ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು-ನೀಲಕ್ಕಲ್ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್; ದರ, ಸಮಯ

|
Google Oneindia Kannada News

ಬೆಂಗಳೂರು, ನವೆಂಬರ್ 22; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಬೆಂಗಳೂರು-ನೀಲಕ್ಕಲ್ ಮಾರ್ಗದಲ್ಲಿ ರಾಜಹಂಸ, ವೋಲ್ವೋ ಬಸ್‌ಗಳನ್ನು ಓಡಿಸಲಿದೆ. ಡಿಸೆಂಬರ್ 1ರಿಂದ ಈ ಬಸ್‌ಗಳ ಸಂಚಾರ ಆರಂಭವಾಗಲಿದೆ.

ಕೆಎಸ್ಆರ್‌ಟಿಸಿ ಕೇಂದ್ರ ಕಚೇರಿ, ಬೆಂಗಳೂರು ಪ್ರಕಟಣೆ ಮೂಲಕ ಈ ಕುರಿತು ಮಾಹಿತಿ ನೀಡಿದೆ. ಜನರ ಅನುಕೂಲಕ್ಕಾಗಿ ಬೆಂಗಳೂರು-ನೀಲಕ್ಕಲ್ (ಪಂಪಾ-ಶಬರಿಮಲೆ) ಮಾರ್ಗದಲ್ಲಿ ಐಷಾರಾಮಿ ಬಸ್‌ಗಳನ್ನು ಓಡಿಸುತ್ತಿದೆ.

ಕರಾವಳಿ ಟೂರ್ ಪ್ಯಾಕೇಜ್; ದೇವಾಲಯಗಳಿಗೆ ಭೇಟಿ ಕೊಡಲು ದರ ಪಟ್ಟಿ ಕರಾವಳಿ ಟೂರ್ ಪ್ಯಾಕೇಜ್; ದೇವಾಲಯಗಳಿಗೆ ಭೇಟಿ ಕೊಡಲು ದರ ಪಟ್ಟಿ

ಡಿಸೆಂಬರ್ 1ರಿಂದ ಹೊಸದಾಗಿ ಈ ಬಸ್‌ಗಳ ಸಂಚಾರ ಆರಂಭಿಸಲಾಗುತ್ತಿದ್ದು, ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಬಸ್ ಸಂಚಾರದಿಂದ ಶಬರಿಮಲೆಗೆ ಹೋಗುವ ಭಕ್ತರಿಗೆ ಸಹ ಸಹಾಯಕವಾಗಲಿದೆ.

NWKRTC ಕರಾವಳಿ ಟೂರ್ ಪ್ಯಾಕೇಜ್; ದರ, ಮಾರ್ಗ NWKRTC ಕರಾವಳಿ ಟೂರ್ ಪ್ಯಾಕೇಜ್; ದರ, ಮಾರ್ಗ

KSRTC Rajahamsa And Volvo Bus To Bengaluru Nilakkal Fare Details

ವೇಳಾಪಟ್ಟಿ; ಬೆಂಗಳೂರು-ನೀಲಕ್ಕಲ್ (ಪಂಪಾ-ಶಬರಿಮಲೆ) ಮಾರ್ಗದಲ್ಲಿ ರಾಜಹಂಸ ಬಸ್ ಸಂಚಾರ ನಡೆಸಲಿದೆ. ವಯಸ್ಕರಿಗೆ ಈ ಬಸ್‌ನಲ್ಲಿ ಪ್ರಯಾಣ ದರ 1150 ರೂ.ಗಳು ಎಂದು ಕೆಎಸ್ಆರ್‌ಟಿಸಿ ಮಾಹಿತಿ ನೀಡಿದೆ.

ಕೇರಳ - ಬೆಂಗಳೂರು ಬಸ್ ದರ ಏರಿಕೆ; ಪ್ರಯಾಣಿಸುವ ಮುನ್ನ ಇರಲಿ ಗಮನಕೇರಳ - ಬೆಂಗಳೂರು ಬಸ್ ದರ ಏರಿಕೆ; ಪ್ರಯಾಣಿಸುವ ಮುನ್ನ ಇರಲಿ ಗಮನ

ಈ ಬಸ್ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ 13 ಗಂಟೆಗೆ ಹೊರಡಲಿದೆ. ನೀಲಕ್ಕಲ್ (ಪಂಪಾ-ಶಬರಿಮಲೆ)ಯನ್ನು 8.15ಕ್ಕೆ ತಲುಪಲಿದೆ. ನೀಲಕ್ಕಲ್‌ (ಪಂಪಾ-ಶಬರಿಮಲೆ) ಇಂದ 17 ಗಂಟೆಗೆ ಹೊರಡಲಿದೆ. ಬೆಂಗಳೂರಿಗೆ 12 ಗಂಟೆಗೆ ತಲುಪಲಿದೆ.

