ತಮ್ಮದೇ ಹಸುಳೆಯ ಹತ್ಯೆಗೈದಿದ್ದ ಕುಮಟಾದ ದಂಪತಿಗೆ ಶಿಕ್ಷೆ

Posted By:
Subscribe to Oneindia Kannada

ಬೆಂಗಳೂರು, ಜೂನ್ 17 : ಮದುವೆಗೆ ಮುಂಚೆ ನಡೆಸಿದ ಲೈಂಗಿಕ ಕ್ರಿಯೆಗೆ ಜನಿಸಿದ 24 ದಿನಗಳ ಮಗುವನ್ನು ಮಾನವೀಯತೆಯಿಲ್ಲದೆ ಹತ್ಯೆ ಮಾಡಿದ ಕಾರಣಕ್ಕಾಗಿ ಕರ್ನಾಟಕ ಹೈಕೋರ್ಟ್ ದಂಪತಿಗಳಿಗೆ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಗುರುವಾರ ತೀರ್ಪು ಹೊರಡಿಸಿದೆ.

ಭಾರತೀಯ ಸೇನೆಯಲ್ಲಿದ್ದ ವಿ ಹರಿಕಾಂತ್ ಮತ್ತು ಆತನ ಹೆಂಡತಿ ನಾಗರತ್ನ ಶಿಕ್ಷೆಗೆ ಗುರಿಯಾಗಿರುವ ದಂಪತಿಗಳು. ಅವರಿಬ್ಬರಿಗೆ ತಲಾ 1 ಲಕ್ಷ ರು. ದಂಡವನ್ನೂ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳು ವಿಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾದವರಾದ ಹರಿಕಾಂತ್ ಮತ್ತು ನಾಗರತ್ನ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಇಬ್ಬರ ಮಧ್ಯೆ ಅನೈತಿಕ ಸಂಬಂಧ ಬೆಸೆದು ಮದುವೆಗೆ ಮೊದಲೇ ನಾಗರತ್ನ ಗರ್ಭವತಿಯಾಗಿದ್ದಳು. ಇದಾದ ನಾಲ್ಕು ತಿಂಗಳಲ್ಲಿಯೇ ಅವರಿಬ್ಬರ ಮದುವೆಯಾಗಿದೆ. ಮುಂದಿನ 5 ತಿಂಗಳಲ್ಲಿ ಮಗು ಜನಿಸಿದೆ. [ಪದ್ದಣ್ಣ ಕೊಲೆ ಹಿಂದೆ ಇಂಜಿನಿಯರ್ ಅಂಜಲಿ]

Kumata couple convicted for murdering own baby

ಕಾನೂನಿನ ಪ್ರಕಾರ, ಏಳು ತಿಂಗಳೊಳಗೆ ಹುಟ್ಟಿದ ಮಗುವನ್ನು ಕಾನೂನು ಸಮ್ಮತವಲ್ಲದ ಮಗು ಎಂದು ಪರಿಗಣಿಸಲಾಗುತ್ತದೆ. ಈ ಕಳಂಕ ಭರಿಸಲು ಹೆದರಿದ ದಂಪತಿಗಳು ಕೇವಲ 24 ದಿನಗಳ ಹಸುಳೆಯನ್ನು ಕುಕ್ಕೆ ಸುಬ್ರಹ್ಮಣ್ಯಕ್ಕೆ ಕರೆದುಕೊಂಡು ಹೋಗಿ, ಮಗುವಿನ ಕತ್ತು ಹಿಸುಕಿ ಹತ್ಯೆ ಮಾಡಿದ್ದರು. ಕುಮಾರಧಾರಾ ಸೇತುವೆಯ ಅಡಿಯಲ್ಲಿ ಮಗುವಿನ ದೇಹವನ್ನು ಬಿಸಾಕಿ ವಾಪಸ್ ಆಗಿದ್ದರು.

ಈ ಘಟನೆ ನಡೆದಿದ್ದು 2011ರಲ್ಲಿ. ಕೆಳ ನ್ಯಾಯಾಲಯದ ನ್ಯಾಯವಾದಿಗಳು ಇವರಿಬ್ಬರ ಆರೋಪವನ್ನು ಸಾಬೀತುಪಡಿಸಲು ಸೋತಿದ್ದರಿಂದ ಅವರನ್ನು ಖುಲಾಸೆ ಮಾಡಲಾಗಿತ್ತು. ಆದರೆ, ಹೈಕೋರ್ಟಿಗೆ ಮೇಲ್ಮನವಿಯಲ್ಲಿ ದಂಪತಿಗಳ ಆರೋಪ ಸಾಬೀತಾಗಿದೆ. [ಬೆಂಗಳೂರಲ್ಲಿ ಅವಿವಾಹಿತನ ಕಾಮದಾಸೆಗೆ ಮಗು ಬಲಿ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A couple from Kumata in Uttara Kannada district have been sentenced to 7 years imprisonment by Karnataka High Court for murdering their own 24-days baby in Kukke Subramanya. The baby was born to their illicit relationship before the marriage.
Please Wait while comments are loading...