KSRTC: ಈ ಮಾರ್ಗಗಳಲ್ಲಿ ಕೆಎಸ್ಆರ್‌ಟಿಸಿ ಬಸ್ ಪ್ರಯಾಣ ದರ ಕಡಿತ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಮಂಗಳೂರು ವಿಭಾಗವು ಕರಾವಳಿ ಮತ್ತು ಬೆಂಗಳೂರು ನಡುವಿನ ಪ್ರೀಮಿಯಂ ಬಸ್ ಸೇವೆಗಳ ಟಿಕೆಟ್ ದರಗಳನ್ನು ಕಡಿತಗೊಳಿಸಿದೆ. ಸೋಮವಾರದಿಂದಲೇ (ಜ.5) ಈ ಪರಿಷ್ಕೃತ ದರಗಳು ಅನ್ವಯವಾಗಲಿವೆ. ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಿಂದ ಕುಂದಾಪುರ, ಉಡುಪಿ, ಮಂಗಳೂರಿನಿಂದ ಬೆಂಗಳೂರಿಗೆ ಕಾರ್ಯಾಚರಣೆ ನಡೆಸುವ ಕೆಲವು ಬಸ್‌ಗಳ ಪ್ರಯಾಣ ದರವನ್ನು ಶೇ 10ರಿಂದ 15ರಷ್ಟು ಕಡಿತಗೊಳಿಸಲಾಗಿದೆ.

ಜನವರಿಯಿಂದ ಮಾರ್ಚ್‌ವರೆಗೆ ಇರುವ ಆಫ್‌ ಸೀಸನ್ ಅವಧಿಯಲ್ಲಿ ಪ್ರಯಾಣಿಕರನ್ನು ಆಕರ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸಾಮಾನ್ಯವಾಗಿ ಏಪ್ರಿಲ್-ಜೂನ್ ಹಾಗೂ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ತನ್ನ ಪ್ರೀಮಿಯಂ ಸೇವೆಗಳ ದರವನ್ನು ಶೇ.10ರಿಂದ 15ರವರೆಗೆ ಹೆಚ್ಚಿಸುತ್ತದೆ. ಆದರೆ ಆಫ್‌ ಸೀಸನ್‌ನಲ್ಲಿ ಸಾಮಾನ್ಯ ದರಗಳು ಅನ್ವಯಿಸುತ್ತವೆ. ವಾರಾಂತ್ಯದ ದಿನಗಳಲ್ಲಿ ಮಾತ್ರ ಭಾಗಶಃ ದರ ಏರಿಕೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

KSRTC Reduces Mangaluru Bengaluru Bus Fare by Up to 15 from January 5

ಆಫ್‌ ಸೀಸನ್ ಅವಧಿಯಲ್ಲಿ ಪ್ರೀಮಿಯಂ ಸೇವೆಗಳ ಟಿಕೆಟ್ ದರಗಳನ್ನು ಕಡಿತಗೊಳಿಸಲಾಗಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಕರು ಮನವಿ ಮಾಡಿದ್ದಾರೆ. ಅತ್ಯುತ್ತಮ ಪ್ರೀಮಿಯಂ ಸೇವೆಯಾದ ಅಂಬಾರಿ ಉತ್ಸವ (ಮಲ್ಟಿ ಆಕ್ಸಲ್ ಎಸಿ ಸ್ಲೀಪರ್) ಹಾಗೂ ಇತರೆ ಸೇವೆಗಳ ಬಸ್ ಟಿಕೆಟ್ ದರಗಳು ಪ್ರಸ್ತುತ ಹೀಗಿವೆ..