ಬೆಂಗಳೂರು-ನೀಲಕ್ಕಲ್ (ಪಂಪಾ-ಶಬರಿಮಲೆ) ವೋಲ್ವೋ ಬಸ್‌ ಸಂಚಾರವೂ ಡಿಸೆಂಬರ್ 1ರಿಂದ ಆರಂಭವಾಗುತ್ತಿದೆ. ವಯಸ್ಕರಿಗೆ ಪ್ರಯಾಣ ದರ 1490 ರೂ.ಗಳು ಎಂದು ನಿಗದಿ ಮಾಡಲಾಗಿದೆ.

ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ 14 ಗಂಟೆಗೆ ಬಸ್ ಹೊರಡಲಿದೆ. ನೀಲಕ್ಕಲ್‌ ಅನ್ನು 6.45ಕ್ಕೆ ತಲುಪಲಿದೆ. ನೀಲಕ್ಕಲ್‌ನಿಂದ 18 ಗಂಟೆಗೆ ಹೊರಡುವ ಬಸ್, ಬೆಂಗಳೂರು ನಗರವನ್ನು 9.45ಕ್ಕೆ ತಲುಪಲಿದೆ ಎಂದು ಕೆಎಸ್‌ಆರ್‌ಟಿಸಿ ಮಾಹಿತಿ ನೀಡಿದೆ.

ನಾಮ ನಿರ್ದೇಶನ ಪಡೆಯುವ ಬಗ್ಗೆ; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಎಲ್ಲಾ ನೌಕರರು/ ಅಧಿಕಾರಿಗಳಿಂದ ನಾಮ ನಿರ್ದೇಶನವನ್ನು ಪಡೆಯುವ ಬಗ್ಗೆ ಪ್ರಕಟಣೆ ಹೊರಡಿಸಿದೆ.

ತರಬೇತಿ ನೌಕರರೂ ಸೇರಿದಂತೆ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ನೌಕರರಿಂದ ಭವಿಷ್ಯ ನಿಧಿ, ಕೌಟುಂಬಿಕ ಪಿಂಚಣಿ, ಉಪಧನ ಮತ್ತು ಮರಣ-ವ-ನಿವೃತ್ತಿ ನಿಧಿ ಸಂಬಂಧ ನಾಮ ನಿರ್ದೇಶನಗಳನ್ನು ನಿಗದಿತ ನಮೂನೆಯಲ್ಲಿ ಪಡೆದು, ಪರಿಶೀಲಿಸಿ ನಂತರ ದೃಢೀಕರಿಸಿ ಅವರ ವೈಯಕ್ತಿಕ ಕಡತದಲ್ಲಿ ಇಟ್ಟುಕೊಳ್ಳುವುದು ಮತ್ತು ತತ್ಸಬಂಧ ನೌಕರರ ಸೇವಾ ಪುಸ್ತಕದಲ್ಲಿ ಸಹ ದಾಖಲಿಸಿ ದೃಢೀಕರಿಸುವುದು ಆದ್ಯ ಕರ್ತವ್ಯವಾಗಿರುತ್ತದೆ.

ಈ ಸಂಬಂಧ ಈಗಾಗಲೇ ಸಾಕಷ್ಟು ಸುತ್ತೋಲೆ/ ಸೂಚನೆಗಳನ್ನು ನೀಡಲಾಗಿದೆ. ನೇಮಕಾತಿ ಸಂದರ್ಭದಲ್ಲಿ ಅವಿವಾಹಿತರಾಗಿದ್ದು, ನಂತರದಲ್ಲಿ ಮದುವೆಯಾದ ನೌಕರರು/ ಅಧಿಕಾರಿಗಳು ನಾಮ ನಿರ್ದೇಶನವನ್ನು ಬದಲಾಯಿಸದೇ ಇದ್ದ ಪಕ್ಷದಲ್ಲಿ ಅಂತಹ ನೌಕರರನ್ನು ಗುರುತಿಸಿ, ಅವರಿಗೆ ತಿಳುವಳಿಕೆ ನೀಡಿ, ಅವರಿಂದ ಪರಿಷ್ಕೃತ ನಾಮ ನಿರ್ದೇಶನಗಳನ್ನು ಪಡೆಯುವುದು ಸಹ ಅವಶ್ಯವಿರುತ್ತದೆ.

