ಕೆಎಸ್ಆರ್‌ಟಿಸಿ ಸೇರಲಿವೆ 300 ಎಲೆಕ್ಟ್ರಿಕ್‌ ಬಸ್: ಯಾವ ಮಾರ್ಗದಲ್ಲಿ ಸಂಚಾರ?

ಬೆಂಗಳೂರು, ಜುಲೈ 04: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಎಲೆಕ್ಟ್ರಿಕ್‌ ಬಸ್‌ಗಳ ಸಂಖ್ಯೆ ಹೆಚ್ಚಿಸಲು ಮುಂದಾಗಿದೆ. ಒಪ್ಪಂದದ ಮೇರೆಗೆ 300 ಬಸ್‌ಗಳನ್ನು ನಿಗಮಕ್ಕೆ ಸೇರಿಸಿಕೊಳ್ಳಲಿದೆ.

ಕೆಎಸ್ಆರ್‌ಟಿಸಿ ಒಟ್ಟು ವೆಚ್ಚದ ಒಪ್ಪಂದದ ಮಾದರಿಯಲ್ಲಿ 300 ಎಲೆಕ್ಟ್ರಿಕ್‌ ಬಸ್ ಗಳನ್ನು ಸೇರಿಸಿಕೊಳ್ಳಲಿದೆ. ಇವುಗಳಲ್ಲಿ 225 ನಾನ್‌ ಎಸಿ ಬಸ್‌ಗಳು, 75 ಎಸಿ ಬಸ್‌ಗಳು. ಒಟ್ಟು 12 ವರ್ಷಗಳ ಕಾಲದ ಒಪ್ಪಂದದ ಆಧಾರದ ಮೇಲೆ ಈ ಬಸ್‌ಗಳನ್ನು ಸೇರಿಸಿಕೊಳ್ಳಲಾಗುತ್ತಿದ್ದು, ಕೆಎಸ್ಆರ್‌ಟಿಸಿ ಇದಕ್ಕಾಗಿ ಈಗಾಗಲೇ ಟೆಂಡರ್ ಕರೆದಿದೆ.

KSRTC To Induct 300 Electric Buses On A Lease Model

300 ಬಸ್‌ಗಳ ಪೈಕಿ 205 12 ಮೀಟರ್‌ನ ಹವಾನಿಯಂತ್ರಣ ರಹಿತ ಇಂಟರ್‌ ಸಿಟಿ ಬಸ್‌ಗಳು (2*3 ಸೀಟು). 75 12 ಮೀಟರ್ ಎಸಿ ಡಿಲಕ್ಸ್‌ ಇಂಟರ್ ಸಿಟಿ ಬಸ್‌ಗಳು (2*2 ಸೀಟುಗಳು) ಮತ್ತು 20 12 ಮೀಟರ್ ಉದ್ದದ ಹವಾನಿಯಂತ್ರಣ ರಹಿತ ನಗರ ಸಾರಿಗೆ (2*2 ಸೀಟು) ಬಸ್‌ಗಳು.

ಯಾವ-ಯಾವ ಮಾರ್ಗದಲ್ಲಿ ಸಂಚಾರ?; ಕೆಎಸ್‌ಆರ್‌ಟಿಸಿ ಈ ಎಲೆಕ್ಟ್ರಿಕ್ ಬಸ್‌ಗಳನ್ನು ಬೆಂಗಳೂರು-ತುಮಕೂರು, ಬೆಂಗಳೂರು-ಕೋಲಾರ, ಬೆಂಗಳೂರು ಚಿಕ್ಕಮಗಳೂರು ಮಾರ್ಗದಲ್ಲಿ ಓಡಿಸಲಿದೆ. 50 ಬಸ್‌ಗಳನ್ನು ತುಮಕೂರು, 45 ಬಸ್‌ಗಳನ್ನು ಕೋಲಾರ, ಮಂಗಳೂರು 45, 40 ಚಿಕ್ಕಬಳ್ಳಾಪುರ, 40 ಪುತ್ತೂರು 40, 30 ಮೈಸೂರು ಗ್ರಾಮಾಂತರ, 20 ಮೈಸೂರು ನಗರ ಮತ್ತು 20 ರಾಮನಗರಕ್ಕೆ ಹಂಚಿಕೆ ಮಾಡಲಾಗುತ್ತದೆ.

