ವೈಭವದ ಧರ್ಮಸ್ಥಳ ಲಕ್ಷದೀಪೋತ್ಸವಕ್ಕೆ ಕ್ಷಣಗಣನೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಬೆಳ್ತಂಗಡಿ, ಡಿಸೆಂಬರ್, 07: ಸಾವಿರಾರು ಭಕ್ತರನ್ನು ಸೆಳೆಯುವ ಧರ್ಮಸ್ಥಳದಲ್ಲಿ ನಡೆಯುವ ಲಕ್ಷದೀಪೋತ್ಸವದ ಸಂಭ್ರಮ ವೈಭವವನ್ನು ಪದಗಳಲ್ಲಿ ವರ್ಣಿಸಲಾಗುವುದಿಲ್ಲ. ಈಗಾಗಲೇ ಇಡೀ ಧರ್ಮಸ್ಥಳದ ರಥಬೀದಿ, ರಾಜ ಬೀದಿಗಳು ಶೃಂಗಾರಗೊಂಡಿವೆ. ದೇವಳ ಪುಷ್ಪಗಳಿಂದ ಅಲಂಕೃತಗೊಂಡಿದೆ.

ಒಂದೆಡೆ ದೇವರ ಆರಾಧನೆ, ಇನ್ನೊಂದಡೆ ಸಾಹಿತ್ಯದ ಸಮಾರಾಧನೆ. ಮನಕ್ಕೆ ಕವಿದ ಕತ್ತಲನ್ನು ಹೊಡೆದೊಡಿಸುವ ಕೋಟಿ ಕೋಟಿ ಬೆಳಕಿನ ಕಿರಣಗಳನ್ನು ಪ್ರಜ್ವಲಿಸುವ ಈ ಬೆಳಕಿನ ಹಬ್ಬ ಡಿಸೆಂಬರ್ 08ರ ಮಂಗಳವಾರ ನಡೆಯಲಿದ್ದು, ಅಧ್ಯಕ್ಷತೆಯನ್ನು ಧರ್ಮಾಧಿಕಾರಿ ಡಾ|| ವೀರೇಂದ್ರ ಹೆಗ್ಗಡೆ ವಹಿಸಲಿದ್ದಾರೆ.[ವೀರೇಂದ್ರ ಹೆಗ್ಗಡೆಯವರ ಮೇಲೆ ಮತ್ತೇನಿದು ಗಂಭೀರ ಆರೋಪ !]

Lakshadeepotsava starts at Dharmasthala on Tuesday, December 08th

ಧರ್ಮಸ್ಥಳ ಲಕ್ಷ ದೀಪೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು:

ಡಿಸೆಂಬರ್ 8ರ ಮಂಗಳವಾರದಂದು ಮೈಸೂರಿನ ವಿದ್ವಾನ್‌ ಕೆ. ಗುರುಪ್ರಸಾದ್‌ ಮತ್ತು ತಂಡದಿಂದ ಭಕ್ತಿ ಸಂಗೀತ, ಪುತ್ತೂರಿನ ಶ್ರೀದೇವಿ ನೃತ್ಯಾರಾಧನ ಕಲಾಕೇಂದ್ರದ ರೋಹಿಣಿ ಉದಯ್‌ ಹಾಗೂ ಶಿಷ್ಯೆಯರಿಂದ ಭರತನಾಟ್ಯ ಹಾಗೂ ಜನಪದ ನೃತ್ಯ.

ಡಿಸೆಂಬರ್ 9ರಂದು ಬೆಂಗಳೂರಿನ ವಿದುಷಿ ಅಂಜಲಿ ಸುಧೀರ್‌ ಮತ್ತು ಬಳಗದಿಂದ ಲಘು ಶಾಸ್ತ್ರೀಯ ಸಂಗೀತ, ಬೆಂಗಳೂರಿನ ಡಾ| ಸುಮನ್‌ ರಂಜಾಳ್ಕರ್ ಮತ್ತು ತಂಡದಿಂದ ಭರತನೃತ್ಯ, ಮಂದಾರ್ತಿ ತಂತ್ರಾಡಿಯ ಮಕ್ಕಳ ಮೇಳದಿಂದ 'ಶ್ರೀಕೃಷ್ಣಾಶ್ವಮೇಧ' ಯಕ್ಷಗಾನ.[ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಸಮಯ ಬದಲಾವಣೆ]

ಡಿಸೆಂಬರ್ 10ರಂದು ಚೆನ್ನೈ ಕುಂಭಕೋಣಮ್ ನ ಅನಂತ ನಾರಾಯಣ ಭಾಗವತ್ ಅವರಿಂದ ನಾಮಸಂಕೀರ್ತನಮ್, ಮಂಗಳೂರು ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ತಂಡದಿಂದ ಗಾನ ನೃತ್ಯ ವೈಭವ, ಉಜಿರೆ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿಗಳಿಂದ 'ಭೀಷ್ಮ ವಿಜಯ' ಯಕ್ಷಗಾನ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Lakshadeepotsava starts at Dharmasthala on Tuesday, December 08th
Please Wait while comments are loading...