ಈ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವುದು ಅಥವಾ ಕ್ರಮಬದ್ಧಗೊಳಿಸದೇ ಇರುವುದು ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಸುತ್ತೋಲೆ ಮೂಲಕ ಮಾಹಿತಿ ನೀಡಲಾಗಿದೆ. ಸೇವೆಯಲ್ಲಿರುವಾಗ ನಿಧನಹೊಂದಿದ ನೌಕರರ ಅವಲಂಬಿತರಿಗೆ ಅಂತಿಮ ಅಭ್ಯರ್ಥನಗಳನ್ನು ಪಾವತಿ ಮಾಡುವಾಗ ಸಮಸ್ಯೆ/ ತಕರಾರುಗಳು ಉಂಟಾಗಿ ವಿಳಂಬವಾಗುತ್ತಿರುವುದು ಅಥವಾ ವಿಷಯವು ನ್ಯಾಯಾಲಯದ ಮುಂದೆ ಹೋಗುವುದು/ ಬಾಕಿ ಇರುವುದು ಕಂಡುಬಂದಿದೆ ಎಂದು ತಿಳಿಸಲಾಗಿದೆ.

ತತ್ಸಂಬಂಧ ಇಲಾಖಾ ಮುಖ್ಯಸ್ಥರು/ ವಿಭಾಗೀಯ ನಿಯಂತ್ರಣಾಧಿಕಾರಿಗಳ ಸಭೆಯಲ್ಲಿ ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಎಲ್ಲಾ ನೌಕರರಿಂದ ಹೊಸದಾಗಿ/ ಪರಿಷ್ಕೃತ ನಾಮ ನಿರ್ದೇಶನವನ್ನು ಪಡೆಯಲು ಸೂಚಿಸಿದ್ದು, ಅದರಂತೆ ಮುಂದಿನ ಹದಿನೈದು ದಿನಗಳ ಅವಧಿಯಲ್ಲಿ ನಾಮನಿರ್ದೇಶನವನ್ನು ಪಡೆಯಲು ಕೆಲವು ನಿರ್ದೇಶನಗಳನ್ನು ನೀಡಲಾಗಿದೆ.

* ತರಬೇತಿ ನೌಕರರು ಸೇರಿದಂತೆ, ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ನೌಕರರ ವೈಯಕ್ತಿಕ ಕಡತ/ ಸೇವಾ ಪುಸ್ತಕವನ್ನು ಪರಿಶೀಲಿಸಿ, ನಾಮ ನಿರ್ದೇಶನಗಳನ್ನು ಮಾಡದೇ ಇರುವ ನೌಕರರ ಪಟ್ಟಿ ಮಾಡುವುದು.

* ಆ ರೀತಿ ಪರಿಶೀಲಿಸುವಾಗ, ನೌಕರರು ನೀಡಿರುವ ನಾಮ ನಿರ್ದೇಶನಗಳು ಕ್ರಮಬದ್ದವಾಗಿ ಇವೆಯೇ? ಎಂಬುದನ್ನು ಸಹ ಪರಿಶೀಲಿಸುವುದು.

* ಅದೇ ರೀತಿ ತಂದೆ/ ತಾಯಿ ಅಥವಾ ಬೇರೆಯವರ ಹೆಸರಿಗೆ (ಅಂದರೆ ಪತಿ/ ಪತ್ನಿ/ ಮಕ್ಕಳ ಹೆಸರು ಹೊರತುಪಡಿಸಿ) ನಾಮ ನಿರ್ದೇಶನ ಮಾಡಿರುವವರ ಪಟ್ಟಿಯನ್ನು ಸಹ ಮಾಡುವುದು.

