ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಚೂರು : ತುಂಬಿದ ಕೆರೆ, ಗ್ರಾಮಗಳಿಗೆ ನುಗ್ಗಿದ ನೀರು

By ನಮ್ಮ ಪ್ರತಿನಿಧಿ
|
Google Oneindia Kannada News

ರಾಯಚೂರು, ಅಕ್ಟೋಬರ್ 13 : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಲಿಂಗಸುಗೂರು ತಾಲೂಕಿನ ಕೆರೆ, ಹಳ್ಳಗಳು ತುಂಬಿ ಹರಿಯುತ್ತಿವೆ. ತಾಲೂಕಿನ ಬುದ್ದಿನ್ನಿ ಕೆರೆ ಕೋಡಿ ಒಡೆದ ಪರಿಣಾಮ ಬುದ್ದಿನ್ನಿ, ತೆರಬಾವಿ, ಗುಡಿಹಾಳ ಹಾಗೂ ಮಟ್ಟೂರು ಗ್ರಾಮಗಳಿಗೆ ನೀರು ನುಗ್ಗಿದೆ.

ಮಳೆಗೆ ತತ್ತರಿಸಿದ ಹುಬ್ಬಳ್ಳಿ, 58 ಮನೆಗಳು ನೆಲಸಮಮಳೆಗೆ ತತ್ತರಿಸಿದ ಹುಬ್ಬಳ್ಳಿ, 58 ಮನೆಗಳು ನೆಲಸಮ

Raichur

ಕೆರೆಯ ನೀರಿನಿಂದ ಗ್ರಾಮಗಳು ಸಂಪೂರ್ಣವಾಗಿ ಜಲಾವೃತವಾಗಿದೆ. ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ದವಸ-ಧಾನ್ಯಗಳು ನೀರುಪಾಲಾಗಿ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಬುದ್ದಿನ್ನಿ ಭಾಗದ ನಾಲ್ಕೈದು ಹಳ್ಳಿಗಳ ಜಮೀನುಗಳು ಕೂಡ ಜಲಾವೃತವಾಗಿದ್ದು, ಬೆಳೆಗಳು ನೀರಿನಲ್ಲಿ ಮುಳುಗಿ ರೈತರು ನಷ್ಟ ಎದುರಿಸುವಂತಾಗಿದೆ.

ಬೆಂಗಳೂರಿನಲ್ಲಿ ನಿಲ್ಲದ ಮಳೆ, ಮುಗಿಯದ ಗೋಳುಬೆಂಗಳೂರಿನಲ್ಲಿ ನಿಲ್ಲದ ಮಳೆ, ಮುಗಿಯದ ಗೋಳು

Rain

ಗುಡದನಾಳ ಗ್ರಾಮದ ಬಳಿಯ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಹಟ್ಟಿ-ಲಿಂಗಸುಗೂರು ಮಾರ್ಗ ಬಂದ್ ಮಾಡಲಾಗಿದೆ. ಲಿಂಗಸುಗೂರು ವಿಭಾಗದ ಸಹಾಯಕ ಆಯುಕ್ತೆ ದಿವ್ಯಫ್ರಭು, ತಹಶೀಲ್ದಾರ್ ಚಾಮರಾಜ ಪಾಟೀಲ್ ಸೇರಿದಂತೆ ಹಲವು ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ, ಪರಿಸ್ಥಿತಿ ಪರಿಶೀಲನೆ ನಡೆಸಿದರು.

ದಾವಣಗೆರೆಯ ಸೂಳೆಕೆರೆ ಭರ್ತಿ, ಬಾಗಿನ ಅರ್ಪಣೆದಾವಣಗೆರೆಯ ಸೂಳೆಕೆರೆ ಭರ್ತಿ, ಬಾಗಿನ ಅರ್ಪಣೆ

Karnataka
English summary
Heavy rain lashed Raichur district. Lakes overflowed and homes inundated in Lingasugur taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X