* ಅಂಬಾರಿ ಉತ್ಸವ

ಕುಂದಾಪುರ-ಬೆಂಗಳೂರು: ₹1,510
ಉಡುಪಿ-ಬೆಂಗಳೂರು: ₹1,460
ಮಂಗಳೂರು-ಬೆಂಗಳೂರು: ₹1,350

* ಅಂಬಾರಿ ಡ್ರೀಮ್ ಕ್ಲಾಸ್ (ಎಸಿ ಸ್ಲೀಪರ್) ಸೇವೆಯ ದರಗಳು

ಕುಂದಾಪುರ-ಬೆಂಗಳೂರು: ₹1,350
ಉಡುಪಿ-ಬೆಂಗಳೂರು: ₹1,300
ಮಂಗಳೂರು-ಬೆಂಗಳೂರು: ₹1,200

* ಮಲ್ಟಿ ಆಕ್ಸಲ್ 2+2 ಎಸಿ ಸಿಟಿಂಗ್ ಬಸ್ ದರಗಳು

ಕುಂದಾಪುರ-ಬೆಂಗಳೂರು: ₹1,310
ಉಡುಪಿ-ಬೆಂಗಳೂರು: ₹1,250
ಮಂಗಳೂರು-ಬೆಂಗಳೂರು: ₹1,150

* ಹಳೆಯ ಮಲ್ಟಿ ಆಕ್ಸಲ್ ಬಸ್‌

ಕುಂದಾಪುರ-ಬೆಂಗಳೂರು: ₹1,110
ಉಡುಪಿ-ಬೆಂಗಳೂರು: ₹1,060
ಮಂಗಳೂರು-ಬೆಂಗಳೂರು: ₹1,000

* ನಾನ್-ಎಸಿ ಸ್ಲೀಪರ್ ಪರಿಷ್ಕೃತ ದರ

ಕುಂದಾಪುರ-ಬೆಂಗಳೂರು: ₹1,050
ಉಡುಪಿ-ಬೆಂಗಳೂರು: ₹1,000
ಮಂಗಳೂರು-ಬೆಂಗಳೂರು: ₹900

KSRTC Reduces Mangaluru Bengaluru Bus Fare by Up to 15 from January 5

* ಪಲ್ಲಕ್ಕಿ ನಾನ್-ಎಸಿ

ಕುಂದಾಪುರ-ಬೆಂಗಳೂರು: ₹1,100
ಉಡುಪಿ-ಬೆಂಗಳೂರು: ₹1,060
ಮಂಗಳೂರು-ಬೆಂಗಳೂರು: ₹950

* ರಾಜಹಂಸ ನಾನ್-ಎಸಿ

ಕುಂದಾಪುರ-ಬೆಂಗಳೂರು: ₹750
ಉಡುಪಿ-ಬೆಂಗಳೂರು: ₹700
ಮಂಗಳೂರು-ಬೆಂಗಳೂರು: ₹650

ಹೊಸ ದರಗಳಿಂದ ಏನೆಲ್ಲ ಅನುಕೂಲ?

ಪ್ರೀಮಿಯಂ ಎಸಿ ಹಾಗೂ ನಾನ್-ಎಸಿ ಬಸ್‌ಗಳ ದರ ಇಳಿಕೆಯಿಂದ ಪ್ರಯಾಣಿಕರಿಗೆ ಪ್ರತಿ ಪ್ರಯಾಣದಲ್ಲೇ ನೂರಾರು ರೂಪಾಯಿ ಉಳಿತಾಯವಾಗಲಿದೆ. ನಿಯಮಿತವಾಗಿ ಬೆಂಗಳೂರು-ಕರಾವಳಿ ನಡುವೆ ಪ್ರಯಾಣಿಸುವವರಿಗೆ ಇದು ದೊಡ್ಡ ಲಾಭ. ಕಡಿಮೆ ದರದಲ್ಲಿ ಪ್ರೀಮಿಯಂ ಅಂಬಾರಿ ಉತ್ಸವ, ಅಂಬಾರಿ ಡ್ರೀಮ್ ಕ್ಲಾಸ್ ಮುಂತಾದ ಎಸಿ ಸ್ಲೀಪರ್ ಬಸ್‌ಗಳಲ್ಲಿ ಕಡಿಮೆ ದರಕ್ಕೆ ಪ್ರಯಾಣಿಸುವ ಅವಕಾಶ ಸಿಗಲಿದೆ. ಸಾಮಾನ್ಯವಾಗಿ ದುಬಾರಿಯಾಗಿರುವ ಈ ಸೇವೆಗಳು ಈಗ ಹೆಚ್ಚಿನ ಜನರಿಗೆ ಕೈಗೆಟುಕುವಂತಾಗಿವೆ.

ಆಫ್‌ ಸೀಸನ್‌ನಲ್ಲಿ ಪ್ರಯಾಣ ಪ್ರೋತ್ಸಾಹ ಇದರ ಮುಖ್ಯ ಉದ್ದೇಶವಾಗಿದ್ದು, ಜನವರಿ-ಮಾರ್ಚ್ ಅವಧಿಯಲ್ಲಿ ಪ್ರವಾಸ, ಕುಟುಂಬ ಭೇಟಿಗಳು ಹಾಗೂ ತುರ್ತು ಪ್ರಯಾಣಗಳಿಗೆ ಹೊರಡುವವರಿಗೆ ಈ ದರ ಕಡಿತ ಅನುಕೂಲಕರ. ಅಲ್ಲದೆ ಖಾಸಗಿ ಬಸ್‌ಗಳಿಗೆ ಪರ್ಯಾಯ ಆಯ್ಕೆಯಾಗಿ ಇದೀಗ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಕ್ಕೂ ಉತ್ತೇಜನ ಸಿಗಲಿದೆ.

ಖಾಸಗಿ ಬಸ್‌ಗಳಿಗಿಂತ ಕಡಿಮೆ ದರದಲ್ಲಿ ಸರ್ಕಾರದ ವಿಶ್ವಾಸಾರ್ಹ ಸೇವೆ ಬಳಸುವ ಅವಕಾಶ ಪ್ರಯಾಣಿಕರಿಗೆ ದೊರೆಯುತ್ತದೆ. ಎಸಿ ಸ್ಲೀಪರ್‌ನಿಂದ ಹಿಡಿದು ನಾನ್-ಎಸಿ ರಾಜಹಂಸವರೆಗೂ ಎಲ್ಲ ವರ್ಗದ ಬಸ್‌ಗಳಲ್ಲಿ ದರ ಇಳಿಕೆ ಮಾಡಿರುವುದರಿಂದ ವಿದ್ಯಾರ್ಥಿಗಳು, ಉದ್ಯೋಗಸ್ಥರು, ಹಿರಿಯ ನಾಗರಿಕರು ಎಲ್ಲರಿಗೂ ಅನುಕೂಲವಾಗಲಿದೆ. ರಾತ್ರಿ ಪ್ರಯಾಣ ಮಾಡುವವರಿಗೆ ಸ್ಲೀಪರ್ ಬಸ್‌ಗಳಲ್ಲಿ ಕಡಿಮೆ ದರದಲ್ಲಿ ಆರಾಮದಾಯಕ ನಿದ್ರೆ ಮತ್ತು ಸುಗಮ ಪ್ರಯಾಣದ ಅನುಭವ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+