೆಯ ವೇಳೆ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ದುಡ್ಡು ಹಂಚಿಕೆ ಮಾಡಿದ್ದಾರೆ ಎನ್ನುವ ಆರೋಪಕ್ಕೆ ಇಂಧನ ಸಚಿವ ಡಿ ಕೆ ಶಿವಕುಮಾರ್ ಖಡಕ್ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿಯವರಿಗೆ ಮಾಡೋಕೆ ಬೇರೇನೂ ಕೆಲಸವಿಲ್ಲ, ಊಟಕ್ಕೆ ದುಡ್ಡು ಕೊಟ್ಟಿರಬಹುದು, ವಾಹನದ ಬಾಡಿಗೆ ದುಡ್ಡು ಕೊಡುವವರು ಯಾರು? ಇದು ಚುನಾವಣೆಯ ವೇಳೆ ಬಿಜೆಪಿ ಮಾಡುತ್ತಿರುವ ವೃಥಾ ಆರೋಪ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. (ವಿವಾದದಲ್ಲಿ ಕಾಂಗ್ರೆಸ್ ನಾಯಕಿ)
ಚುನಾವಣೆ ಎಂದ ಮೇಲೆ ಬಹಳಷ್ಟು ಜವಾಬ್ದಾರಿಗಳು ಇರುತ್ತವೆ, ಹಾಗೆಯೇ ಲಕ್ಷ್ಮೀ ಹೆಬ್ಬಾಳ್ಕರ್ ಊಟದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಚುನಾವಣೆಗೆ ಇಂತಿಷ್ಟು ದುಡ್ಡು ಖರ್ಚು ಮಾಡಬಹುದೆಂದು ಆಯೋಗದ ಕಾನೂನು ಇರುವುದರಿಂದ, ಅದರ ಮಿತಿಯೊಳಗೆ ಎಲ್ಲಾ ನಡೆಯುತ್ತಿದೆ ಎಂದು ಡಿಕೆಶಿ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಗುರುವಾರ (ಏ 6) ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಶಿವಕುಮಾರ್, ವಾಹನಗಳಿಗೆ ಪೆಟ್ರೋಲ್ ಹಾಕಬೇಕು, ಬಾಡಿಗೆ ನೀಡಬೇಕು, ವಸತಿ ವ್ಯವಸ್ಥೆಗೆ ದುಡ್ಡು ನೀಡಬೇಕಾಗುತ್ತದೆ. ಕೈಯಲ್ಲಿ ದುಡ್ಡು ಇತ್ತು ಎಂದು, ಅದು ಮತದಾರರಿಗೆ ಹಂಚಲು ಇಟ್ಟುಕೊಂಡ ದುಡ್ಡು ಎಂದು ಬಿಜೆಪಿ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದುದು ಎಂದು ಡಿಕೆಶಿ, ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆನ್ನಿಗೆ ನಿಂತಿದ್ದಾರೆ.
ಊಟದ ಖರ್ಚಿಗೆ ಎರಡು ಸಾವಿರ ನೋಟಿನ ಅವಶ್ಯಕತೆ ಏನಿದೆ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ಡಿ ಕೆ ಶಿವಕುಮಾರ್, ಊಟದ ಜೊತೆಗೆ ಪಕ್ಷದ ಕಾರ್ಯಕರ್ತರ ಮತ್ತು ಪಕ್ಷದ ಖರ್ಚಿಗಾಗಿ ದುಡ್ಡು ಇಟ್ಟುಕೊಂಡಿರಬಹುದಲ್ಲವೇ ಎಂದು ಡಿಕೆಶಿ, ಮಾಧ್ಯಮದವರನ್ನು ಮರು ಪ್ರಶ್ನಿಸಿದ್ದಾರೆ.
ಈ ಮಧ್ಯೆ #ArvindLimbavliExposeCong ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ ಜೊತೆಗೆ ಕಾಂಗ್ರೆಸ್ ವಿರುದ್ದ ಟೀಕಾ ಪ್ರಹಾರವೇ ಹರಿದು ಬರುತ್ತಿದೆ.

