ಸಂಪುಟ ವಿಸ್ತರಣೆ ಜೊತೆ ಪುನಾರಚನೆ : ಇಬ್ಬರು ಸಂಪುಟದಿಂದ ಹೊರಕ್ಕೆ?

Recommended Video

      ಸಂಪುಟ ವಿಸ್ತರಣೆ ಜೊತೆ ಪುನಾರಚನೆ : ಮೂವರು ಸಂಪುಟದಿಂದ ಹೊರಕ್ಕೆ? | Oneindia Kannada

      ಬೆಂಗಳೂರು, ಡಿಸೆಂಬರ್ 14 : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಮುಗಿಯುತ್ತಿದ್ದಂತೆ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಈಗಾಗಲೇ ಡಿಸೆಂಬರ್ 22ರಂದು ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ದಿನಾಂಕ ನಿಗಿದಿ ಮಾಡಲಾಗಿದೆ.

      ಸಚಿವ ಸಂಪುಟ ವಿಸ್ತರಣೆ ಜೊತೆಗೆ ಪುನಾರಚನೆಯೂ ನಡೆಯಲಿದೆ. ಕಾಂಗ್ರೆಸ್‌ ಪಕ್ಷದಿಂದ ಸಂಪುಟ ಸೇರಿರುವ ಇಬ್ಬರು ಸಚಿವ ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಚರ್ಚೆ ನಡೆದಿದ್ದು, ಸಿದ್ದರಾಮಯ್ಯ ಅವರು ಬೆಂಗಳೂರಿಗೆ ವಾಪಸ್ ಬಂದ ಬಳಿಕ ಅಂತಿಮವಾಗಲಿದೆ.

      ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಪ್ರಸ್ತುತ 8 ಸಚಿವ ಸ್ಥಾನಗಳು ಖಾಲಿ ಇವೆ. ಇವುಗಳ ಪೈಕಿ 6 ಕಾಂಗ್ರೆಸ್‌ಗೆ, 2 ಸ್ಥಾನಗಳು ಜೆಡಿಎಸ್‌ಗೆ ಸಿಗಲಿವೆ. ಕಾಂಗ್ರೆಸ್ ಇಬ್ಬರು ಸಚಿವರನ್ನು ಕೈ ಬಿಟ್ಟು, ಒಟ್ಟು 6 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.

      ಸರ್ಕಾರ ಅಸ್ತಿತ್ವಕ್ಕೆ ಬಂದು ಕೇವಲ 6 ತಿಂಗಳು ಕಳೆದಿದೆ. ಈಗ ಸಂಪುಟ ಪುನಾರಚನೆ ಮಾಡಲು ಹೊರಟರೆ ಸಚಿವರ ಬೆಂಬಲಿಗರು ಸುಮ್ಮನಿರಲಿದ್ದಾರೆಯೇ? ಎಂದು ಕಾದು ನೋಡಬೇಕು. ಡಿಸೆಂಬರ್ 22ರಂದು ಸಂಪುಟ ವಿಸ್ತರಣೆ ಖಚಿತವಾಗಿದ್ದು, ಯಾರು ಸಂಪುಟ ಸೇರಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ....

      ಆರ್.ಶಂಕರ್ ಸಂಪುಟದಿಂದ ಹೊರಕ್ಕೆ

      ಆರ್.ಶಂಕರ್ ಸಂಪುಟದಿಂದ ಹೊರಕ್ಕೆ

      ರಾಣೆಬೆನ್ನೂರು ಕ್ಷೇತ್ರದ ಕೆಪಿಜೆಪಿ ಶಾಸಕ ಆರ್.ಶಂಕರ್ ಸಂಪುಟದಿಂದ ಹೊರಹೋಗುವ ಸಾಧ್ಯತೆ ಇದೆ. ಕಾಂಗ್ರೆಸ್‌ ಕೋಟಾದಡಿ ಅವರನ್ನು ಸಚಿವರನ್ನಾಗಿ ಮಾಡಲಾಗಿದೆ. ಕಾಂಗ್ರೆಸ್ ಸದಸ್ಯತ್ವ ತೆಗೆದುಕೊಳ್ಳಬೇಕು ಎಂದು ಮೊದಲು ಷರತ್ತು ಹಾಕಲಾಗಿತ್ತು. ಆದರೆ, ಸಂಪುಟ ಸೇರಿದರೂ ಅವರು ಕಾಂಗ್ರೆಸ್‌ ಸೇರಿಲ್ಲ. ಆದ್ದರಿಂದ, ಅವರನ್ನು ಸಂಪುಟದಿಂದ ಕೈ ಬಿಡಲಾಗುತ್ತದೆ ಎಂಬ ಬಗ್ಗೆ ಚರ್ಚೆ ನಡೆದಿದೆ.

      ಡಾ.ಜಯಮಾಲಾ

      ಡಾ.ಜಯಮಾಲಾ

      ವಿಧಾನ ಪರಿಷತ್ ಕೋಟಾದಡಿ ಕಾಂಗ್ರೆಸ್ ಡಾ.ಜಯಮಾಲಾ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದೆ. ಕನ್ನಡ ಮತ್ತು ಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಅವರನ್ನು ಸಂಪುಟದಿಂದ ಕೈ ಬಿಡುವ ಸಾಧ್ಯತೆ ಇದೆ. ಜಯಮಾಲಾ ಅವರನ್ನು ಕೈ ಬಿಟ್ಟು ರೂಪಾ ಶಶಿಧರ್ ಅಥವ ಅಂಜಲಿ ನಿಂಬಾಳ್ಕರ್ ಅವರಿಗೆ ಅವಕಾಶ ನೀಡಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ.

      ಜಮೀರ್ ಅಹಮದ್ ಖಾನ್

      ಜಮೀರ್ ಅಹಮದ್ ಖಾನ್

      ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಸಂಪುಟದಿಂದ ಕೈ ಬಿಡಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ. ಇದಕ್ಕೆ ಸಚಿವರು ಸಹ ಪ್ರತಿಕ್ರಿಯೆ ನೀಡಿದ್ದು, 'ನನ್ನನ್ನು ಕೈ ಬಿಟ್ಟರೂ ಇಬ್ಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು' ಎಂದು ಹೇಳಿದ್ದಾರೆ.

      ಸಿದ್ದರಾಮಯ್ಯ ಬಂದ ಬಳಿಕ ಅಂತಿಮ

      ಸಿದ್ದರಾಮಯ್ಯ ಬಂದ ಬಳಿಕ ಅಂತಿಮ

      ಸಿದ್ದರಾಮಯ್ಯ ಅವರು ವಿದೇಶ ಪ್ರವಾಸದಲ್ಲಿದ್ದಾರೆ. ಅವರು ಬಂದ ಬಳಿಕ ಯಾರನ್ನು ಸಂಪುಟದಿಂದ ಕೈ ಬಿಡಬೇಕು. ಯಾರನ್ನು ಸೇರಿಸಿಕೊಳ್ಳಬೇಕು ಎಂದು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+