ಕೇರಳ-ಕರ್ನಾಟಕ ನಡುವೆ ಬಸ್ ಸಂಚಾರ; ಪ್ರಯಾಣಿಕರಿಗೆ ಸೂಚನೆ
ಬೆಂಗಳೂರು, ಆಗಸ್ಟ್ 17: ಕೆಎಸ್ಆರ್‌ಟಿಸಿ ಕರ್ನಾಟಕ-ಕೇರಳ ನಡುವೆ ಬಸ್ ಸಂಚಾರವನ್ನು ಆರಂಭಿಸುತ್ತಿದೆ. ಓಣಂ ಹಬ್ಬದ ಪ್ರಯುಕ್ತ ಆಗಸ್ಟ್ 24 ರಿಂದ ಸೆಪ್ಟೆಂಬರ್ 6ರ ತನಕ ಬಸ್‌ಗಳು ಸಂಚಾರ ನಡೆಸಲಿವೆ.
Recommended Video
ಸೋಮವಾರ ಕೆಎಸ್ಆರ್‌ಟಿಸಿ ಈ ಕುರಿತು ಮಾಹಿತಿ ನೀಡಿದೆ. ಬೆಂಗಳೂರು ಮತ್ತು ಮೈಸೂರಿನಿಂದ ಕೇರಳ ರಾಜ್ಯದ ವಿವಿಧ ಪ್ರದೇಶಗಳಿಗೆ ಬಸ್‌ಗಳು ಸಂಚಾರ ನಡೆಸಲಿವೆ. ಬಸ್‌ನಲ್ಲಿ ಸಂಚಾರ ನಡೆಸುವ ಜನರು ಕೆಲವು ನಿರ್ದೇಶನಗಳನ್ನು ಪಾಲಿಸಬೇಕಿದೆ.
ಬೆಂಗಳೂರು ನಗರದಿಂದ ಕಣ್ಣೂರು, ಎರ್ನಾಕುಲಂ, ಕಾನ್ಹಂಗಾಡ್, ಕಾಸರಗೋಡು, ಕೊಟ್ಟಾಯಂ, ಕಲ್ಲಿಕೋಟೆ, ಪಾಲಘಾಟ್, ಶ್ರಿಶೂರು, ತಿರುವನಂತಪುರಂ ಮತ್ತು ವಡಕರಾಗೆ ಬಸ್‌ಗಳು ಸಂಚಾರ ನಡೆಸಲಿವೆ ಎಂದು ಕೆಎಸ್ಆರ್‌ಟಿಸಿ ಹೇಳಿದೆ.
ಮೈಸೂರಿನಿಂದ ತಿರುವನಂತಪುರಂ, ಎರ್ನಾಕುಲಂ, ಕೊಟ್ಟಾಯಂಗೆ ಮತ್ತು ಈ ಸ್ಥಳಗಳಿಂದ ಮೈಸೂರಿಗೆ ಬಸ್‌ಗಳು ಸಂಚಾರ ನಡೆಸಲಿವೆ. ಆಗಸ್ಟ್ 25ರಿಂದ ಸೆಪ್ಟೆಂಬರ್ 6ರ ತನಕ ಕರ್ನಾಟಕಕ್ಕೆ ಬಸ್ ಸಂಚಾರ ನಡೆಸುವುದಾಗಿ ಕೇರಳ ಸಾರಿಗೆ ಇಲಾಖೆಯೂ ಘೋಷಣೆ ಮಾಡಿದೆ.

ಕೇರಳಕ್ಕೆ ಹೋಗಲು ಸೂಚನೆಗಳು
ಕರ್ನಾಟಕದಿಂದ ಕೇರಳಕ್ಕೆ ಹೋಗುವಾಗ ಕೇರಳ ಸರ್ಕಾರದ ಆದೇಶದ ಅನ್ವಯ ಪ್ರಯಾಣಿಕರು ಕೇರಳ ಸರ್ಕಾರದ ಕೋವಿಡ್ 19 ಜಾಗೃತ್ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ವೆಬ್ ಸೈಟ್ ವಿಳಾಸ

ನೋಂದಣಿ ಕಡ್ಡಾಯವಾಗಿದೆ
ಬಸ್ಸನ್ನು ಹತ್ತುವ ಮುಂಚೆ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರುವ ಬಗ್ಗೆ ಪುರಾವೆಯನ್ನು ಕೆಎಸ್ಆರ್‌ಟಿಸಿ ಸಿಬ್ಬಂದಿಗೆ ತೋರಿಸಬೇಕು.ಇಲ್ಲವಾದಲ್ಲಿ ಬಸ್ ಹತ್ತಲು ಅವಕಾಶ ನೀಡುವುದಿಲ್ಲ.

ಕೇರಳದಿಂದ ಬರಲು ಸೂಚನೆ
ಕರ್ನಾಟಕ ಸರ್ಕಾರದ ಸೂಚನೆ ಅನ್ವಯ ಎಲ್ಲಾ ಪ್ರಯಾಣಿಕರು ಕೇರಳದಿಂದ ಬರುವಾಗ ಸೇವಾ ಸಿಂಧು ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಬಸ್ ಹತ್ತುವ ಮೊದಲು ಸಿಬ್ಬಂದಿಗೆ ನೋಂದಣಿ ಕುರಿತು ಪುರಾವೆ ತೋರಿಸಬೇಕು. ವಿಳಾಸ

ಕೇರಳದಿಂದಲೂ ಬಸ್ ಸಂಚಾರ
ತಮಿಳುನಾಡು ಮತ್ತು ಕರ್ನಾಟಕಕ್ಕೆ ಬಸ್ ಸಂಚಾರ ನಡೆಸಲಾಗುತ್ತದೆ ಎಂದು ಕೇರಳ ಸಾರಿಗೆ ಇಲಾಖೆಯೂ ಘೋಷಣೆ ಮಾಡಿದೆ. ಬುಕ್ ಮಾಡಿರುವ ಬಸ್‌ಗಳ ಸಂಚಾರ ಯಾವುದಾದರೂ ಕಾರಣಕ್ಕೆ ರದ್ದಾದರೆ ಸಂಪೂರ್ಣ ಹಣವನ್ನು ವಾಪಸ್ ಮಾಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.












Click it and Unblock the Notifications