ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪ್ರಶಸ್ತಿ ಸಿಕ್ಕಿರುವುದು ನನಗಲ್ಲ, ನನ್ನ ಕೃತಿಗೆ': ಕೆವಿ ತಿರುಮಲೇಶ್

By Mahesh
|
Google Oneindia Kannada News

ಬೆಂಗಳೂರು, ಡಿ.18: ಲೇಖಕ, ಭಾಷಾ ವಿಜ್ಞಾನಿ, ಕೆ.ವಿ.ತಿರುಮಲೇಶ್ ಅವರ 'ಅಕ್ಷಯ ಕಾವ್ಯ' ಕೃತಿಗೆ 2015ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಂದಿದೆ.

ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ತಿರುಮಲೇಶ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಫಲಕ, 1 ಲಕ್ಷ ರೂಪಾಯಿ ನಗದು ಸಿಗಲಿದೆ.. ಫೆಬ್ರವರಿ 16, 2016ರಂದು ನಡೆಯಲಿರುವ ಅಕಾಡಮಿಯ 'ಫೆಸ್ಟಿವಲ್ ಆಫ್ ಲೆಟರ್ಸ್‌' ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಾಹಿತ್ಯ ಅಕಾಡಮಿಯ ಪ್ರಾದೇಶಿಕ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್ ತಿಳಿಸಿದ್ದಾರೆ.

KV Thirumalesh's Akshara Kavya bags Kendra Sahitya Academy Award

ಕೇರಳದ ಕಾಸರಗೋಡಿನ ಕಾರಡ್ಕ ಗ್ರಾಮದಲ್ಲಿ 1940ರ ಸೆಪ್ಟಂಬರ್ 12ರಂದು ಜನಿಸಿದ ತಿರುಮಲೇಶ್ ಅವರು ಸ್ನಾತಕೋತ್ತರ ಪದವಿ ಪಡೆದಿದ್ದು, ಹೈದರಾಬಾದಿನ ಉಸ್ಮಾನಿಯಾ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಕಥೆ, ಕಾವ್ಯ, ಕಾದಂಬರಿ, ವಿಮರ್ಶೆ, ಅನುವಾದ, ನಾಟಕಗಳು ಸೇರಿದಂತೆ ಕನ್ನಡದಲ್ಲಿ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.ಅವಧ', 'ವಠಾರ', 'ಮುಖವಾಡಗಳು', 'ಅಕ್ಷಯ ಕಾವ್ಯ' ಅವರ ಜನಪ್ರಿಯ ಕಾವ್ಯಗಳು.

ಪ್ರಗತಿಪರ ಧೋರಣೆ, ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಂಡ ತಿರುಮಲೇಶ್ ಅವರ ಆಸಕ್ತಿಯ ವಿಷಯ ಕಾವ್ಯ ಮತ್ತು ಭಾಷಾ ವಿಜ್ಞಾನ. ಸಾಹಿತ್ಯದ ಗುಂಪುಗಳು ಮತ್ತು ಪ್ರಚಾರದಿಂದ ದೂರವೇ ಉಳಿದಿದ್ದ ಅವರಿಗೆ, ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಗೌರವಗಳು ಸಂದಿವೆ.

'ಅಕ್ಷಯ ಕಾವ್ಯ ನಾನು ಬಹುವಾಗಿ ಪ್ರೀತಿಸುವ ಕೃತಿ. ಪ್ರೀತಿಪಾತ್ರ ಕೃತಿಗೆ ಪ್ರಶಸ್ತಿ ಬಂದಿರುವುದರಿಂದ ಸಹಜವಾಗಿಯೇ ಸಂತೋಷವಾಗಿದೆ. 'ಇದು ಕೃತಿಕಾರನಿಗೆ ಸಂದ ಗೌರವ ಎನ್ನುವುದಕ್ಕಿಂತಲೂ ಕೃತಿಗೆ ಸಂದ ಮನ್ನಣೆ' ಎಂದು ತಮಗೆ ಸಂದ ಪ್ರಶಸ್ತಿಯ ಬಗ್ಗೆ ತಿರುಮಲೇಶ್‌ ಪ್ರತಿಕ್ರಿಯಿಸಿದ್ದಾರೆ.

ವಿಶ್ವನಾಥ ಪ್ರಸಾದ್ ತಿವಾರಿ ನೇತೃತ್ವದಲ್ಲಿ ನಡೆದ ಆಯ್ಕೆ ಸಮಿತಿ ಕನ್ನಡ, ಕೊಂಕಣಿ ಸೇರಿದಂತೆ 23 ಭಾಷೆಗಳಲ್ಲಿ ಪ್ರಶಸ್ತಿಗಳ ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.

English summary
KV Thirumalesh's Akshaya Kavya bags Kendra Sahitya Academy award. He is a prolific writer in Kannada, his 30 works comprise poetry, short stories, novels, reviews, columns and linguistics. His poetry anthology ‘Mukhamukhi’ won for him the ‘Kumaran Ashan Award’ from Kerala and ‘Vardhamana Award’ from Kantavara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X