ಈ ಒಪ್ಪಂದದ ಅನ್ವಯ ಕೆಎಸ್ಆರ್‌ಟಿಸಿ ಬಸ್‌ಗಳಿಗೆ ಕಂಡಕ್ಟರ್‌ಗಳನ್ನು ಮಾತ್ರ ನೀಡಲಿದೆ. ಬಸ್‌ಗಳನ್ನು ನೀಡುವ ಕಂಪನಿಯೇ ಚಾಲಕರನ್ನು ನೇಮಿಸಿಕೊಳ್ಳಬೇಕು ಮತ್ತು ಬಸ್‌ಗಳ ಕಾರ್ಯಾಚರಣೆ, ನಿರ್ವಹಣೆ ನೋಡಿಕೊಳ್ಳಬೇಕು. ಅಲ್ಲದೇ ಬಸ್‌ ಚಾರ್ಜ್‌ ಮಾಡುವ ಮೂಲ ಸೌಕರ್ಯವನ್ನು ಕಲ್ಪಿಸಿಕೊಳ್ಳಬೇಕು. ಪ್ರತಿ ಕಿ. ಮೀ. ಲೆಕ್ಕದಲ್ಲಿ ಅವರಿಗೆ ನಿಗಮ ಹಣ ಪಾವತಿ ಮಾಡುತ್ತದೆ.

ಟೆಂಡರ್ ಪಡೆಯುವ ಕಂಪನಿ ಪ್ರತಿ ಬಸ್ ಅನ್ನು ಪ್ರತಿ ದಿನ 250 ಕಿ. ಮೀ. ಓಡಿಸಬೇಕು. ಪ್ರತಿ ಚಾರ್ಜ್‌ ಬಳಿಕ180 ಕಿ. ಮೀ. ಓಡುವಂತಿರಬೇಕು. ಬಸ್‌ಗಳು ಸಿಸಿಟಿವಿ, ಪ್ಯಾನಿಕ್ ಬಟನ್ ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಹೊಂದಿರಬೇಕು.

2023ರ ಜನವರಿಯಲ್ಲಿ ಕೆಎಸ್ಆರ್‌ಟಿಸಿ ಇಂಟರ್‌ ಸಿಟಿ ಇ-ಬಸ್‌ಗಳ ಸಂಚಾರ ಆರಂಭಿಸಿತ್ತು. 'ಇ-ಪವರ್ ಪ್ಲಸ್' ಎಂಬ ಹೆಸರಿನಲ್ಲಿ ಈ ಬಸ್‌ಗಳು ಸಂಚಾರ ನಡೆಸುತ್ತಿವೆ. ಎಲ್ಲಾ 50 ಇ-ಬಸ್‌ಗಳನ್ನು ಕೇಂದ್ರದ ಫೇಮ್-2 ಸಬ್ಸಿಡಿ ಯೋಜನೆಯಡಿ ಬೆಂಗಳೂರಿನಿಂದ ಮೈಸೂರು, ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ನಡುವೆ ಸಂಚಾರ ನಡೆಸಲಾಗುತ್ತಿದೆ.

ಇದಲ್ಲದೇ ಕೆಎಸ್ಆರ್‌ಟಿಸಿ 70 ಬಿಎಸ್‌-6 ಡೀಸೆಲ್ ನಾನ್ ಎಸಿ ಸ್ಲೀಪರ್, 30 ಸೀಟರ್-ಕಂ-ಸ್ಲೀಪರ್ ಕೋಚ್‌ ಬಸ್‌ಗಳಿಗಾಗಿ ಈಗಾಗಲೇ ಟೆಂಡರ್ ಕರೆದಿದೆ. ಸೀಟರ್-ಕಂ-ಸ್ಲೀಪರ್ ಮಾದರಿಯ ಬಸ್‌ಗಳು ಈಗಾಗಲೇ ಖಾಸಗಿಯಲ್ಲಿದೆ. ಆದರೆ ಕೆಎಸ್ಆರ್‌ಟಿಸಿ ಮೊದಲ ಬಾರಿಗೆ ಈ ಮಾದರಿ ಬಸ್‌ಗಳನ್ನು ಓಡಿಸಲು ಮುಂದಾಗಿದೆ.

ಕರ್ನಾಟಕ ಸರ್ಕಾರ 'ಶಕ್ತಿ' ಯೋಜನೆ ಜಾರಿಗೊಳಿಸಿದ ಮೇಲೆ ಸರ್ಕಾರಿ ಬಸ್‌ನಲ್ಲಿ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಜನರ ಬೇಡಿಕೆಗೆ ಅನುಗುಣವಾಗಿ ಬಸ್‌ಗಳು ಲಭ್ಯವಿಲ್ಲ ಎಂಬ ಆರೋಪವಿತ್ತು. ಆದ್ದರಿಂದ ನಗರ, ಅಂತರ ನಗರ ಸಾರಿಗೆಗಾಗಿಯೇ ಕೆಎಸ್ಆರ್‌ಟಿಸಿ ಎಲೆಕ್ಟ್ರಿಕ್ ಬಸ್‌ಗಳನ್ನು ಒಪ್ಪಂದದ ಮೇಲೆ ಖರೀದಿ ಮಾಡಿ ಓಡಿಸಲು ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+