ಬಿಜೆಪಿಯವರ ಬಳಿ ಸಾಕ್ಷಿಯಿದ್ದರೆ ಬಹಿರಂಗ ಪಡಿಸಲಿ
ವಿಡಿಯೋದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಕೈಮುಗಿದು ದುಡ್ಡು ನೀಡುತ್ತಿದ್ದಾರಲ್ಲಾ ಎನ್ನುವ ಪ್ರಶ್ನೆಗೆ, ಪ್ರಚಾರದ ವೇಳೆ ಎಲ್ಲರೂ ಕೈಮುಗಿದು ಮಾತನಾಡುತ್ತಾರೆ. ಮತದಾರರಿಗೆ ದುಡ್ಡು ಹಂಚಲಾಗುತ್ತಿದೆ ಎನ್ನುವುದಕ್ಕೆ ಬಿಜೆಪಿಯವರ ಬಳಿ ಸಾಕ್ಷಿಯಿದ್ದರೆ ಬಹಿರಂಗ ಪಡಿಸಲಿ ಎಂದು ಡಿ ಕೆ ಶಿವಕುಮಾರ್, ಬಿಜೆಪಿಗೆ ಸವಾಲು ಹಾಕಿದ್ದಾರೆ. (ಸಂಗ್ರಹ ಚಿತ್ರ, ಟ್ವಿಟ್ಟರ್)
|
ಅರವಿಂದ್ ಕೇಜ್ರಿವಾಲಿಗೆ ಹೋಲಿಕೆ ಮಾಡಿ ಟ್ವೀಟ್
ಒಬ್ಬ ಅರವಿಂದ್ ದುಡ್ಡು ಹಂಚಿಕೆ ಮಾಡುತ್ತಿರುವವರನ್ನು ಬಹಿರಂಗಗೊಳಿಸಿದರೆ, ಇನ್ನೊಬ್ರು ಅರವಿಂದ್, ರಾಂ ಜೇಠ್ಮಲಾನಿಗೆ ದುಡ್ಡು ನೀಡುತ್ತಿರುವುದು ಬಹಿರಂಗವಾಗುತ್ತಿದೆ ಎಂದು ಕೇಜ್ರಿವಾಲ್ ಉಲ್ಲೇಖಿಸಿ ಟ್ವೀಟ್.
|
ಅರವಿಂದ್ ಲಿಂಬಾವಳಿ ಕಾಂಗ್ರೆಸ್ ಬಣ್ಣ ಬಯಲು ಮಾಡಿದ್ದಾರೆ
ಬಿಜೆಪಿಯಿಂದ ಒಳ್ಳೆ ಕೆಲಸವಾಗಿದೆ, ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಬಣ್ಣವನ್ನು ಅರವಿಂದ್ ಲಿಂಬಾವಳಿ ಬಯಲು ಮಾಡಿದ್ದಾರೆ.
|
ಇವಿಎಂ ಬಗ್ಗೆ ಮಾತನಾಡುವ ಕಾಂಗ್ರೆಸ್ ಈಗ ಏನನ್ನುತ್ತೆ
ಕಾಂಗ್ರೆಸ್ ಮುಖಂಡರು ಇವಿಎಂ ಬಗ್ಗೆ ಮಾತನಾಡುತ್ತಾರೆ. ಕರ್ನಾಟಕದಲ್ಲಿ ಅವರದೇ ಪಕ್ಷದ ನಾಯಕರು ದುಡ್ಡು ಹಂಚಿ ಸಿಕ್ಕಿಹಾಕಿಕೊಂಡಿದ್ದಾರೆ.

ಹೆಬ್ಬಾಳ್ಕರ್ ದುಡ್ಡು ಹಂಚುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟ
ಅರವಿಂದ್ ಲಿಂಬಾವಳಿಯವರು ಕಾಂಗ್ರೆಸ್ಸಿನ ಬಣ್ಣವನ್ನು ಕರ್ನಾಟಕದ ಉಪಚುನಾವಣೆಯಲ್ಲಿ ಬಯಲು ಮಾಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ದುಡ್ಡು ಹಂಚುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಕಾಂಗ್ರೆಸ್ಸಿಗೆ ತೀವ್ರ ಮುಖಭಂಗವಾಗಿದೆ ಎನ್ನುವ ಟ್ವೀಟ್.












Click it and Unblock the Notifications