* ನಾಮ ನಿರ್ದೇಶನ ಮಾಡದೇ ಇರುವ ನೌಕರರಿಂದ ನಾಮ ನಿರ್ದೇಶನ ಪಡೆದುಕೊಳ್ಳುವುದು.
ಪತಿ/ ಪತ್ನಿಯ ಹೊರತು ಇತರರ ಹೆಸರಿಗೆ ನಾಮ ನಿರ್ದೇಶನ ಮಾಡಿರುವ ನೌಕರರನ್ನು ವಿಚಾರಿಸಿ, ಅವರು ಮದುವೆಯಾಗಿದ್ದಲ್ಲಿ, ಪರಿಷ್ಕೃತ ನಾಮ ನಿರ್ದೇಶನಗಳನ್ನು ಪಡೆದುಕೊಳ್ಳುವುದು.

* ಅಲ್ಲದೇ ಈ ಹಿಂದೆ ನಾಮ ನಿರ್ದೇಶನ ಮಾಡಿದ ಕುಟುಂಬದ ಸದಸ್ಯರು ಮೃತಪಟ್ಟಿದ್ದಲ್ಲಿ ಸಹ ಪರಿಷ್ಕೃತ ನಾಮ ನಿರ್ದೇಶನಗಳನ್ನು ಪಡೆಯುವುದು. ಒಬ್ಬರಿಗಿಂತ ಹೆಚ್ಚು ಕುಟುಂಬದ ಸದಸ್ಯರನ್ನು ನಾಮ ನಿರ್ದೇಶನ ಮಾಡಿದ್ದಲ್ಲಿ, ಶೇಕಡವಾರು ಪ್ರಮಾಣವನ್ನು ನಮೂದಿಸಿರುವ ಬಗ್ಗೆ ಅವಶ್ಯ ಪರಿಶೀಲಿಸುವುದು.

* ನಾಮ ನಿರ್ದೇಶನ ಅಭಿಯಾನವನ್ನು ಯಶಸ್ವಿಯಾಗಿಸಲು ವಿಭಾಗ ಮಟ್ಟದಲ್ಲಿ ಸಹಾಯಕ/ ಆಡಳಿತಾಧಿಕಾರಿ ಮತ್ತು ಸಹಾಯಕ/ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿಗಳು ಮತ್ತು ಲೆಕ್ಕಪತ್ರ ಅಧಿಕಾರಿಗಳ ತಂಡವನ್ನು ರಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದು.

* ಈ ಕಾರ್ಯವನ್ನು ಮುಂದಿನ 15 ದಿನಗಳ ಒಳಗಾಗಿ ಪೂರ್ಣಗೊಳಿಸಿ, ಈ ಸುತ್ತೋಲೆಯೊಂದಿಗೆ ಲಗತ್ತಿಸಿರುವ ನಮೂನೆಯಲ್ಲಿ ಅನುಸರಣಾ ವರದಿಯನ್ನು ಈ ಕಚೇರಿಗೆ ಕಳುಹಿಸುವುದು.

ಭವಿಷ್ಯ ನಿಧಿ, ಕೌಟುಂಬಿಕ ಪಿಂಚಣಿ ಮತ್ತು ಉಪಧನ ನಾಮ ನಿರ್ದೇಶನವನ್ನು ನಿಗದಿತ ನಮೂನೆಯ ಕಾಲಂಗಳಲ್ಲಿ ಅಗತ್ಯವಿರುವ ವಿವರಗಳನ್ನು ತುಂಬಬೇಕಾಗಿದ್ದು, ಈ ಸಂಬಂಧ ಪರಿಣಿತ ಸಿಬ್ಬಂದಿ ಅಥವಾ ಮೇಲ್ವಿಚಾರಕರನ್ನು ನಿಯೋಜಿಸುವುದು ಮತ್ತು ಅವರು ನೌಕರರೊಂದಿಗೆ ಖುದ್ದಾಗಿ ಚರ್ಚಿಸಿ ನಾಮ ನಿರ್ದೇಶನಗಳನ್ನು ಪಡೆಯಬೇಕು ಎಂದು ತಿಳಿಸಲಾಗಿದೆ.

English summary
Karnataka State Road Transport Corporation (KSRTC) will start Rajahamsa and Volvo bus service to Bengaluru-Nilakkal via Pampa and Shabarimala route. Here are the fare details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X