ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ ರಾಜ್ಯಸಭೆಗೆ, ಗೌಡರ ಸ್ಪಷ್ಟನೆಗಳು

|
Google Oneindia Kannada News

ಬೆಂಗಳೂರು, ಮೇ 06 : 'ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ರಾಜ್ಯ ರಾಜಕೀಯವೇ ಇಷ್ಟ. ಅವರನ್ನು ರಾಜ್ಯಸಭೆಗೆ ಕಳುಹಿಸುವ ವಿಚಾರ ಕೇವಲ ಊಹಾಪೋಹ' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಗುರುವಾರ ಬೆಂಗಳೂರಿನ ಪದ್ಮನಾಭನಗರದಲ್ಲಿನ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದೇವೇಗೌಡರು, ಕುಮಾರಸ್ವಾಮಿ ಅವರು ರಾಜ್ಯಸಭೆಗೆ ಆಯ್ಕೆಯಾಗಿ ಕೇಂದ್ರ ಮಂತ್ರಿಯಾಗಲಿದ್ದಾರೆ ಎಂಬ ಸುದ್ದಿಗಳನ್ನು ತಳ್ಳಿಹಾಕಿದರು. [ಕುಮಾರಸ್ವಾಮಿ ಚಿತ್ತ ಚಿಕ್ಕಬಳ್ಳಾಪುರದತ್ತ, ಯಾಕಂತ?]

deve gowda

'ಕುಮಾರಸ್ವಾಮಿ ಅವರನ್ನು ರಾಜ್ಯಸಭೆಗೆ ಕಳುಹಿಸುವ ಸುದ್ದಿ ಕೇವಲ ಉಹಾಪೋಹ. ಅವರಿಗೆ ರಾಜ್ಯದ ರಾಜಕೀಯವೇ ಇಷ್ಟ. ದೆಹಲಿಗೆ ಹೋಗು ಎಂದು ನಾವು ದಬ್ಬಿದರೂ ಅವರು ಹೋಗುವುದಿಲ್ಲ. ರಾಜ್ಯ ರಾಜಕಾರಣದಲ್ಲೇ ಇರುತ್ತಾರೆ' ಎಂದು ದೇವೇಗೌಡರು ಸ್ಪಷ್ಟಪಡಿಸಿದರು. [ರಾಜ್ಯಸಭೆ ಸದಸ್ಯರಾಗಲು ಪೈಪೋಟಿ]

'ರಾಜ್ಯದ ಜನರು ಕುಮಾರಸ್ವಾಮಿ ಅವರಿಗೆ ಮತ್ತೊಂದು ಅವಕಾಶ ಕೊಟ್ಟು ಮುಖ್ಯಮಂತ್ರಿ ಮಾಡಬೇಕೆನ್ನುವ ಅಪೇಕ್ಷೆ ಹೊಂದಿದ್ದಾರೆ. ಹೀಗಿರುವಾಗ ರಾಜ್ಯಸಭೆಗೆ ಕಳುಹಿಸಿ ಕೇಂದ್ರ ಮಂತ್ರಿಯಾಗುವ ಪ್ರಸ್ತಾಪವೇ ಬರುವುದಿಲ್ಲ' ಎಂದು ದೇವೇಗೌಡರು ಹೇಳಿದರು. [ಒಂದೇ ವೇದಿಕೆಯಲ್ಲಿ ಗೌಡ್ರು, ಎಸ್ ಎಂ ಕೃಷ್ಣ: ಶತ್ರುವಿನ ಶತ್ರು.. ಮಿತ್ರ?]

ರಾಜಕೀಯಕ್ಕೆ ಬರುವುದಿಲ್ಲ ಎಂದಿದ್ದಾರೆ : ಇನ್ಫೋಸಿಸ್‌ನ ಸುಧಾಮೂರ್ತಿ ಅವರು ರಾಜ್ಯಸಭೆ ಅಭ್ಯರ್ಥಿಯಾದರೆ ಅವರನ್ನು ಜೆಡಿಎಸ್ ಬೆಂಬಲಿಸಲಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, 'ಸುಧಾಮೂರ್ತಿ ಅವರು ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ. ಅವರ ಬಗ್ಗೆ ಅಪಾರವಾದ ಗೌರವವಿದೆ' ಎಂದು ಹೇಳಿದರು.

4 ಸ್ಥಾನಗಳು ತೆರವಾಗುತ್ತವೆ : ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಎಂ.ವೆಂಕಯ್ಯ ನಾಯ್ಡು (ಬಿಜೆಪಿ), ಆಯನೂರು ಮಂಜುನಾಥ್ (ಬಿಜೆಪಿ), ಆಸ್ಕರ್ ಫರ್ನಾಂಡೀಸ್ (ಕಾಂಗ್ರೆಸ್), ವಿಜಯ್ ಮಲ್ಯ(ಪಕ್ಷೇತರ) ಅವರ ಅವಧಿ ಜೂನ್ 30ಕ್ಕೆ ಅಂತ್ಯಗೊಳ್ಳಲಿದೆ. ಇವರಿಂದ ತೆರವಾಗುವ ಸ್ಥಾನಕ್ಕೆ ಆಯ್ಕೆಯಾಗಲು ಪೈಪೋಟಿ ನಡೆಯುತ್ತಿದೆ.

English summary
Former prime minister and JDS national president H.D.Deve Gowda has dismissed speculations that his son H.D.Kumaraswamy is eyeing a Rajya Sabha seat. Deve Gowda clarified that, even if his son was literally pushed out, he would not quit state politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X