ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಟಾ: ಬರ್ಗಿಯಲ್ಲಿ ಗ್ಯಾಸ್ ಟ್ಯಾಂಕರ್ ಡಿಕ್ಕಿ, ಆತಂಕದಲ್ಲಿ ಗ್ರಾಮಸ್ಥರು

By ನಮ್ಮ ಪ್ರತಿನಿಧಿ
|
Google Oneindia Kannada News

ಕುಮಟಾ, ಅಕ್ಟೋಬರ್ 17: ತಾಲೂಕಿನ ಬರ್ಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅನಿಲ ತುಂಬಿದ ಟ್ಯಾಂಕರ್‌ ಲಾರಿಯೊಂದಕ್ಕೆ ಡಿಕ್ಕಿ ಹೊಡೆದು ಪರಿಣಾಮ ಚಾಲಕ‌ ಗಾಯಗೊಂಡಿದ್ದಾನೆ.

ಟ್ಯಾಂಕರ್ ರಸ್ತೆಯಿಂದ ಕೆಳಗಿಳಿದಿದ್ದು ಪಲ್ಟಿಯಾಗುವ ಆತಂಕ ಸೃಷ್ಠಿಯಾಗಿತ್ತು. ಇದರಿಂದ ಗ್ರಾಮಸ್ಥರು ಗಾಬರಿಯಾಗಿದ್ದರು.

Kumata: Villagers feared as Gas tanker met with accident in Bargi

ಮಂಗಳೂರಿನಿಂದ ಗೋವಾ ಕಡೆಗೆ ಸಾಗುತ್ತಿದ್ದ ಭಾರತ್ ಗ್ಯಾಸ್ ಕಂಪನಿಯ ಟ್ಯಾಂಕರ್ ಬರ್ಗಿ ಗ್ರಾಮ ಪಂಚಾಯತ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟ್ಯಾಂಕರ್ ರಸ್ತೆಯಿಂದ ಕೆಳಗಿಳಿದಿದೆ.

ಗ್ಯಾಸ್ ಟ್ಯಾಂಕರ್‌ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಮನೆಯಲ್ಲಿ ನಿದ್ಧೆಯಲ್ಲಿದ್ದ ಜನ ಕಂಗಾಲಾಗಿ ಹೋರ ಓಡಿದ್ದಾರೆ. ಇನ್ನು ಬೆಳಿಗ್ಗಿನ ತಿಂಡಿ ತಯಾರಿಕೆ ಮಾಡಲು ಓಲೆಗೆ ಬೆಂಕಿ ಹಚ್ಚಿದವರು ಗ್ಯಾಸ್ ಸೋರಿಕೆ ಭಯದಲ್ಲಿ ಓಲೆಗೆ ನೀರು ಹಾಕಿ ಬೆಂಕಿ ನಂದಿಸಿದ್ದಾರೆ.

Kumata: Villagers feared as Gas tanker met with accident in Bargi

ಘಟನೆಯಲ್ಲಿ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಗ್ಯಾಸ್ ಸೋರಿಯಾದ ಯಾವುದೇ ವರದಿಗಳು ಬಂದಿಲ್ಲ.

ಈ‌ ಹಿಂದೆ 2015ರಲ್ಲಿ ಬರ್ಗಿ ಘಟ್ಟದಲ್ಲಿ ಎಚ್.ಪಿ ಕಂಪನಿಗೆ ಸೇರಿದ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಅದರಲ್ಲಿದ್ದ ಅನಿಲ ಸೋರಿಕೆಯಿಂದ 13 ಮಂದಿ ಸಾವನ್ನಪ್ಪಿದ್ದರು.

English summary
The driver was injured after a collision with a Gas tanker and Truck on Bargi National Highway 66 in Kumata taluk, Uttara Kannada. The tanker was dropped out of the road and created anxiety.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X